ಮೂವರು ಸಚಿವರಿಗೆ ರಾಜ್ಯಪಾಲರ ಮಹಾಮಂಗಳಾರತಿ

ವಿಶ್ವ ಮಕ್ಕಳ ದಿನಾಚರಣೆ ಸಂಬಂಧ ಶುಕ್ರವಾರ (ನ 16) ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಸಚಿವರುಗಳಾದ ಆರ್ ಅಶೋಕ್, ಶೋಭಾ ಕರಂದ್ಲಾಜೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ನಡುವಳಿಕೆಯನ್ನು ಖಂಡಿಸಿ ರಾಜ್ಯಪಾಲರುಈ ರೀತಿ ಹೇಳಿದ್ದಾರೆ.
ನನ್ನನ್ನು ನೋಡಿ ನೀವು ಕಲಿಯಿರಿ. ಕಳೆದ 18 ವರ್ಷದಿಂದ ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಎಂದೂ ಗೈರು ಹಾಜರಾಗಲಿಲ್ಲ. ಅಲ್ಲದೇ ಸಮಾರಂಭಕ್ಕೆ ಮುಂಚಿತವಾಗಿ ಹೋಗಿರುತ್ತೇನೆ.
ಇನ್ನು ಮುಂದಾದರೂ ಸಚಿವರು ತಮ್ಮ ನಡುವಳಿಕೆಯನ್ನು ಬದಲಿಸಿಕೊಳ್ಳಲಿ. ಕಾರ್ಯಕ್ರಮಕ್ಕೆ ಬರಲಾಗದಿದ್ದರೆ ಒಪ್ಪಿಕೊಳ್ಳಲೇ ಬೇಡಿ ಎಂದು ಮೂವರು ಸಚಿವರ ಮೂಲಕ ರಾಜಕೀಯ ನಾಯಕರುಗಳಿಗೆ ರಾಜ್ಯಪಾಲ ಭಾರದ್ವಾಜ್ ಬುದ್ದಿಮಾತನ್ನು ಹೇಳಿದ್ದಾರೆ.
ಬೆಂಗಳೂರು ವಿವಿ ವಿಭಜನೆ ಮಾಡುವ ಪ್ರಸ್ತಾಪನೆ ಇದುವರೆಗೆ ನನ್ನಲ್ಲಿ ಬಂದಿಲ್ಲ. ಅಲ್ಲದೆ ವಿವಿಯ ಖಾಯಂ ಕುಲಪತಿ ಸ್ಥಾನಕ್ಕೆ ಯಾವುದೇ ಹೆಸರು ಶಿಫಾರಸುಗೊಂಡು ನನ್ನಲ್ಲಿ ಅನುಮೋದನೆಗೆ ಈವರೆಗೆ ಬಂದಿಲ್ಲ. ಒಂದು ವೇಳೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುವುದು ಯುವಕರಿಂದ. ಯುವಕರು ದೇಶ ಕಟ್ಟಲು ಮುಂದೆ ಬರಬೇಕು. ನೆಹರೂ ಮತ್ತು ಗಾಂಧಿ ಆದರ್ಶವನ್ನು ಯುವಕರು ಪಾಲಿಸಿಕೊಳ್ಳಬೇಕೆಂದು ಭಾರದ್ವಾಜ್ ಯುವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ. ಜಗದೀಶ್ ಶೆಟ್ಟರ್ ಒಬ್ಬ ಜಂಟಲ್ ಮ್ಯಾನ್. ನನ್ನ ಸಹಕಾರ ಅವರಿಗಿದೆ, ಆದರೆ ಜನರು ಬಿಜೆಪಿ ಸರಕಾರದ ಕಾರ್ಯವೈಖರಿಯ ಬಗ್ಗೆ ಸಮಾಧಾನ ಹೊಂದಿಲ್ಲ ಎಂದು ಭಾರದ್ವಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications