ಇನ್ಫೋಸಿಸ್ ಕ್ಯಾಂಪಸ್ ನೇಮಕಾತಿ ಅತಂತ್ರ

ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿದೆ. ಕನಿಷ್ಠ ಮೂರು ತಿಂಗಳಾದರೂ 17 ಸಾವಿರ ಅಭ್ಯರ್ಥಿಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಹೊಸದಾಗಿ ನೇಮಕಗೊಳ್ಳುವ ಟೆಕ್ಕಿಗಳ ತರಬೇತಿ ಅವಧಿಯಲ್ಲಿ ಕಡಿತ ಗ್ಯಾರಂಟಿ. ಸುಮಾರು ಆರು ತಿಂಗಳ ತರಬೇತಿ ಅವಧಿಯನ್ನು ಎರಡು ತಿಂಗಳಿಗೆ ಇಳಿಸಲು ಇನ್ಫೋಸಿಸ್ ಚಿಂತನೆ ನಡೆಸಿದೆ. ನಾಲ್ಕು ತಿಂಗಳ ಅವಧಿಯನ್ನು ಟೆಕ್ಕಿಗಳು ಮೈಸೂರಿನ ಕ್ಯಾಂಪಸ್ ನಲ್ಲಿ ಕಳೆಯಬೇಕಾಗುತ್ತದೆ. ಎರಡು ತಿಂಗಳು ಆನ್ ಲೈನ್ ಪ್ರೋಗಾಂನಲ್ಲಿ ತೊಡಗಿಕೊಳ್ಳಬೇಕಾಗುತ್ತದೆ.
ಇನ್ಫೋಸಿಸ್ ಸಂಸ್ಥೆ ಇನ್ನಷ್ಟು ಸುಧಾರಣೆಗಳನ್ನು ಹೊರ ತರುತ್ತಿದ್ದು, ಆರ್ಥಿಕ ಸೌಲಭ್ಯ ಕಡಿತಕ್ಕೆ ಮುಂದಾಗಿದೆ. ಹಿರಿಯ ಅಧಿಕಾರಿಗಳ ಪ್ರವಾಸ ಭತ್ಯೆ ಕಡಿತ, ಉದ್ಯೋಗಿಗಳ ಇಂಕ್ರೀಮೆಂಟು ಮತ್ತಷ್ಟು ಕಾಲ ವಿಳಂಬ ಮುಂದುವರೆಯಲಿದೆ. ಕಳೆದ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಕಣ್ಣೊರೆಸಲು ಶೇ 6 ರಷ್ಟು ಸಂಬಳ ಏರಿಕೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೊಸ CFO: ಇನ್ಫೋಸಿಸ್ ಸಂಸ್ಥೆಯ ಫೈನಾನ್ಸ್ ವಿಭಾಗ ಉಪಾಧ್ಯಕ್ಷ ರಾಜೀವ್ ಬನ್ಸಲ್ ಅವರು ಹಾಲಿ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ವಿ ಬಾಲಕೃಷ್ಣನ್ ಅವರ ಸ್ಥಾನಕ್ಕೇರುವ ಲಕ್ಷಣಗಳು ಕಂಡು ಬಂದಿದೆ.
ಷೇರುದಾರರಿಗೆ ಭರವಸೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹೂಡಿಕೆದಾರರು, ಗ್ರಾಹಕರು ಹಾಗೂ ಉದ್ಯೋಗಿಗಳ ಪ್ರಗತಿಯತ್ತ ಕೂಡಾ ಗಮನ ಹರಿಸಲಾಗುವುದು. ಇನ್ಫೋಸಿಸ್ 3.0 ಹಂತ ಹಂತವಾಗಿ ಅಳವಡಿಸಿ, ಇನ್ಫೋಸಿಸ್ ವಾಣಿಜ್ಯ ವ್ಯವಹಾರ ರೂಪುರೇಷೆ ಬದಲಿಸಲಾಗುವುದು ಎಂದು ರಾಜೀವ್ ಹೇಳಿದ್ದಾರೆ.


Click it and Unblock the Notifications
