ಇವರದು 87 ವರ್ಷದ ದಾಂಪತ್ಯ: ತುಂಟ ನಗೆ ಮಾಸಿಲ್ಲ
ಪಂಜಾಬ್, ನ.2: ಪ್ರೀತಿ-ಪ್ರೇಮದಲ್ಲಿ ಮಿಂದು ದಾಂಪತ್ಯವನ್ನು ಸುದೀರ್ಘ ಕಾಲ ಉಳಿಸಿಕೊಳ್ಳುವ ಮಾತು ಹಾಗಿರಲಿ ಪ್ರೇಮದ ಕಾವು ಆರುವ ಮುನ್ನವೇ ಪ್ರೇಮಿಯನ್ನು ಪರಲೋಕಕ್ಕೆ ಪಾರ್ಸೆಲ್ ಮಾಡುವ ಇಂದಿನ ದಿನಗಳಲ್ಲಿ ಪಂಜಾಬಿನ ಜೋಡಿಯೊಂದು 87 ವರ್ಷ ಕಾಲ ತನ್ನ ದಾಂಪತ್ಯವನ್ನು ಪೋಷಿಸಿಕೊಂಡು ಬಂದಿದೆ. ಮತ್ತು ಈ ಜೋಡಿಯ ಮುಖದ ಮೇಲಿನ ತುಂಟ ನಗೆ ಇನ್ನೂ ಮಾಸಿಲ್ಲ!
ಅಮರ ಪ್ರೇಮಕ್ಕೆ ಮಾದರಿಯಾಗಬಹುದಾದ ಈ ಅನುರೂಪದ ದಂಪತಿ ಸದ್ಯ ಲಂಡನ್ನಿನಲ್ಲಿ (Bradford) ಜೀವಿಸುತ್ತಿದ್ದಾರೆ. ಕರಮ್ ಚಂದ್ (107) ಮತ್ತು ಕಟಾರಿ ಚಾಂದ್ (100) ದಂಪತಿ ಈಗ ವಿಶ್ವದಲ್ಲಿ ಅತಿ ದೀರ್ಘ ಕಾಲ ದಾಂಪತ್ಯವನ್ನು ಪೊರೆದ ದಾಖಲೆಗೆ ಪಾತ್ರರಾಗಿದ್ದಾರೆ. ಇವರ ದಾಂಪತ್ಯಕ್ಕೆ ಬರೋಬ್ಬರಿ 87 ವರ್ಷ ಆಯಸ್ಸು.
ಈ ಹಿಂದಿನ ಗಿನ್ನಿಸ್ ವಿಶ್ವ ದಾಖಲೆ ಹೊಂದಿರುವ ದಾಂಪತ್ಯದ ಅವಧಿಗಿಂತ ಇವರದು ಈಗಾಗಲೇ ಇನ್ನೂ ಐದು ವರ್ಷ ಹೆಚ್ಚಾಗಿದೆ. ಇವರ ದಾಖಲೆಯ ದಾಂಪತ್ಯಕ್ಕೆ ಸಾಕ್ಷಿಯಾಗಿ 8 ಮಕ್ಕಳು ಮತ್ತು 28 ಮೊಮ್ಮಕ್ಕಳು ಇದ್ದಾರೆ.

ಅಂದಹಾಗೆ, 1925ರಲ್ಲಿ ಒಂದು ಶುಭ ಘಳಿಗೆಯಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಈ ಜೋಡಿ ಮತ್ತು ಇವರ ದಾಂಪತ್ಯ ಇಂದಿನ ಪಡ್ಡೆಗಳಿಗೆ ಮಾದರಿಯಾಗುವಂತೆ ಇನ್ನೂ ಗಟ್ಟಿಮುಟ್ಟಿಯಾಗಿದೆ (ಮತ್ತೊಮ್ಮೆ ಚಿತ್ರ ನೋಡಿ). ಒಬ್ಬರಿಗೊಬ್ಬರು ಎಲ್ಲ ವಿಷಯಗಳಲ್ಲೂ ಅನ್ಯೋನ್ಯವಾಗಿರುವುದು ಈ ಸುದೀರ್ಘ ದಾಂಪತ್ಯದ ಹೆಗ್ಗಳಿಕೆ ಮತ್ತು ಗುಟ್ಟು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications