ಮನೆಮಾತಾಗಿದ್ದ ಖೇತಾನ್ ಫ್ಯಾನಿನ ಮಾಲೀಕ ಇನ್ನಿಲ್ಲ

ಖೇತಾನ್ ಸಮೂಹ ಕಂಪನಿಗಳ ಅಧ್ಯಕ್ಷ ಶ್ರೀ ಕೃಷ್ಣ ಖೇತಾನ್ ಅವರು ನವೆಂಬರ್ 4ರಂದು ವಿಧಿವಶವಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಹೆನ್ರಿ ಫೋರ್ಡ್, ಥಾಮಸ್ ಬಾಟಾ, ಸೋಯಿಚೈರೊ ಹೋಂಡಾ ಮತ್ತು ಜೆಎನ್ ಟಾಟಾ ಅವರಂತ ದಿಗ್ಗಜರು ಶ್ರೀ ಕೃಷ್ಣ ಖೇತಾನ್ ಅವರಿಗೆ ಪ್ರೇರಣೆಯಾಗಿದ್ದರು.
ರಾಜಸ್ಥಾನದ ಝುಂಝುನ್ ಗ್ರಾಮದಲ್ಲಿ ಹುಟ್ಟಿಬೆಳೆದ (ಜನನ- 1939ರ ಡಿಸೆಂಬರ್ 15) ಶ್ರೀ ಕೃಷ್ಣ ಖೇತಾನ್ ಅವರು ಮುಖ್ಯವಾಗಿ ಖೇತಾನ್ ಫ್ಯಾನ್ ಮೂಲಕ ಬಹು ಜನಪ್ರಿಯರಾಗಿದ್ದರು. ಚಿಕ್ಕ ವಯಸ್ಸಿಗೇ ಉದ್ಯಮ ಕ್ಷೇತ್ರಕ್ಕೆ ಅವರು ಕಾಲಿಟ್ಟಿದ್ದರು. ಫ್ಯಾನ್ ಜತೆಗೆ ಇತರೆ ಗೃಹೋಪಯೋಗಿ ವಸ್ತುಗಳು ಹಾಗೂ ವಿದ್ಯುದ್ದೀಪಗಳ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು.
ಖೇತಾನ್ ಪಂಖೆ: ಯಶಸ್ವಿ ಉದ್ಯಮಿಯಾಗಿದ್ದ ಶ್ರೀ ಕೃಷ್ಣ ಖೇತಾನ್ ಅವರು ಕೊಡುಗೈ ದಾನಿಗಳೂ ಆಗಿದ್ದರು. ಸೇಠ್ ಚಿರಂಜೀಲಾಲ್ ಖೇತಾನ್ ಟ್ರಸ್ಟ್, ಶ್ರೀ ವಿಷ್ಣುವರ್ಧನ ಹಾಸ್ಪಿಟಲ್ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಫೌಂಡೇಷನ್ ಹೆಸರಿನಲ್ಲಿ ಅವರು ಶಿಕ್ಷಣ, ಕ್ರೀಡೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ದಾನ ಮಾಡಿದ್ದಾರೆ. ತಾಯಿಯ ಸ್ಮರಣಾರ್ಥ ರಾಜಸ್ಥಾನದಲ್ಲಿ ದುರ್ಗಾದೇವಿ ಖೇತಾನ್ ಮಹಿಳಾ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ.












Click it and Unblock the Notifications