ಬಿಎಸ್ವೈ ಹೊಸ ಪಕ್ಷದಿಂದ ವಿನಾಶದ ಅಂಚಿನಲ್ಲಿ ಬಿಜೆಪಿ

Hassan District JDS President on BSY New party
ಅರಸೀಕೆರೆ, ಅ 25: ಆಂತರಿಕ ಕಚ್ಚಾಟ ಮತ್ತು ಯಡಿಯೂರಪ್ಪನವರ ಹೊಸ ಪಕ್ಷದಿಂದ ಬಿಜೆಪಿ ಜನಮನ್ನಣೆ ಕಳೆದುಕೊಂಡಿದೆ. ಪಕ್ಷ ವಿನಾಶದ ಅಂಚಿನಲ್ಲಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಲಿದೆ ಎಂದು ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಜವರೇಗೌಡ ಹೇಳಿದ್ದಾರೆ.

ಯಡಿಯೂರಪ್ಪ ಅವರು ರಚಿಸಲು ಉದ್ದೇಶಿಸಿರುವ ಹೊಸ ಪಕ್ಷದಿಂದ ಭಾರತೀಯ ಜನತಾ ಪಾರ್ಟಿಗೆ ಹಿನ್ನಡೆಯಾಗಲಿದೆ ಎಂದು ಜವರೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಜನಪರ ಕಾರ್ಯಕ್ರಮಗಳು ನಮ್ಮ ಪಕ್ಷಕ್ಕೆ ವರದಾನವಾಗಲಿದೆ.

ಮತದಾರ ಯಾವಾಗಲೂ ಸ್ಥಿರ ಸರಕಾರ ಇರಬೇಕೆಂದು ಬಯಸುತ್ತಾನೆ. ಅವನಿಗೆ ಯಾವತ್ತೂ ಯಾವ ಪಕ್ಷವನ್ನೂ ಬೆಂಬಲಿಸ ಬೇಕೆನ್ನುವ ಗೊಂದಲವಿರುವುದಿಲ್ಲ. ಗೊಂದಲವಿರುವುದು ರಾಜಕೀಯ ಪಕ್ಷಗಳಲ್ಲಿ.

ಯಡಿಯೂರಪ್ಪ ಅವರ ನೂತನ ಪಕ್ಷದಿಂದ ಬಿಜೆಪಿಯ ಸಾಂಪ್ರದಾಯಕ ಮತಗಳು ವಿಭಜನೆಯಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.

ವಿಭಜನೆಗೊಂಡ ಪಕ್ಷಗಳನ್ನು ಮತದಾರರು ಯಾವ ರೀತಿ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ರಾಜ್ಯದಲ್ಲಿ ಬೇಕಾದಷ್ಟಿವೆ. ಯಡಿಯೂರಪ್ಪನವರ ಹೊಸ ಪಕ್ಷದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿವೆ ಎಂದು ಜವರೇಗೌಡ ಭವಿಷ್ಯ ನುಡಿದ್ದಾರೆ.

ಯಾವುದೇ ಪಕ್ಷದ ಸರಕಾರವಿರಲಿ, ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ದಕ್ಷತೆ, ಬಡವರಪರ ಕಾಳಜಿ ಮತ್ತು ಜನಕಲ್ಯಾಣ ಕೆಲಸಗಳ ಆಧಾರದ ಮೇಲೆ ಜನತಾ ನ್ಯಾಯಾಲಯದಲ್ಲಿ ಪಕ್ಷದ ಭವಿಷ್ಯ ನಿರ್ಧಾರವಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.

ದೇವೇಗೌಡ ಮತ್ತು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಶಕ್ತವಾಗಿದೆ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಾವು ಮಾಡಿರುವ ಜನಪರ ಕೆಲಸಗಳು ಮುಂದಿನ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+