ಜಾಮೀನು ಖರೀದಿ ಪ್ರಕರಣ: ರೆಡ್ಡಿ ನಿರ್ದೋಷಿ-ಹೈಕೋರ್ಟ್

ಜಾಮೀನು ಖರೀದಿ ಪ್ರಕರಣದಲ್ಲಿ ಸಾಕ್ಷ್ಯ ಕೊರತೆಯ ಹಿನ್ನೆಲಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಆಂಧ್ರ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಪ್ರಕರಣ ಇನ್ನೂ ಜೀವಂತವಾಗಿದ್ದು, ಇತರೆ ಆರೋಪಿಗಳ ವಿರುದ್ಧ ವಿಚಾರಣೆ ನಡೆದಿದೆ.
ಆಂಧ್ರದ ಭ್ರಷ್ಟಾಚಾರ ವಿರೋಧಿ ಸಂಸ್ಥೆ (ACB) ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ಇಂದು ನಡೆಸಿದ ಹೈಕೋರ್ಟ್ ಜಡ್ಜ್ ಸಮುದ್ರಾಲ ಗೋವಿಂದರಾಜುಲು ನೇತೃತ್ವದ ಪೀಠ ಯಾವುದೇ ಷರತ್ತು ವಿಧಿಸದೆ ಸುಸೂತ್ರವಾಗಿ ರೆಡ್ಡಿಗೆ ಜಾಮೀನು ಮಂಜೂರು ಮಾಡಿದೆ.
'ಇತರೆ ಪ್ರಕರಣಗಳಲ್ಲೂ ರೆಡ್ಡಿಗೆ ಇಂತಹುದೇ ಜಯ ಲಭಿಸಲಿ' ಎಂದು ಜನಶ್ರೀ ಟಿವಿ ಜತೆ ಮಾತನಾಡಿದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವಕ್ತಾರ ವೈ ಎನ್ ಗೌಡರ್ ಆಶಿಸಿದ್ದಾರೆ.
ಈ ಮಧ್ಯೆ, ಹಲವಾರು ಕೇಸುಗಳಲ್ಲಿ ಸಿಲುಕಿ ಸದ್ಯಕ್ಕೆ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿರುವ ರೆಡ್ಡಿಗೆ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ.












Click it and Unblock the Notifications