ಬೈಕ್ ಚಕ್ರಕ್ಕೆ ಸೀರೆ ಸುತ್ತಿಕೊಂಡು ಮಹಿಳೆ ಸಾವು

saree-gets-entangled-in-motorbike-wheel-woman-dies
ಮಂಗಳೂರು, ನ.13: ಸಾವು ಯಾವ ರೂಪದಲ್ಲಿರುತ್ತೋ ಆ ಯಮರಾಯನಿಗಷ್ಟೇ ಗೊತ್ತು. ಆಸ್ಪತ್ರೆಯಲ್ಲಿದ್ದ ತಾಯಿಯನ್ನು ನೋಡುವ ಆತುರದಲ್ಲಿ ಬೈಕ್ ಹತ್ತಿ ಹೋದ ಮಹಿಳೆಯೊಬ್ಬರು ಯಮಪುರಿಗೆ ಸೇರಿದ ದಾರುಣ ಘಟನೆ ಭಾನುವಾರ ನಡೆದಿದೆ.

ಮೃತ ಮಹಿಳೆಯನ್ನು ಮಂಗಳೂರಿನ ಕೊಡಿಕಲ್ ನಿವಾಸಿ, 45 ವರ್ಷದ ವಿಜಯಾ ಎಂದು ಗುರುತಿಸಲಾಗಿದೆ. ಎಜೆ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ತಾಯಿಯನ್ನು ವಿಚಾರಿಸಿಕೊಳ್ಳಲು ವಿಜಯಾ ಬೈಕೇರಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ವಿಜಯಾ ಮೊದಲು ಬಸ್ಸಿನಲ್ಲೇ ಆಸ್ಪತ್ರೆಗೆ ಹೋಗಲು ನಿಕರ್ಧರಿಸಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಸಂಬಂಧಿಕರೊಬ್ಬರು ಬಂದು ಅವಸರ ಮಾಡಿದರು. ಹಾಗಾಗಿ, ಸಂಬಂಧಿಯ ಬೈಕ್ ಹಿಂದೆ ಕುಳಿತು ಆಸ್ಪತ್ರೆಯತ್ತ ಹೊರಟರು.

ಆದರೆ ಮಾರ್ಗ ಮಧ್ಯೆ ವಿಜಯಾರ ಜೀವಕ್ಕಾಗಿ ಹೊಂಚುಹಾಕಿ ಕುಳಿತಿದ್ದ ಯಮರಾಯ ಯಾರೂ ಊಹಿಸದ ಹಾಗೆ ತನ್ನ ಕೆಲಸವನ್ನು ಸಾಧಿಸಿಯೇ ಬಿಟ್ಟ. ಶುಕ್ರವಾರ (ನ. 9) ಏನಾಯಿತೆಂದರೆ ವಿಜಯಾ ಅವರು ತೊಟ್ಟಿದ್ದ ಸೀರೆ ಹಿಂದಿನ ಚಕ್ರಕ್ಕೆ ಕ್ಷಣಾರ್ಧದಲ್ಲಿ ಸುತ್ತಿಕೊಂಡಿದೆ. ಅಷ್ಟೆ, ಅದು ಆಕೆಯ ಕುತ್ತಿಗೆಗೆ ಉರುಳಾಗಿ ಪರಿಣಮಿಸಿ, ಅರೆ ಜೀವವಾಗಿದ್ದಾರೆ.

ತಕ್ಷಣ ಆಕೆಯನ್ನು ಅವರು ತೆರಳಬೇಕಿದ್ದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಭಾನುವಾರ ಅವರು ಅಂತಿಮ ಉಸಿರೆಳೆದರು. ಅಪಘಾತ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತೀರಾ ನಿರ್ಲಕ್ಷ್ಯವಾಗಿ ವಾಹನಗಳಲ್ಲಿ ಓಡಾಡುವ ಮಹಿಳೆಯರಿಗೆ ಇದು ಎಚ್ಚರಿಕೆಯ ಪಾಠವಾಗಲಿ ಎಂದು ಆಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+