ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.10 ಮಲಾಲ ಗೌರವ ದಿನಾಚರಣೆ : ವಿಶ್ವಸಂಸ್ಥೆ

By Mahesh
|
Google Oneindia Kannada News

ನ್ಯೂಯಾರ್ಕ್, ನ.9 : ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೇರಣೆಯಾಗಿರುವ ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫಾಝಿ ಗೌರವಾರ್ಥ ನ.10 ರಂದು 'ಮಲಾಲ ದಿನಾಚರಣೆ' ವಿಶ್ವದೆಲ್ಲೆಡೆ ಆಚರಿಸಲಾಗುವುದು ಎಂದು ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿನ್ ಮೂನ್ ಘೋಷಿಸಿದ್ದಾರೆ.

ನ.10ಕ್ಕೆ ಸರಿಯಾಗಿ ಮಲಾಲ ಮೇಲೆ ತಾಲಿಬಾನಿಗಳು ದಾಳಿ ಮಾಡಿ 30 ದಿನವಾಗುತ್ತದೆ. ನ. 10ರಂದು ವಿಶ್ವದೆಲ್ಲೆಡೆ ಮಲಾಲ ದಿನ ಆಚರಿಸಿ ಶಿಕ್ಷಣದ ಮಹತ್ವ ಸಾರಿದ ಮಲಾಲಳಿಗೆ ವಿಶ್ವದ ಮಹಿಳೆಯರ ಸಬಲೀಕರಣಕ್ಕೆ ಈ ದಿನ ಇನ್ನಷ್ಟು ಶಕ್ತಿ ತುಂಬಲಿ ಎಂದು ವಿಶ್ವಸಂಸ್ಥೆ ಅಧ್ಯಕ್ಷ ಬಾನ್ ಕಿ ಮೂನ್ ಹೇಳಿದ್ದಾರೆ.

UN announces November 10 to be celebrated as Malala Day

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ವಿಶ್ವಸಂಸ್ಥೆಯ ಶಿಕ್ಷಣ ಅಭಿಯಾನಕ್ಕೆ ಮಲಾಲ ದಿನಾಚರಣೆ ನಾಂದಿಯಾಗಲಿದೆ ಮತ್ತು ಶಿಕ್ಷಣ ಕೆಲವೇ ಮಂದಿಯ ಅಡಿಯಾಳಲ್ಲ ಎಂದು ಮೂನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ವಿಶ್ವ ಶಿಕ್ಷಣ ವಿಶೇಷ ನಿಯೋಗ ಶುಕ್ರವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದೆ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ವಾಸ್ತವವಾಗಿ ಪರಿವರ್ತಿಸುತ್ತೇನೆ ಎಂದು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ವಿಶ್ವಸಂಸ್ಥೆಯ ಶಿಕ್ಷಣ ಅಭಿಯಾನಕ್ಕೆ ಮಲಾಲ ದಿನಾಚರಣೆ ನಾಂದಿಯಾಗಲಿದೆ ಮತ್ತು ಶಿಕ್ಷಣ ಕೆಲವೇ ಮಂದಿಯ ಅಡಿಯಾಳಲ್ಲ ಎಂದು ಮೂನ್ ತನ್ನ ಘೋಷಣೆಯಲ್ಲಿ ಹೇಳಿದ್ದಾರೆ.

ಅಕ್ಟೋಬರ್ 9 ರಂದು ಮಲಾಲ ಶಾಲೆಯಿಂದ ಹಿಂತಿರುಗುತ್ತಿದ್ದ ವೇಳೆ ತಾಲಿಬಾನಿಗಳು ಆಕೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಗೆ ಪಾಕಿಸ್ತಾನದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ನಂತರ ಅಲ್ಲಿಂದ ಆಕೆಯನ್ನು ಲಂಡನ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲಾಲ ಈಗ ಚಿಕಿತ್ಸೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ಬಗ್ಗೆ ಈ 15 ವರ್ಷದ ದಿಟ್ಟ ಬಾಲಕಿ ಹೋರಾಡುತ್ತಿದ್ದಾಳೆ.

ಪಾಕಿಸ್ತಾನದ ಶಾಂತಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಮಲಾಲ ಕನಸಿಗೆ ತಾಲಿಬಾನಿಗಳು ಅಡ್ಡ ನಿಂತಿದ್ದಾರೆ.

ಮಲಾಲ ಎಂಬ ಆಶಾಕಿರಣ: ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮಿಂಗೋರಾ ಎಂಬ ಸಣ್ಣ ಪಟ್ಟಣದಲ್ಲಿ ಮಲಾಲ ಹುಟ್ಟಿದ್ದು ಜುಲೈ 11, 1997. ತಾಲಿಬಾನಿಗಳ ಹುಟ್ಟೂರಾದ ಅಫಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಈ ಕಣಿವೆಯಲ್ಲಿ ಜನ ಜೀವನ ಕಷ್ಟಕರ.

ಕವಿ, ಶಿಕ್ಷಕನಾಗಿರುವ ಮಲಾಲ ತಂದೆ ಜಿಯಾಯುದ್ದಿನ್ 'ಖುಷಾಲ್ ಪಬ್ಲಿಕ್ ಸ್ಕೂಲ್' ಎಂಬ ಹೆಣ್ಣುಮಕ್ಕಳ ಶಾಲೆ ನಡೆಸುತ್ತಿದ್ದರು. ಮಗಳನ್ನು ಡಾಕ್ಟರ್ ಅಥವಾ ಭವಿಷ್ಯದ ರಾಜಕಾರಣಿ ಮಾಡುವ ಕನಸು ಹೊತ್ತಿದ್ದಾರೆ.

2009ರಲ್ಲಿ ಮಲಾಲಳಿಗೆ ಬಿಬಿಸಿಯ ಉರ್ದು ಪತ್ರಿಕೆಗೆ ಡೈರಿ ಬರೆಯುವ ಅವಕಾಶ ಸಿಕ್ಕಿತ್ತು. 11ನೇ ವಯಸ್ಸಿನಲ್ಲೇ ತಾಲಿಬಾನಿಗಳ ವಿರುದ್ಧ ಬಹಿರಂಗವಾಗಿ ಭಾಷಣ ಮಾಡಿದ ಮಲಾಲ, ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿದಳು.

ಸ್ವಾತ್ ಕಣಿವೆಯಲ್ಲಿರುವ ಯಾವ ಹೆಣ್ಣುಮಕ್ಕಳೂ ಶಾಲೆಗಳಿಗೆ ಹೋಗಬಾರದೆಂದು ತಾಲಿಬಾನಿಗಳು ಕಟ್ಟಪ್ಪಣೆ ಹೊರಡಿಸಿದರೂ ಲೆಕ್ಕಿಸದೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ ಈ ಪುಟ್ಟ ಹೋರಾಟಗಾರ್ತಿಗೆ ತಾಲಿಬಾನಿ ರಕ್ಕಸರು ಗುಂಡಿಕ್ಕಿ ಕೊಲ್ಲಲು ವಿಫಲ ಯತ್ನ ನಡೆಸಿದರು. ಅದೃಷ್ಟವಶಾತ್ ಈ ದೇವರ ಕೂಸು ಸಹೃದಯಿಗಳ ಹಾರೈಕೆಯಿಂದ ಬದುಕುಳಿದೆ.

I have a new dream ... I must be a politician to save this country. There are so many crises in our country. I want to remove these crises. My purpose is to serve humanity. ಎನ್ನುವ ಮಲಾಲಳ ಬೆನ್ನ ಹಿಂದೆ ವಿಶ್ವಸಂಸ್ಥೆ ನಿಂತಿದೆ.

English summary
The bravery of teenage Pakistani education activist Malala Yousafzai has inspired everyone. Now, United Nations has decided to honour Malala and her work. UN Secretary General Ban Ki-Moon has announced that Nov 10, 2012 will be celebrated as Malala Day world over, as it marks the 30-day anniversary of the Taliban attack on the 15-year-old education campaigner from Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X