ಭ್ರಷ್ಟರಿಗೆ ಚುರುಕು ಮುಟ್ಟಿಸಿದ ಲೋಕಾಯುಕ್ತ

ಬೆಂಗಳೂರು, ನ.8: ಆಕ್ರಮ ಆಸ್ತಿ ಗಳಿಸಿ ಮೆರೆಯುತ್ತಿದ್ದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಗುರುವಾರ(ನ.8) ಚುರುಕು ಮುಟ್ಟಿಸಿದ್ದಾರೆ. ಮುಳುಬಾಗಿಲು ಕ್ಷೇತ್ರದ ಶಾಸಕ ಅಮರೇಶ್ ಅವರ ಆಪ್ತ ಸಹಾಯಕ ಸೇರಿದಂತೆ ಹಲವು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ನಡೆಸಲಾದ ದಾಳಿಯಲ್ಲಿ ಶಾಸಕರ ಆಪ್ತ ಸಹಾಯಕ, ಜಿಪಂ ಸಹಾಯಕ ಇಂಜಿನಿಯರ್, ನಗರ ಸಭೆ ಮಾಜಿ ಅಧ್ಯಕ್ಷ, ಜಿಪಂ ಮುಖ್ಯಾಧಿಕಾರಿ, ಉಪನ್ಯಾಸಕ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಿಕ್ಕಿ ಬಿದ್ದಿದ್ದಾರೆ. ಈ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳಿಂದ ಅಪಾರ ಪ್ರಮಾಣ ಆಸ್ತಿ ಪಾಸ್ತಿ ವಶಪಡಿಸಿಕೊಳ್ಳಲಾಗಿದೆ.

ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗಳು:

* ಚಾಮರಾಜನಗರ ನಗರ ಸಭೆ ಮಾಜಿ ಅಧ್ಯಕ್ಷ ಎನ್ . ನಂಜುಂಡಸ್ವಾಮಿ
* ಕೋಲಾರ ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ರವೀಂದ್ರ
* ಮುಳುಬಾಗಿಲು ಶಾಸಕ ಅಮರೇಶ್ ಆಪ್ತ ಸಹಾಯಕ ಸುಬ್ರಮಣ್ಯ ಪಿ
* ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪಂಚಾಯರ್ ಸಿಇಒ ಕಾರಿ ಉಜನಪ್ಪ ಬಂಗೇರಾ
* ಬಿಜಾಪುರ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಜಯನಾಮ ಚೌರ್

ಆಪ್ತ ಸಹಾಯಕ ಸುಬ್ರಮಣ್ಯ ಪಿ: ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಲೋಕಾಯುಕ್ತ ಎಸ್ ಪಿ ಸುಧಾಕರ್ ಹಾಗೂ ಡಿಎವೈಎಸ್ ಪಿ ನಾಗರಾಜ್ ನೇತೃತ್ವದಲ್ಲಿ ಮುಳಬಾಗಿಲಿನಲ್ಲಿ ಎರಡು ಕಡೆ ದಾಳಿ ನಡೆಸಿ ಭಾರಿ ಪ್ರಮಾಣದ ಅಸ್ತಿ ಪಚ್ಚೆ ಹಚ್ಚಲಾಗಿದೆ.

ಮುತ್ಯಾಲ ಪೇಟೆಯಲ್ಲಿರುವ ಸುಬ್ರಮಣ್ಯ ನಿವಾಸದಲ್ಲಿ ಅಪಾರ ಪ್ರಮಾಣದ ದಾಖಲೆಗಳು ಸಿಕ್ಕಿದೆ. ಬ್ಯಾಂಕ್ ಖಾತೆ ವಿವರ, ಬೇನಾಮಿ ಹೆಸರಿನಲ್ಲಿರುವ ನಿವೇಶನಗಳ ಕಡತ, ನಗದು ವಶಪಡಿಸಿಕೊಳ್ಳಲಾಗಿದೆ. ಸುಬ್ರಮಣ್ಯ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿ ಅಪಾರ ಆಸ್ತಿ ಗಳಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿದ್ದರು.

ಇದೇ ಮುತ್ಯಾಲ ಪೇಟೆಯಲ್ಲಿರುವ ಜಿಪಂ ಎಇ ರವೀಂದ್ರ ಅವರ ಮನೆ ಮೇಲೆ ಡಿವೈಎಸ್ ಪಿ ನಾರಾಯಣ್ ಹಾಗೂ ಇನ್ಸ್ ಪೆಕ್ಟರ್ ಲೋಕೇಶ್ವರ್ ದಾಳಿ ನಡೆಸಿ ಭಾರಿ ಪ್ರಮಾಣದ ದಾಖಲೆ ವಶಪಡಿಸಿಕೊಂಡಿದ್ದಾರೆ. ರವೀಂದ್ರ ಅವರ ಮೂರು ಅಂತಸ್ತಿನ ಮನೆ ಸುಮಾರು ಒಂದೂವರೆ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.

ನಂಜುಂಡಸ್ವಾಮಿ: ಚಾಮರಾಜನಗರ ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ನಂಜುಂಡಸ್ವಾಮಿ ಅವರ ಅಂಬೇಡ್ಕರ್ ನಗರದ ನಿವಾಸ, ಕಚೇರಿ, ಗ್ಯಾಸ್ ಏಜೆನ್ಸಿ, ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಅಕ್ರಮ ಗ್ಯಾಸ್ ಏಜೆನ್ಸಿ ಹೊಂದಿದ್ದು, ಈ ಹಿಂದೆ ಕೂಡಾ ಲಂಚ ನೀಡುವ ವೇಳೆ ಸಿಕ್ಕಿಬಿದ್ದಿದ್ದರು.

ಉಜನಪ್ಪ ಬಂಗೇರ: ಲೋಕಾಯುಕ್ತ ಎಸ್ಪಿ ಲಿಂಗಾರೆಡ್ಡಿ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ಸಿಇಒ ಉಜನಪ್ಪ ಬಂಗೇರ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ನೂತನ್ ಕಾಲೇಜು ಸಮೀಪದ ಎಲ್ ಐಸಿ ಕಾಲೋನಿಯಲ್ಲಿರುವ ಮನೆ ಮೇಲೂ ದಾಳಿ ನಡೆದಿದೆ. ಚನ್ನಗಿರಿ ತಾಪಂ ಸಿಇಒ ಆಗಿದ್ದಾಗಲೂ ಭ್ರಷ್ಟಾಚಾರದ ಆರೋಪ ಎದುರಿಸಿದ್ದರು.

ಉಳಿದಂತೆ, ಬಾಗಲಕೋಟೆಯ ಎಂಪಿ ನಾಡಗೌಡ ವೈದ್ಯಕೀಯ ಕಾಲೇಜೊಂದರ ಉಪನ್ಯಾಸಕ ಗಿರೀಶ್ ಚೌರ್, ಬಿಜಾಪುರ ಜಿಲ್ಲಾ ಪಂಚಾಯರ್ ಮುಖ್ಯ ಲೆಕ್ಕಾಧಿಕಾರಿ ವಿಜಯನಾಮಚೌರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+