ಕಿಂಗ್ ಮಲ್ಯ ದೀಪಾವಳಿಗೆ ಸಂಬಳ ಕೊಟ್ರಾ, ಕೈಕೊಟ್ರಾ?

ಏಕೆಂದರೆ ಹಬ್ಬ ಎರಡನೆಯ ದಿನಕ್ಕೆ ಕಾಲಿಟ್ಟರೂ ಕಿಂಗ್ ಮಲ್ಯ ತಮ್ಮ ನೌಕರರಿಗೆ ಸಂಬಳ ನೀಡುವ ಬಗ್ಗೆ ಇನ್ನೂ ಹರಿ-ಶಿವಾ ಎಂದಿಲ್ಲ. ಖಚಿತ ವರ್ತಮಾನದ ಪ್ರಕಾರ ಕಿಂಗ್ ಮಲ್ಯ ಸಾಹೇಬರು ತಮ್ಮ ಸಿಬ್ಬಂದಿಯ ಬ್ಯಾಂಕ್ ಅಕೌಂಟುಗಳಿಗೆ ಇನ್ನೂ ಹಣ ಹಾಕಿಲ್ಲ.
ಇದರಿಂದ ನೂರಾರು ನೌಕರರ ಜೀವನ ಬೆಳಕಿನ ಹಬ್ಬದಂದು ಕತ್ತಲಲ್ಲಿ ಮುಳುಗಿದಂತಾಗಿದೆ. ಸುಮಾರು 3,000 ಮಂದಿ ಉದ್ಯೋಗಿಗಳು ದಿವಾಳಿಯೆದ್ದಿರುವ ಕಂಪನಿಯಿಂದ ಸಂಬಳವಿಲ್ಲದೆ ಪರದಾಡುವಂತಾಗಿದೆ.
ದೀಪಾವಳಿ ವೇಳೆಗೆ 3 ತಿಂಗಳ ಸಂಬಳವನ್ನಾದರೂ ನೀಡುವುದಾಗಿ ಆಶ್ವಾಸನೆ ನೀಡಿದ್ದ KFA ಸಿಇಒ ಸಂಜಯ್ ಅಗರವಾಲ್ ಪ್ರಸ್ತುತ ಎಲ್ಲಿದ್ದಾರೆ ಎಂದೇ ಗೊತ್ತಿಲ್ಲ. ಇದಕ್ಕೆ ವ್ಯತಿರಕ್ತವಾಗಿ ಮಲ್ಯ ಅವರು ನಿನ್ನೆ ತಮ್ಮ ಟ್ವಿಟ್ಟರ್ ಮೂಲಕ Happy Deepavali. May Goddess Lakshmi shower you with wealth, good health and happiness ಎಂದು ಟ್ವೀಟ್ ಮಾಡಿದ್ದಾರೆ.
ಆದರೆ KFA ಅನೇಕ ಉದ್ಯೋಗಿಗಳು ಆರೇಳು ತಿಂಗಳಿಂದ ಸಂಬಳಗಳಿಲ್ಲದೆ ಪಡದಾಡುತ್ತಿದ್ದಾರೆ. ಸಂಬಳ ಕೊಡದಿದ್ದರೆ ಮುಷ್ಕರಕ್ಕೆ ಮಾಡುತ್ತೇವೆ ಎಂದು ಸಿಬ್ಬಂದಿ ಗುಡುಗಿದಾಗ ಸಿಇಒ ಸಂಜಯ್ ಅಗರವಾಲ್ ಅವರನ್ನು ಸಮಾಧಾನ ಪಡಿಸಿ, ದೀಪಾವಳಿಗೆ ಖಂಡಿತ ಸಂಬಳ ಬಟವಾಡೆ ಮಾಡುವೆ ಎಂದು ಭರವಸೆ ನೀಡಿದ್ದರು.
ವಿಜಯ್ ಮಲ್ಯ ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಅಕ್ಟೋಬರ್ 1 ರಿಂದ KFA ವಿಮಾನಗಳ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.












Click it and Unblock the Notifications