ಪಿತ್ರಾರ್ಜಿತ ಕಂಪನಿಯ ಆಸ್ತಿ ಮಾರೋಲ್ಲ: ಯುಬಿ ಮಲ್ಯ

ನೋಯ್ಡಾ (ದೆಹಲಿ), ಅ.29: 'ಸಾಹುಕಾರನಾಗಿ ಉಳಿಯುವುದು ಕಷ್ಟ ಕಷ್ಟ. ನನಗೆ ಕೋಟ್ಯಧಿಪತಿ ಪಟ್ಟ ಬೇಡ' ಎಂದು ಕಿಂಗ್ ಫಿಶರ್ ಏರ್ ಲೈನ್ಸ್ (KFA) ಮಾಲೀಕ ವಿಜಯ್ ಮಲ್ಯ ಕಳೆದ ವಾರ ಸಮಾಧಾನದ ನಿಟ್ಟುಸಿರುಬಿಟ್ಟಿದ್ದರು. ಈಗ UB ಮದ್ಯದ ದೊರೆಯಾಗಿ ತಮ್ಮ ಪಾರಂಪರಿಕ ವ್ಯಾಪಾರವಾಗಿರುವ ಮದ್ಯದ ಮಾರಾಟದ ಮೂಲಕ ಗಳಿಸಿದ ಆಸ್ತಿಯನ್ನು ಮಾರಿ, ಸಾಲ ತೀರಿಸೋಲ್ಲ ಎಂದಿದ್ದಾರೆ.

ಯುಬಿ UBಯೇ; ಕೆಎಫ್ಎ KFAನೇ- ಹಾಗೆಲ್ಲ ನನ್ನ ಆರ್ಥಿಕ ಸಂಕಷ್ಟ ಸರಿದೂಗಿಸಲು ಮದ್ಯದಿಂದ ಗಳಿಸಿದ್ದನ್ನು ವಿಮಾನ ಹಾರಾಟಕ್ಕೆ ವಿನಿಯೋಗಿಸೋದಿಲ್ಲ ಎಂದು ಕಿಂಗ್ ಮಲ್ಯ ಸ್ಪಷ್ಟಪಡಿಸಿದ್ದಾರೆ.

ಗಮನಾರ್ಹವೆಂದರೆ ಏಳು ತಿಂಗಳಿಂದ KFA ಸಿಬ್ಬಂದಿಗೆ ಸಂಬಳಗಳನ್ನೇ ನೀಡಿಲ್ಲ. ಇದರಿಂದ ಹೊರಬರಲು United Spirits ಮತ್ತು Diageo ಮದ್ಯದ ಕಂಪನಿಗಳಲ್ಲಿರುವ ತಮ್ಮ ಷೇರನ್ನು ಮಾರಾಟ ಮಾಡಲು ಮಲ್ಯ ಯತ್ನಿಸುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.

'ನಾನೇನು ಮಾಡಬೇಕು ಎಂಬುದು (ಮದ್ಯದ ಆಸ್ತಿ ಮಾರಾಟ) ಮಾಧ್ಯಮ ಮತ್ತು ಜನರ ಅಪೇಕ್ಷೆಯಾಗಿದೆ. ಆದರೆ ಅದಕ್ಕೆ ನನ್ನ ಆಕ್ಷೇಪವಿದೆ. ಫಲಪ್ರದವಾಗಿರುವ, ಜನಪ್ರಿಯ ಉದ್ಯಮದಿಂದ ವಿಮುಖವಾಗುವುದು ನನಗೆ ಇಷ್ಟವಿಲ್ಲ. ಅದನ್ನು ಭಾರತದಂತಹ ಆಗಸ ಉದ್ಯಮದಲ್ಲಿ ಪೋಲು ಮಾಡಲು ನನಗಿಷ್ಟವಿಲ್ಲ' ಎಂದು ಮಲ್ಯ ಸಾಹೇಬರು ತಿಳಿವಳಿಕೆಯ ಮಾತುಗಳನ್ನಾಡಿದ್ದಾರೆ.

no-ub-funds-for-kingfisher-woes-vijay-mallya

'ಈ ಸಮೂಹ ಸಂಸ್ಥೆಗಳ ಮೂಲಕ ಹಣವೆತ್ತಿ ನನ್ನ ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಬಹುದು. 2012ರ ಏಪ್ರಿಲ್ ತಿಂಗಳಿಂದ ಮದ್ಯದ ವಹಿವಾಟಿನ 150 ದಶಲಕ್ಷ ಪೌಂಡ್ ಹಣವನ್ನು ನನ್ನ ವಿಮಾನಯಾನ ಸಂಸ್ಥೆಯಲ್ಲಿ ತೊಡಗಿಸಿದ್ದೂ ಆಗಿದೆ. ಅಷ್ಟು ಸಾಕು. ನನ್ನ ಮನೆತನದ ವ್ಯಾಪಾರದಿಂದ ಬಂದ ಹಣವನ್ನು ಇನ್ನೂ ಹೆಚ್ಚಾಗಿ KFAದಲ್ಲಿ ತೊಡಗಿಸುವುದು ಬೇಡವಾಗಿದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ನನ್ನ ಮನೆತನದ ವ್ಯಾಪಾರ, ನನ್ನ ಕುಟುಂಬದ ಆಸ್ತಿ ಮತ್ತು ಅದರ ಷೇರುದಾರರ ಹಿತಾಸಕ್ತಿ ಕಾಯುವ ಜವಾಬ್ದಾರಿಯನ್ನು ನಾನು ನಿಭಾಯಿಸಬೇಕಾಗಿದೆ. ಆದ್ದರಿಂದ ನಾನು ಯಾವುದೇ ಒತ್ತಡಕ್ಕೂ ಒಳಗಾಗಲು ಬಯಸುವುದಿಲ್ಲ' ಎಂದು ಅವರು ಹೇಳಿದ್ದಾರೆ.

'ವಿಮಾನದ ಎಣ್ಣೆ ದುಬಾರಿಯಾಗಿರುವುದು, ಸರಕಾರದ ನೀತಿಗಳು, ಭಾರಿ ತೆರಿಗೆಗಳಿಂದಾಗಿ ನನ್ನ ವಿಮಾನಗಳು ನೆಲಕಚ್ಚಿವೆ. ಇಂತಹ ಸಂದರ್ಭದಲ್ಲಿ, ಸರಕಾರ ನನ್ನ ನೆರವಿಗೆ ಧಾವಿಸಬೇಕು' ಎಂದು ಕೈಹಿಡಿಯಲ್ಲಿ ಸಿಗಾರ್ ಹೊಂದಿದ್ದ ಕಿಂಗ್ ಮಲ್ಯ ಹೇಳಿದರು. ಕುತೂಹಲದ ಸಂಗತಿಯೆಂದರೆ, Kingfisher Airlines Ltd ಎಂದಿಗೂ ಲಾಭವನ್ನೇ ಮಾಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+