ವಿವೇಕಾನಂದ, ದಾವೂದ್ IQ ಒಂದೇ ಆದರೆ ಗಡ್ಕರಿದು?

swami-vivekanand-dawood-iq-level-same-says-gadkari
ಭೋಪಾಲ್, ನ.5: ಯಾಕೋ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗೆ ಗ್ರಹಚಾರ ಸರಿಯಿಲ್ಲ ಎನಿಸುತ್ತಿದೆ. ದಾರ್ಶನಿಕ ಸ್ವಾಮಿ ವಿವೇಕಾನಂದರು ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಿದ್ದಾರೆ. ಅದು ಸಕಾರಣವಾಗಿಯೇ ಇದ್ದರೂ, ಗೋಕುಲಾಷ್ಠಮಿಗೂ ಇಮಾಮ್ ಸಾಬೀಗೂ ಎತ್ತಣ ಸಂಬಂಧ? ಎನ್ನುವಂತಿದೆ.

'ಬುದ್ಧಿಮತ್ತೆ ವಿಷಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಪಾತಕಿ ದಾವೂದ್ ಇಬ್ರಾಹಿಂ ಇಬ್ಬರದೂ ಒಂದೇ ತೂಕ. ಆದರೆ ವಿವೇಕಾನಂದರು ತಮ್ಮ ಬುದ್ಧಿಯನ್ನು intelligence quotient -IQ) ಸಕಾರಾತ್ಮಕವಾಗಿ/ರಚನಾತ್ಮಕವಾಗಿ ಬಳಸಿಕೊಂಡರು. ಪಾತಕಿ ದಾವೂದ್ ಮಾತ್ರ ದೃಷ್ಕೃತ್ಯಗಳಿಗೆ ಬಳಸಿಕೊಂಡು' ಎಂದು ಗಡ್ಕರಿ ವಿಷಾದಿಸಿದ್ದಾರೆ.

ಭ್ರಷ್ಟಾಚಾರ ಆರೋಪಗಳಿಗೆ ಸಿಕ್ಕಿ ಹೈರಾಣವಾಗಿರುವ ಹೊತ್ತಿನಲ್ಲಿ ಪಕ್ಷದ ಹಾಲಿ ಅಧ್ಯಕ್ಷ ನಿತಿನ್ ಗಡ್ಕರಿಗೆ ಇದೆಲ್ಲ ಬೇಕಿತ್ತಾ!? ಎಂದು ವಿವೇಕಾನಂದರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಿವೇಕಾನಂದರು ರಾಷ್ಟ್ರವನ್ನು ಕಟ್ಟುವ, ಯುವಜನತೆಯನ್ನು ಬಡಿದೆಬ್ಬಿಸುವ ಕಾರ್ಯದಲ್ಲಿ ತೊಡಗಿದರೆ ದಾವೂದ್ ರಾಷ್ಟ್ರವನ್ನು ವಿಧ್ವಂಸಗೊಳಿಸುವ, ಯುವಕರನ್ನು ಭಯೋತ್ಪಾದನೆಯಲ್ಲಿ ತೊಡಗಿಸುವ ಹೀನಾಯ ಕೆಲಸದಲ್ಲಿ ತೊಡಗಿದ್ದಾನೆ' ಎಂದು ಗಡ್ಕರಿ ಹೇಳಿದ್ದಾರೆ.

'ಮನಃಶ್ಯಾಸ್ತ್ರದ ಪ್ರಕಾರ ಸ್ವಾಮಿ ವಿವೇಕಾನಂದ ಮತ್ತು ದಾವೂದ್ ಇಬ್ರಾಹಿಂನ IQ ಮಟ್ಟವನ್ನು ಅಳೆದರೆ ಇಬ್ಬರದೂ ಬಹುತೇಕ ಸರಿಸಮವಾಗಿದೆ ಎಂದ ಗಡ್ಕರಿ ಜಾತಿ, ಮತ, ಭಾಷೆ ಮತ್ತು ಲಿಂಗದ ಆಧಾರದಲ್ಲಿ ಜನರನ್ನು ಅಳೆಯುವುದು ಸರ್ವತಾ ಸಾಧುವಲ್ಲ' ಎಂದರು. '21ನೇ ಶತಮಾನದಲ್ಲಿ ಬುದ್ಧಿಮತ್ತೆಯದ್ದೇ ಪರಮಾಧಿಪತ್ಯ. ಅದಕ್ಕೆ ಅದ್ಭುತ ಭವಿಷ್ಯ ಇದೆ' ಎಂದು ಗಡ್ಕರಿ ಇದೇ ಸಂದರ್ಭದಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+