ಜಿಂದಾಲ್ ಸ್ಟೀಲ್ ನಿವ್ವಳ ಲಾಭ ಪ್ರತಿಶತ 547 ಏರಿಕೆ

ಕರ್ನಾಟಕದಲ್ಲಿ ಗಣಿಗಾರಿಕೆ ನಿಷೇಧ, ಅದಿರು ರಫ್ತು ನಿರ್ಬಂಧ, ಸುಪ್ರೀಂಕೋರ್ಟ್ ನಲ್ಲಿ ಮೊಕದ್ದಮೆ ಎಲ್ಲಾ ಜಂಜಾಟದ ನಡುವೆ ಜಿಂದಾಲ್ ಸ್ಟೀಲ್ ಉತ್ತಮ ಫಲಿತಾಂಶ ಹೊರ ಹಾಕಿದೆ.
2012-13ರ ಎರಡನೇ ತ್ರೈಮಾಸಿಕದಲ್ಲಿ ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 6.4 ರಷ್ಟು ಏರಿಕೆ ಕಂಡಿರುವುದು ಜಿಂದಾಲ್ ಗೆ ವರದಾನವಾಗಿದೆ. ವಿದೇಶಿ ಕರೆನ್ಸಿ ವಿನಿಮಯ ಬದಲಾವಣೆ ಪರಿಣಾಮ ಕಂಪನಿಗೆ ಸುಮಾರು 422 ಕೋಟಿ ರು ಹೆಚ್ಚುವರಿ ಲಾಭ ಬಂದಿದೆ.
ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಕೇವಲ 127.12 ಕೋಟಿ ನಿವ್ವಳ ಲಾಭ ಮಾತ್ರ ದಾಖಲಾಗಿತ್ತು.
ಈ ತ್ರೈಮಾಸಿಕದಲ್ಲಿ ಜಿಂದಾಲ್ ಕಂಪನಿ ನಿವ್ವಳ ಮಾರಾಟ 8,834 ಕೋಟಿ ರು ನಷ್ಟಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 16 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 7,625.06 ಕೋಟಿ ರು ದಾಖಲಾಗಿತ್ತು.
JSWIL ಹಾಗೂ JSW ಸ್ಟೀಲ್ ವಿಲೀನಕ್ಕೆ ಬಿಎಸ್ ಇ ಹಾಗೂ ಎನ್ ಎಸ್ ಇ ಒಪ್ಪಿಗೆ ಸೂಚಿಸಿದ್ದು, ಕಂಪನಿಗೆ ಇನ್ನಷ್ಟು ಬಲ ತಂದಿದೆ.
ಎರಡನೇ ತ್ರೈಮಾಸಿಕದಲ್ಲಿ ಸುಮಾರು 2.17 ದಶಲಕ್ಷ ಟನ್ ಗಳಷ್ಟು ಉಕ್ಕು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟ ಮತ್ತು ಉತ್ಪಾದನೆ ಕ್ರಮವಾಗಿ ಶೇ 15 ಹಾಗೂ ಶೇ 25 ರಷ್ಟು ಏರಿಕೆ ಕಂಡಿದೆ.












Click it and Unblock the Notifications