ರೇಪ್: ಬೆಂಗಳೂರೂ ಹರಿಯಾಣಾ, ಬಿಹಾರ ಆಗುತ್ತಿದೆಯೇ?

Bangalore bar girls gang molested raises safety questions
ಬೆಂಗಳೂರು, ಅ.20: ಮೊನ್ನೆ ಸೋನಿಯಾ ಗಾಂಧಿಯೇ ಹೇಳಿದಂತಿತ್ತು- ಹರಿಯಾಣಾ ರೇಪ್ ಕ್ಯಾಪಿಟಲ್ ಆಗುತ್ತಿದೆ ಎಂದು. ಅಲ್ಲಿನ ಪೈಶಾಚಿಕ ಸಾಲು ಅತ್ಯಾಚಾರಗಳನ್ನು ಕಂಡು ಮಮ್ಮಲಮರುಗಿ ಅವರು ಹಾಗೆ ಹೇಳಿದ್ದರು. ಇನ್ನು ಆಕಡೆ ಈಕಡೆ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರವೇನೂ ಕಮ್ಮಿಯಿಲ್ಲ ಬಿಡಿ. ಅಷ್ಟೊಂದು ಕುಲಗೆಟ್ಟಿದೆ, ಉತ್ತರ ಭಾರತ.

ಆದರೆ ಈ ಉತ್ತರ ಭಾರತದ ಮಂದಿ ಎಲ್ಲೇ ಹೋದರೂ ರೇಪಿಸ್ಟ್ ಗಳು ಅವರನ್ನು ಹಿಂಬಾಲಿಸುತ್ತಿರುವಂತಿದೆ. ಅತ್ಯಂತ ಸುರಕ್ಷಿತ/ಸುಸಂಸ್ಕೃತ ತಾಣ ಎಂದು ಬೆಂಗಳೂರಿಗೆ ಬಂದರೆ ಇಲ್ಲೂ ಅದೇ ಕಾಮಪಿಪಾಸುಗಳ ಉಪಟಳ. ಬೆಂಗಳೂರಿಗೆ ಮಾತ್ರ ಸುಖಾಸುಮ್ಮನೆ ಕೆಟ್ಟ ಹೆಸರು.

ವಾರದ ಹಿಂದೆ ಟೆಕ್ಕಿ ಬಾಯ್ ಫ್ರೆಂಡ್ ಜತೆಗಿದ್ದ ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ಜ್ಞಾನಭಾರತಿ ಕ್ಯಾಂಪಸ್ ಬಳಿ ಗ್ಯಾಂಗ್ ರೇಪ್ ನಡೆದಿತ್ತು. ಆರೋಪಿಗಳನ್ನು ಹಾಗೂಹೀಗೂ ಹಿಡಿದು ಪೊಲೀಸರು ನಿಟ್ಟುಸಿರು ಬಿಟ್ಟರು.

ಆದರೆ ಮರುಘಳಿಗೆಯೇ ಅದೇ ದಿಕ್ಕಿನಲ್ಲಿ ಮತ್ತಂದು ಹೇಯ, ಪೈಶಾಚಿಕ, ಮಾತುಗಳಲ್ಲಿ ಹೇಳಲಾಗದಂತಹ ಗ್ಯಾಂಗ್ ರೇಪ್ ನಡೆದುಬಿಟ್ಟಿದೆ. ಗುರುವಾರ ಮಧ್ಯರಾತ್ರಿ ಮದ್ಯ ಸರಬರಾಜು ಮಾಡುವ ಮಾನಿನಿಯರ ಮೇಲೆ ಈ ಕುಕೃತ್ಯ ನಡೆದುಬಿಟ್ಟಿದೆ. ಪಾಪಿ ರೇಪಿಸ್ಟುಗಳಾ ನಿಮ್ಮ ತೀಟೆ ತೀರಿಸಿಕೊಳ್ಳುವ ಮುನ್ನ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇರುತ್ತಾರೆ ಎಂಬುದನ್ನು ಮರೆಯಬೇಡಿ.

ದರೋಡೆಯೂ ಮಾಡಿ, ಮಾನಿನಿಯರ ಮಾನವನ್ನೂ ದೋಚಿದರು:
ಗುರುವಾರ ಮಧ್ಯರಾತ್ರಿ ಏನಾಗಿದೆಯೆಂದರೆ... ಗಾಂಧಿನಗರದ ಕ್ಯಾಸಿನೊ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ಯುವತಿಯರು ಎಂದಿನಂತೆ ಕ್ಯಾಬ್ ಗಳಲ್ಲಿ ಕೆಂಗೇರಿಯ ಹೊರಗಿರುವ ಕೆಂಚಾಪುರ ಕ್ರಾಸ್ ನಾಗದೇವನಹಳ್ಳಿಯ ಜ್ಞಾನಜ್ಯೋತಿ ಲೇ ಔಟ್‌ನಲ್ಲಿರುವ ತಮ್ಮ ಗೂಡು ಸೇರಿಕೊಂಡಿದ್ದಾರೆ.

ಆಗಲೇ ಸುಮಾರು 9 ಮಂದಿ ಇದ್ದ ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿದೆ. ಡಕಾಯಿತಿಗೆಂದು ಬಂದ ದರೋಡೆಕೋರರು ಕೊಂಡೂ ಹೋದ ಉಂಡೂ ಹೋದ ಎಂಬಂತೆ ಮಾನಿನಿಯರ ಮಾನವನ್ನೂ ದೋಚಿದ್ದಾರೆ.

ದರೋಡೆ ಮಾಡಿ, ಯುವತಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ದುಷ್ಕರ್ಮಿಗಳು ಅಷ್ಟಕ್ಕೇ ಸುಮ್ಮನಾಗದೆ ಕೆಲವರು ಮತ್ತೂ ನಾಲ್ಕಾರು ಯುವತಿಯರನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲೂ ಅವರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಅವರನ್ನು ಮತ್ತೆ ಅವರ ಮನೆಗೆ ಬಿಟ್ಟು, ಅವರ ಬಳಿಯಿದ್ದ ಇದ್ದಬದ್ದದ್ದನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ.

ಇತ್ತ ಮನೆಯಲ್ಲೇ ಉಳಿದವರು ಬಾರ್ ಗರ್ಲ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆ ಯುವತಿಯರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಒಬ್ಬೊಬ್ಬರನ್ನೇ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ವಿವಸ್ತ್ರಗೊಳಿಸಿ ನಗ್ನ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಆಘಾತಕ್ಕೊಳಗಾದ ಬಾರ್ ಗರ್ಲ್ಸ್ ಬೆದರಿದ ಗುಬ್ಬಚ್ಚಿಗಳಂತಾಗಿದ್ದಾರೆ. ಇವರೆಲ್ಲ ಪಂಜಾಬ್, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ. ಬಿಡದಿ ಪೊಲೀಸರು ಈಗ ಅತ್ಯಾಚಾರ, ಡಕಾಯಿತಿ ಮತ್ತು ಅಪಹರಣ ಪ್ರಕರಣಗಳನ್ನು ದಾಖಲಿಸಿಕೊಂಡು ಕುಳಿತಿದ್ದಾರೆ.

'ಆರೋಪಿಗಳು ಅಪರಿಚಿತ ವ್ಯಕ್ತಿಗಳು. ಅವರನ್ನು ಬಾರಿನಲ್ಲಿ ಅಥವಾ ಬೇರೆಲ್ಲೂ ನೋಡಿಲ್ಲ. ತಂಡದಲ್ಲಿದ್ದ ಬಹುತೇಕರು ಕನ್ನಡ ಮಾತನಾಡುತ್ತಿದ್ದರು. ಒಂದಿಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು' ಎಂದು ಯುವತಿಯರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ಆರೋಪಿಗಳು, ಬಾರ್ ಗರ್ಲ್ಸ್‌ಗಳ ಚಲನವಲನದ ಮೇಲೆ ನಿಗಾ ಇಟ್ಟು ಯೋಜಿತ ರೀತಿಯಲ್ಲಿ ಈ ಕೃತ್ಯ ಎಸಗಿರಬಹುದು ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+