ಕಿಂಗ್ ಫಿಷರ್ ಗೆ ಅಂತಿಮ ಗಡುವು ನೀಡಿದ ಎಸ್ ಬಿಐ

Kingfisher won't fly, if doesn't get capital by Nov 30: SBI
ಬೆಂಗಳೂರು, ನ.7 : ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಗೆ ಸಿಕ್ಕಾಪಟ್ಟೆ ಸಾಲ ಕೊಟ್ಟಿರುವ ಎಸ್ ಬಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 30ರೊಳಗೆ ಸಾಲ ತೀರಿಸದಿದ್ದರೆ ಕಿಂಗ್ ಫಿಷರ್ ವಿಮಾನ ಹಾರಾಡಲು ಬಿಡುವುದಿಲ್ಲ ಎಂದು ಎಸ್ ಬಿಐ ಎಚ್ಚರಿಸಿದೆ.

ಕಿಂಗ್ ಫಿಷರ್ ಸಂಸ್ಥೆಗೆ ಈಗ ಕೊಟ್ಟಿರುವ ಅವಕಾಶಗಳು, ಸಾಲ ಹಿಂತಿರುಗಿಸುವ ಅವಧಿಯೇ ಹೆಚ್ಚಾಗಿದೆ. ಇನ್ನು ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಕಂಪನಿ ತನ್ನ ಕಾರ್ಯ ನಿರ್ವಹಣೆ ಮರೆತಿದೆ. ಬಂಡವಾಳ ಸಿಗದೆ ಕಿಂಗ್ ಫಿಷರ್ ಮ್ಯಾನೇಜ್ಮೆಂಟ್ ತತ್ತರಿಸಿದೆ.

ನವೆಂಬರ್ 30 ರ ತನಕ ಕಿಂಗ್ ಫಿಷರ್ ಗೆ ಗಡುವು ನೀಡಲಾಗಿದ್ದು, ಸಾಲ ಹಿಂತಿರುಗಿಸಲು ವಿಫಲವಾದರೆ, ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೇರ್ಮನ್ ಪ್ರತೀಪ್ ಚೌಧುರಿ ಹೇಳಿದ್ದಾರೆ.

ಸುಮಾರು 7,057 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ

ಈ ಮೊದಲು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು. ಡಿಜಿಸಿಎ ಕಿಂಗ್ ಫಿಷರ್ ಹಾರಾಟ ಪರವಾನಿಗೆ ರದ್ದು ಮಾಡಿತ್ತು.

ಈ ವರ್ಷದ ಡಿಸೆಂಬರೊಳಗೆ ನಾಲ್ಕು ತಿಂಗಳ ಸಂಬಳವನ್ನು ಎಲ್ಲ ಸಿಬ್ಬಂದಿಗಳಿಗೆ ನೀಡುವುದಾಗಿ ಅ.25 ರಂದು ಕಿಂಗ್ ಫಿಷರ್ ಸಂಸ್ಥೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡಿರಲಿಲ್ಲ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ.

ಕಿಂಗ್ ಫಿಷರ್ ಸಂಸ್ಥೆ ಸುಮಾರು 7 ಸಾವಿರ ಕೋಟಿಗೂ ಅಧಿಕ ಸಾಲ ಹೊಂದಿದೆ. ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+