Get Updates
Get notified of breaking news, exclusive insights, and must-see stories!

ನಿಸ್ವಾರ್ಥ ಇನ್ಫೋಸಿಸ್ ಮೂರ್ತಿಗೆ ಹೂವರ್ ಪ್ರಶಸ್ತಿ

unselfish-infy-narayana-murthy-awarded-hoover-medal
ವಾಷಿಂಗ್ಟನ್, ಅ.25: ಭಾರತದ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿಯ ಸಂಸ್ಥಾಪಕ ನಿರ್ದೇಶಕ ಎನ್ ಆರ್ ನಾರಾಯಣ ಮೂರ್ತಿ ಇದೀಗ ಅಮೆರಿಕದ ಮೂವರು ಮಾಜಿ ಅಧ್ಯಕ್ಷರುಗಳ ಸಾಲಿಗೆ ಸೇರಿದ್ದಾರೆ.

ಅಂದರೆ ಅವರಿಗೆ 2012ನೇ ಸಾಲಿಗೆ ಪ್ರತಿಷ್ಠಿತ ಹೂವರ್ ಮೆಡಲ್ ಸಂದಾಯವಾಗಿದೆ. ಸೋಮವಾರ ಸಿಯಾಟಲ್ ನಗರದಲ್ಲಿ ನಡೆದ ವಿಶ್ವ ಮಾನವೀಯ ತಂತ್ರಜ್ಞಾನ ಸಮ್ಮೇಳನದಲ್ಲಿ ಈ ಗೌರವವನ್ನು ಇನ್ಫೋಸಿಸ್ ನಾರಾಯಣ ಮೂರ್ತಿ ಸ್ವೀಕರಿಸಿದರು. ಭಾರತಕ್ಕೆ ಇನ್ಫಿ ಮೂರ್ತಿ ಅವರು ಸಲ್ಲಿಸುತ್ತಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ, ಈ ಪ್ರಶಸ್ತಿ ಕೊಡಮಾಡಲಾಗಿದೆ.

ಅಂದಹಾಗೆ 1929ರಲ್ಲಿ Hoover Medal ಅನ್ನು ಸ್ಥಾಪಿಸಲಾಗಿದೆ. ಇಂಜಿನಿಯರುಗಳು ಮಾನವ ಕುಲಕೋಟಿಗೆ ಸಲ್ಲಿಸುವ ಸ್ವಾರ್ಥರಹಿತ, ತಾಂತ್ರಿಕತೆ ಹೊರತಾದ ಅದ್ಭುತ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಮೂವರು ಮಾಜಿ ಅಧ್ಯಕ್ಷರುಗಳಾದ ಹರ್ಬರ್ಟ್ ಹೂವರ್, ಡ್ವೈಟ್ ಡಿ ಐಸೆನ್ ಹಾವರ್ ಮತ್ತು ಜೇಮ್ಸ್ ಅರ್ಲ್ ಕಾರ್ಟರ್ ಸೇರಿದಂತೆ ಇದುವರೆಗೂ ಒಟ್ಟು 70 ಸಾಧಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎನ್ ಆರ್ ನಾರಾಯಣ ಮೂರ್ತಿ ಅವರು ಆರೋಗ್ಯ ಸೇವೆಗಳು, ಸಾಮಾಜಿಕ ಪುನರ್ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆ ತರಲು ಪ್ರತಿಷ್ಠಾನ (Infosys Science Foundation) ಸ್ಥಾಪಿಸಿ, ಆ ಮೂಲಕ ಕಾರ್ಯ ಸಾಧನೆ ಮಾಡಿದ್ದನ್ನು ಪರಿಗಣಿಸಿ, ಈ ಪ್ರಶಸ್ತಿ ಕೊಡಮಾಡಲಾಗಿದೆ. ಈ ಪ್ರತಿಷ್ಠಾನವನ್ನು ಭಾರತದಲ್ಲಿ 2009ರಲ್ಲಿ ಸ್ಥಾಪಿಸಲಾಗಿದೆ.

ಅಮೆರಿಕದ The American Society of Mechanical Engineers, the American Society of Civil Engineers, the American Institute of Chemical Engineers, the American Institute of Mining, Metallurgical and Petroleum Engineers and the Institute of Electrical and Electronics Engineers ಸಂಸ್ಥೆಗಳು ಹೂವರ್ ಮೆಡಲ್ ಆಡಳಿತ ಮಂಡಳಿಯ ಉಸ್ತುವಾರಿ ಹೊತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+