ಗರ್ಭಿಣಿ ಮಹಿಳೆಯಿಂದ ಅತ್ತೆಯ ಕಗ್ಗೊಲೆ, ಬಂಧನ

ಅತ್ತೆಯ ಕೊಂದ ಆರೋಪದಲ್ಲಿ ಆ ಸಿಖ್ ಗರ್ಭಿಣಿ ಮಹಿಳೆಯನ್ನು ಬಂಧಿಸಲಾಗಿದೆ. ಬಲ್ಜಿತ್ ಕೌರ್ (68) ಯುಬಾ ನಗರದ ತನ್ನ ನಿವಾಸದಲ್ಲಿ ಅ. 24ರಂದು ಸತ್ತುಬಿದ್ದಿದ್ದುದು ಕಂಡುಬಂದಿತ್ತು. ತಲೆಗೆ ಮೊಂಡು ಆಯುಧದಿಂದ ಬಲವಾದ ಹೊಡೆತ ಬಿದ್ದ ಕಾರಣ ಆಕೆ ಸತ್ತಿರುವುದಾಗಿ ಶವ ಪರೀಕ್ಷೆ ವರದಿ ತಿಳಿಸಿತ್ತು.
ಇದೀಗ ಬಲ್ಜಿತ್ ಹತ್ಯೆಗೈದ ಆರೋಪದಲ್ಲಿ ಅವರ ಸೊಸೆ ಬಲ್ಜಿಂದರ್ ಕೌರ್ (37) ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಲ್ಜಿಂದರ್ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಅಲ್ಲದೆ ಆಕೆಗೆ ಈಗಾಗಲೇ 5 ವರ್ಷದ ಒಬ್ಬ ಮಗಳಿದ್ದಾಳೆ.
ಬಲವಾದ ಸಾಂದರ್ಭಿಕ ಸಾಕ್ಷ್ಯ: ಸಾಂದರ್ಭಿಕ ಸಾಕ್ಷ್ಯಗಳೊಂದಿಗೆ ಬಲ್ಜಿಂದರ್ ಬಂಧನವಾಗಿದೆ ಎಂದು ತಿಳಿಸಿರುವ ಪೊಲೀಸರು ನಿರ್ದಿಷ್ಟ ಸುಳಿವುಗಳ ಬಗ್ಗೆ ಹೆಚ್ಚು ಸುಳಿವು ನೀಡಲು ಇಚ್ಛಿಸಿಲ್ಲ. ಅಷ್ಟೇ ಅಲ್ಲ ಬಲ್ಜಿಂದರ್ ತನ್ನ ಅತ್ತೆಯನ್ನು ಸಾಯಿಸುವಂತಹ ಕಾರಣವಾದರೂ ಏನಿತ್ತು ಎಂದುವನ್ನೂ ಹೇಳಿಲ್ಲ. ಬಲ್ಜಿಂದರ್ ದಂಪತಿ ಅನ್ಯೋನ್ಯವಾಗಿದ್ದಾರೆ. ಬಲ್ಜಿಂದರಿಗೆ ಅಪರಾಧ ಹಿನ್ನೆಲೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.
Yuba City ಯಲ್ಲಿ ಸಿಖ್ಖರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹತ್ಯೆ ಘಟನೆ ಸಿಖ್ ಸಮುದಾಯದಲ್ಲಿ (NAPA) ಆತಂಕ ಸೃಷ್ಟಿಸಿದೆ. ನಾಳೆ (ಅ. 30) ಬಲ್ಜಿಂದರ್ ಳನ್ನು ವಿಚಾರಣೆಗಾಗಿ ಕೋರ್ಟಿನ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications