ವೈದ್ಯ ದಂಪತಿಯ ಕಲಹ: ಮುಂಗೋಪಿ ಪತ್ನಿ ಆತ್ಮಹತ್ಯೆ

ದುರ್ದೈವವೆಂದರೆ ತನ್ನ ಪತಿಯ ಹುಟ್ಟುಹಬ್ಬದಂದೇ ದಂತ ವೈದ್ಯೆ ನೇಣಿಗೆ ಶರಣಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೊಲೀಸರು ಜಗನ್ನಾಥ್ ಅವರನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆ ನಡೆಸಿದ್ದಾರೆ. ಸಿಲ್ಪಾ ಹಠಮಾರಿ/ಮುಂಗೋಪಿ ಆಗಿದ್ದೇ ಘಟನೆಗೆ ಕಾರಣವೆಂದು ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಯಶವಂತಪುರ ಪೈಪ್ ಲೈನ್ ರಸ್ತೆ ನಿವಾಸಿ ಶಿಲ್ಪಾ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಸೋಮವಾರ ಆಕೆಯ ಪತಿ ಜಗನ್ನಾಥ್ ಅವರ ಜನ್ಮ ದಿನವಿತ್ತು. ಮುಂಗಡವಾಗಿ ಬಟ್ಟೆ ಖರೀದಿಸುವಂತೆ ಪತಿ ತಿಳಿಸಿದ್ದರು. ಆದರೂ ಆಕೆ ಬಟ್ಟೆ ಖರೀದಿಸಿರಲಿಲ್ಲ. ಈ ವಿಷಯವಾಗಿ ದಂಪತಿ ಮಧ್ಯೆ ಕಲಹ ತಲೆಹಾಕಿತ್ತು.
ಬೇಗನೇ ಹುಟ್ಟುಹಬ್ಬ ಆಚರಿಸಿ, ವಿವೇಕನಗರದಲ್ಲಿರುವ ಆಕೆಯ ತವರು ಮನೆಗೆ ಹೋಗಲು ನಿರ್ಧರಿಸಿದ್ದರು. ಆದರೆ ಜಗನ್ನಾಥ್ ತಮ್ಮ ಕಾರನ್ನು ತೊಳೆಯುತ್ತಾ, ವಿಳಂಬ ಮಾಡಿದ್ದಾರೆ. ಶಿಲ್ಪಾಗೆ ಇಷ್ಟು ಸಾಕಿತ್ತು. ತಾನು ತೊಟ್ಟಿದ್ದ ದುಪ್ಪಟ್ಟದಿಂದಲೇ ಕುತ್ತಿಗೆ ನೇಣು ಬಿಗಿದುಕೊಂಡು ಇಹಲೋಕದ ವ್ಯವಹಾರ ಮುಗಿಸಿದ್ದಾರೆ ಎಂದು ಆಕೆಯ ಕುಂಟುಂಬಸ್ಥರು ಹೇಳಿದ್ದಾರೆ.
ಕೋಲಾರ ಮೂಲದ ಶಿಲ್ಪಾ: ಕೋಲಾರ ಮೂಲದವರಾಗಿದ್ದ ಶಿಲ್ಪಾ ಹಾಗೂ ಪತಿ ಡಾ. ಜಗನ್ನಾಥ್ ಅವರು ವಿವಾಹದ ನಂತರ ವೃತ್ತಿ ನಿಮಿತ್ತ ಲಖ್ನೋದಲ್ಲಿ ನೆಲೆಸಿದ್ದರು. ದೀಪಾವಳಿ/ಹುಟ್ಟುಹಬ್ಬ ಆದಚರಿಸಲು ದಂಪತಿ ಬೆಂಗಳೂರಿಗೆ ಬಂದಿದ್ದರು. ದಂಪತಿಗೆ ಒಂದೂವರೆ ವರ್ಷದ ಶುಭಾಂಗ್ ಎಂಬ ಪುತ್ರನಿದ್ದಾನೆ.












Click it and Unblock the Notifications