ಸೌದಿ ಅರೇಬಿಯಾ: 1500 ಚಿನ್ನದಂಗಡಿಗೆ ತಗಡಿನ ಬೀಗ

saudi-arabia-gold-trade-loses-sheen-1500-shops-closed
ಜೆಡ್ಡಾ, ಅ.31: ಸೌದಿ ಅರೇಬಿಯಾದಲ್ಲಿ 1,500 ಚಿನ್ನದಂಗಡಿಗಳಿಗೆ ತಗಡಿನ ಬೀಗ ಹಾಕಲಾಗಿದೆ. ಕಳೆದ 5 ವರ್ಷಗಳಲ್ಲಿ ಬಂಗಾರದ ಬೆಲೆ ಗಗನಕ್ಕೆ ತಲುಪಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದರಿಂದ ನಷ್ಟಕ್ಕೊಳಗಾದ ಚಿನ್ನದಂಗಡಿಗಳು ಅನಿವಾರ್ಯವಾಗಿ ಬಾಗಿಲುಮುಚ್ಚಿವೆ.

Makkah Chamber of Commerce and Industry ಅಧ್ಯಯನದ ಪ್ರಕಾರ ಸೌದಿ ಅರೇಬಿಯಾದಲ್ಲಿ ಚಿನ್ನದ ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದರು. ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತವುಂಟಾಗಿದ್ದರಿಂದ ಇಂತಹ ಪರಿಸ್ಥಿತಿ ಎದುರಾಗಿದೆ.

ಬೇರೆ ವ್ಯಾಪಾರಗಳಿಂದ ಗಳಿಸಿದ ಹಣವನ್ನು ಚಿನ್ನದ ವ್ಯಾಪಾರದಲ್ಲಿ ತೊಡಗಿಸುವ ಮೂಲಕ ಒಂದಷ್ಟು ವ್ಯಾಪಾರಿಗಳು ಚಿನ್ನದ ವ್ಯಾಪಾರವನ್ನು ಮುಂದುವರಿಸಿದ್ದರು. ಆದರೆ ಈಗ ತೀರಾ ಸಂಕಷ್ಟಕ್ಕೀಡಾಗಿರುವುದರಿಂದ ಅನಿವಾರ್ಯವಾಗಿ ಚಿನ್ನದ ಅಂಗಡಿಗಳು ಬಂದ್ ಆಗಿವೆ.

ಸೋಮವಾರವೂ ಚಿನ್ನದ ಬೆಲೆಗಳು ಏರುಗತಿಯಲ್ಲೇ ಸಾಗಿದ್ದಾವೆ. ಅಮೆರಿಕ ಡಾಲರಿನ ವಿನಿಮಯದೆದುರು ಚಿನ್ನದ ವ್ಯಾಪಾರಿಗಳ ಲಾಭಕ್ಕೆ ಪೆಟ್ಟುಬಿದ್ದಿದೆ. ಹಾಲಿ ಹಜ್ ಋತುವಿನಲ್ಲಿಯೂ ಚಿನ್ನದ ವ್ಯಾಪಾರ ಮುಗ್ಗರಿಸಿದೆ. ಅತ್ತ ವಿಶ್ವ ಆರ್ಥಿಕ ಹಿಂಜರಿತವೂ ಚಿನ್ನದ ವ್ಯಾಪಾರಕ್ಕೆ ಕಗ್ಗಂಟಾಗಿದೆ.

ಅಂಗಡಿಗಳಲ್ಲಿ ಶೇ. 20ರಷ್ಟೂ ಚಿನ್ನದ ವ್ಯಾಪಾರ ಆಗುತ್ತಿಲ್ಲ. ಈ ಹಿಂದೆ ಶೇ. 70ರಷ್ಟು ವ್ಯಾಪಾರವಾಗುತ್ತಿತ್ತು ಎಂದು Makkah Chamber of Commerce and Industry ಉಪಾಧ್ಯಕ್ಷ ಜಿಯಾದ್ ಫಾರ್ಸಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+