ಜಾಲಹಳ್ಳಿಯ ಮನೆಗೆ ನುಗ್ಗಿದ ಯಮವೇಗದ ಜಾಗ್ವಾರ್

Jaguar car breaches wall of a house
ಬೆಂಗಳೂರು, ಅ. 20 : ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕೋಟಿ ರು. ಬೆಲೆಬಾಳುವ ಜಾಗ್ವಾರ್ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ, ಒಂದು ಕಾರಿಗೆ ಗುದ್ದಿದ್ದಲ್ಲದೆ ಮನೆಯೊಂದಕ್ಕೆ ನುಗ್ಗಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಜರುಗಿದೆ.

ಕೆಎ 53 ಝಡ್ 7000 ನಂಬರ್ ಇರುವ ಕೆಂಪು ಬಣ್ಣದ ಜಾಗ್ವಾರ್ ಕಾರಿನ ವೇಗ ಯಾವ ಪರಿಯಿತ್ತೆಂದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಮತ್ತು ಮನೆಯ ಗೋಡೆ ಭೇದಿಸಿ ಕಾರು ಮನೆಯೊಳಗೆ ನುಗ್ಗಿದೆ. ಕಾರು ಓಡಿಸುತ್ತಿದ್ದ ಚಾಲಕ ಅಪಘಾತವಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದಿರುವುದು ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ.

ಎಚ್ಎಂಟಿ ಬಡಾವಣೆಯಲ್ಲಿರುವ ವಿಜಯ್ ಕುಮಾರ್ ಎಂಬುವವರ ಮನೆಯ ಮಲಗುವ ಕೋಣೆ ಜಖಂ ಆಗಿದೆ. ಅವರು ಅಪಘಾತ ನಡೆದ ಸಮಯ ಕಚೇರಿಯಲ್ಲಿದ್ದರು, ಅವರ ಹೆಂಡತಿ ಮತ್ತು ಮಗಳು ದೇವಸ್ಥಾನಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಜಾಗ್ವಾರ್ ಎದುರಿನಿಂದ ಬರುತ್ತಿದ್ದ ಹೋಂಡಾ ಬ್ರಯೋ ಕಾರಿಗೆ ಗುದ್ದಿದ್ದರಿಂದ ಬ್ರಯೋ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಎದುರಿಗೆ ಬರುತ್ತಿದ್ದ ಬಜಾಜ್ ಪಲ್ಸರ್ ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಜಾಗ್ವಾರ್ ಕಾರಿನ ಚಾಲಕ ಮೊದಲಿಗೆ ಒಂದು ಮೋರಿ ದಾಟಿ ಮುನ್ನುಗ್ಗಿದ್ದಾನೆ. ಅಷ್ಟರಲ್ಲಿಯೇ ಹೋಂಡಾ ಬ್ರಯೋ ಕಾರು ಎದುರಿಗೆ ಬಂದಿದೆ. ಅದಕ್ಕೂ ಡಿಕ್ಕಿ ಹೊಡೆದ ಜಾಗ್ವಾರ್ ಮತ್ತೊಂದು ಮೋರಿ ಜಿಗಿದು ವಿಜಯ್ ಕುಮಾರ್ ಅವರ ಮನೆಯನ್ನು ಹೊಕ್ಕಿದೆ.

ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು, ಮನೆ ಗೋಡೆಯನ್ನು ಬೀಳಿಸಿದ ಜಾಗ್ವಾರ್ ಕಾರನ್ನು ಹಿಂತೆಗೆಯಲು ಅಡ್ಡಿಪಡಿಸಿದರು. ಕಾರಿನ ಮಾಲಿಕ ಇದಕ್ಕೆ ಪರಿಹಾರ ನೀಡಿದ ನಂತರವೇ ಕಾರನ್ನು ಹಿಂದಕ್ಕೆ ತೆಗೆಯಬೇಕು ಎಂದು ಒತ್ತಾಯಪಡಿಸಿದರು. ಆದರೆ, ಕಾರಿನ ಮಾಲಿಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ನಂತರವೇ ಕಾರನ್ನು ಹಿಂತೆಗೆಯಲು ಅವಕಾಶ ನೀಡಲಾಯಿತು. ಬಿದ್ದಿರುವ ಗೋಡೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಂದ ಹಾಗೆ, ಜಾಗ್ವಾರ್ ಕಾರಿನ ಬೆಲೆ 50 ಲಕ್ಷ ರು.ನಿಂದ ಒಂದೂವರೆ ಕೋಟಿ ರು.ವರೆಗೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+