2013ರ ದೀಪಾವಳಿಗೆ ಚಿನ್ನದ ದರ ಢಂಢಮಾರ್

ಮೊನ್ನೆ ದೀಪಾವಳಿ ಸಂದರ್ಭದಲ್ಲಿ ರೀಟೇಲ್ ಖರೀದಿದಾರರು ಭಾರಿ ಪ್ರಮಾಣದಲ್ಲಿ ಚಿನ್ನದ ಖರೀದಿಗೆ ಮುಗಿಬಿದ್ದಿದ್ದರಿಂದ ಚಿನ್ನದ ಬೆಲೆ ಹೆಚ್ಚಾಗಿತ್ತು. ಅದು 32,000 ರೂ ಗಡಿಯಲ್ಲಿತ್ತು.
2011ರ ದೀಪಾವಳಿ ಸಂದರ್ಭದಲ್ಲಿ 10 ಗ್ರಾಂ ಚಿನ್ನದ ಬೆಲೆ 27,000 ರೂ ಗಡಿಯಲ್ಲಿತ್ತು. ಬರೋಬ್ಬರಿ 1 ವರ್ಷದಲ್ಲಿ ಆ ದರ 5,000 ರೂ ಹೆಚ್ಚಾಗಿ 32,000 ರೂ.ಗೆ ತಲುಪಿದೆ. ಅಂದರೆ ಶೇ. 15ರಷ್ಟು ಬೆಲೆ ಏರಿಕೆ ಆಗಿದೆ.
ಇನ್ನು ಮುಂದಿನ 1 ವರ್ಷದಲ್ಲಿ ನೀವೇ ಊಹಿಸಿಕೊಳ್ಳಿ... 2013ರ ದೀಪಾವಳಿ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 35,000 ರೂ ದಾಟಲಿದೆ. ಬೆಳ್ಳಿಯ ಬೆಲೆಯೂ ಅಷ್ಟೇ ಕೆಜಿಗೆ 80,000 ರೂ. ಆಗಲಿದೆ.
ಹೌದು, ಕಳೆದ 12 ವರ್ಷಗಳಿಂದಲೂ ಚಿನ್ನದ ದರ ಹೀಗೇ ಏರುಗತಿಯಲ್ಲೇ ಇದೆ. ಸೋ, ತಡವೇಕೆ? ಚಿನ್ನದ ಖರೀದಿಯ ಬಗ್ಗೆ ನಿಮ್ಮ ಲೆಕ್ಕಾಚಾರಗಳು ಇಂದಿನಿಂದಲೇ ಜಾರಿಯಲ್ಲಿರಲಿ. ಅಂದಹಾಗೆ ನಿನ್ನೆ 10 ಗ್ರಾಂ ಚಿನ್ನದ ಬೆಲೆ 31,700 ರೂ.












Click it and Unblock the Notifications