ಪಾಪ, ಕಿಂಗ್ ವಿಜಯ್ ಮಲ್ಯ ಈಗ ಕೋಟ್ಯಧಿಪತಿ ಅಲ್ಲ!

King of good times ಎಂದೇ ಬಿಂಬಿತರಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯರ KFA ವಿಮಾನಗಳು ನೆಲಕ್ಕುರುಳಿದ್ದೇ ತಡ ಕೋಟ್ಯಧಿಪತಿ ಪಟ್ಟದಿಂದ ಕೆಳಗಿಳಿದಿದ್ದಾರೆ. ಫೋರ್ಬ್ಸ್ ಮ್ಯಾಗಜೀನ್ ನಿನ್ನೆ (ಅಕ್ಟೋಬರ್ 25) ಭಾರತದ ಕೋಟ್ಯಧಿಪತಿರಾಯರ ಪಟ್ಟಿ ಬಿಡುಗಡೆ ಮಾಡಿದೆ.
ಈ ಹಿಂದೆ 800 ದಶಲಕ್ಷ ಡಾಲರ್ ಅಂದರೆ 4,285 ಕೋಟಿ ರೂ. ಹೊಂದಿದ್ದ ವಿಜಯ್ ಮಲ್ಯ ಬಳಿ ಇಂದು ಕೇವಲ 1.1 ದಶಲಕ್ಷ ಡಾಲರ್ ಉಳಿದಿದೆ. ಅಂದರೆ, 49ನೇ ಸ್ಥಾನದಿಂದ 73ನೇ ಸ್ಥಾನಕ್ಕೆ ಉರುಳಿದ್ದಾರೆ. ಆದಾಗ್ಯೂ ಮಲ್ಯ ಅವರು ಜೆಟ್ ಏರ್ ವೇಸ್ ಸಂಸ್ಥೆಯ ನರೇಶ್ ಗೋಯಲ್ ಅವರಿಗಿಂತ ಮೇಲಿದ್ದಾರೆ. 600 ದಶಲಕ್ಷ ಡಾಲರ್ ಹೊಂದಿರುವ ನರೇಶ್ 94ನೇ ಸ್ಥಾನದಲ್ಲಿದ್ದಾರೆ.
ಮಲ್ಯ ದುಃಸ್ಥಿತಿ ಬಗ್ಗೆ Forbes ಷರಾ: 'ಬೆಟ್ಟದ ಗಾತ್ರದ 2 ಶತಕೋಟಿ ಡಾಲರ್ ಸಾಲ ಹೊರಲಾರದೆ ಕಿಂಗ್ ಫಿಶರ್ ಏರ್ ಲೈನ್ಸ್ ವಿಮಾನಗಳು ಇತ್ತೀಚೆಗೆ ಹಾರುವ ಚೈತನ್ಯವನ್ನೇ ಕಳೆದುಕೊಂಡಿವೆ. DGCA ಎತ್ತಿದ್ದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುವ ಸ್ಥಿತಿಯಲ್ಲೂ KFA ಇಲ್ಲ. King of good times ಪ್ರಸ್ತುತ Bad timesಗೆ ಜಾರಿದ್ದಾರೆ' ಎಂದು ಮಲ್ಯ ದುಃಸ್ಥಿತಿ ಬಗ್ಗೆ Forbes ಷರಾ ಬರೆದಿದೆ.
ಅಷ್ಟೇ ಅಲ್ಲ- ಏಳು ತಿಂಗಳಿಂದ KFA ಸಿಬ್ಬಂದಿಗೆ ಸಂಬಳಗಳನ್ನೇ ನೀಡಿಲ್ಲ. ಇದರಿಂದ ಹೊರಬರಲು United Spirits ಮತ್ತು Diageo ಮದ್ಯದ ಕಂಪನಿಗಳಲ್ಲಿರುವ ತಮ್ಮ ಷೇರನ್ನು ಮಾರಾಟ ಮಾಡಲು ಮಲ್ಯ ಯತ್ನಿಸುತ್ತಿದ್ದಾರೆ ಎಂದೂ ಪತ್ರಿಕೆ ಹೇಳಿದೆ.


Click it and Unblock the Notifications
