ಟೆಕ್ಕಿಗಳಿಗಾಗಿ ಬಿಬಿಎಂಪಿಯಿಂದ ಮರ ಮಾರಣಹೋಮ

ಅಲಿ ಅಸ್ಗರ್ ರಸ್ತೆಯ JP Techno Parks ಸಾಫ್ಟ್ ವೇರ್ ಕಂಪನಿ ಸಿಬ್ಬಂದಿಯ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು BBMP ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಗಿಳಿದು ಕ್ಷಣಾರ್ಧದಲ್ಲಿ 'ಸದರಿ ಜಾಗದಲ್ಲಿ ಮರವೇ ಇರಲಿಲ್ಲ' ಎಂದು ಬೃಹತ್ ಮರವನ್ನು ಕಿತ್ತೊಗೆದಿದ್ದಾರೆ.
ನಿಲಂ ಸೈಕ್ಲೋನ್ ಮಳೆ ಮೊನ್ನೆ ಒಂದು ದಿನದ ಮಟ್ಟಿಗೆ ನಗರವನ್ನು ಸ್ಥಬ್ದಗೊಳಿಸಿದ್ದ ಸಂದರ್ಭದಲ್ಲಿ ಯಾರಿಗೂ ಅನುಮಾನಬಾರದಂತೆ ಒಂದೆಲೆಯೂ ಸ್ಥಳದಲ್ಲಿಲ್ಲದಂತೆ ಮರವನ್ನು ತೆರವುಗೊಳಿಸಿ, ಸದರಿ ಅಧಿಕಾರಿಗಳು ಕೃತಾರ್ಥರಾಗಿದ್ದಾರೆ.
JP Techno Parks ಕಂಪನಿಯ ಸಿಬ್ಬಂದಿಯೇ ಹೇಳುವಂತೆ ತಮ್ಮ ಭದ್ರತಾ ಕೊಠಡಿಯ ಪಕ್ಕದಲ್ಲೇ ಸದರಿ ಮರ ಬಾಗಿಗೊಂಡಿದ್ದರಿಂದ ಅದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಹಿಂದೆಯೂ ಆ ಬೃಹತ್ ಮರದ ರೆಂಬೆಕೊಂಬೆಗಳನ್ನು ಕಂಪನಿಯ ಅಂದಕ್ಕೆ ತಕ್ಕಂತೆ ಟ್ರಿಮ್ ಮಾಡಲಾಗಿತ್ತು. ಈಗ ಸಂಪೂರ್ಣವಾಗಿ ಮರವನ್ನೇ ಕಡಿದುಹಾಕಲಾಗಿದೆ.
'ಈ ಮರ ಮಾರಣಹೋಮಕ್ಕೆ ಮೊನ್ನೆ ರಾಜ್ಯೋತ್ಸವದಂದು ಬೆಳಗ್ಗೆ ಶುಭ ಮಹೂರ್ತ ನಿಗದಿಯಾಗಿತ್ತು. ಶಿಸ್ತಾಗಿ ಬಂದ ಅಧಿಕಾರಿ-ಸಿಬ್ಬಂದಿ ಮರದ ಅವಶೇಷವೂ ಸಿಗದಂತೆ ಎಲ್ಲವನ್ನೂ ತೆರವುಗೊಳಿಸಿದ್ದಾರೆ' ಎಂದು ಕಂಪನಿಯ ಪಕ್ಕದಲ್ಲೇ ಇರುವ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ದೂರಿದ್ದಾರೆ.












Click it and Unblock the Notifications