ಗರ್ಭಿಣಿ ಪತ್ನಿಯ ಹತ್ಯೆ, ತಾನೂ ನೇಣಿಗೆ ಶರಣು

ಪರಬನಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ಚಿತ್ರಾ ಪಾಟೀಲ್ ಹತ್ಯೆಗೀಡಾದ ಮಹಿಳೆ. ಖಾಸಗಿ ಸಂಸ್ಥೆಯ ಉದ್ಯೋಗಿ ಪ್ರಶಾಂತ್ ಪಾಂಡುರಂಗ ಪಾಟೀಲ್, ಪತ್ನಿ ಚಿತ್ರಾರನ್ನು ಉಸಿರುಗಟ್ಟಿಸಿ, ಸಾಯಿಸಿ ತಾನೂ ನೇಣಿಗೆ ಶರಣಾಗಿದ್ದಾನೆ.
ಚಿತ್ರಾ ಅಕ್ರಮ ಸಂಬಂಧ ಹೊಂದಿದ್ದಾಳೆ ಆರೋಪಿಸಿ, ಪತಿರಾಯ ಪ್ರಶಾಂತ್ ಪಾಂಡುರಂಗ ಸದಾ ಆಕೆಯೊಂದಿಗೆ ಜಗಳ ತೆಗೆಯುತ್ತಿದ್ದ. ಇದರಿಂದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಚಿತ್ರಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಅಲ್ಲಿಗೆ ತೆರಳಿದ ಪ್ರಶಾಂತ್ ಪಾಂಡುರಂಗ ಆಕೆಯ ಬಾಯೊಳಗೆ ಕಸಕಡ್ಡಿ ತುರುಕಿ ಸಾಯಿಸಿದ್ದಾನೆ. ಚಿತ್ರಾ ಶವ ಸಂಪೂರ್ಣವಾಗಿ ಬೆತ್ತಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
3 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಚಿತ್ರಾ ಹತ್ಯೆಗೈದ ಬಳಿಕ ಪ್ರಶಾಂತ್ ಪಾಂಡುರಂಗ ನಾಸಿಕ್ ನಲ್ಲಿರುವ ತನ್ನ ಮನೆಗೆ ವಾಪಸಾಗಿ ಶುಕ್ರವಾರ ಬೆಳಗಿನ ಜಾವದಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ.
2007ರಲ್ಲಿ ಪೊಲೀಸ್ ಸೇವೆಗೆ ಭರ್ತಿಯಾಗಿದ್ದ ಚಿತ್ರಾ, 2010ರಲ್ಲಿ ಪ್ರಶಾಂತ್ ಪಾಂಡುರಂಗನನ್ನು ಮದುವೆಯಾಗಿದ್ದರು.












Click it and Unblock the Notifications