ಅವಿವಾಹಿತ ಮೋದಿ ನಾಡಿನಲ್ಲಿ ಸನ್ನಿ ಲಿಯೋನ್ ನವರಾತ್ರಿ

ಈ ಹಿಂದೆ, ಗುಜರಾತ್ ಮುಖ್ಯಮಂತ್ರಿ, ಅವಿವಾಹಿತ ನರೇಂದ್ರ ಮೋದಿಯ ಲೇಡಿ ಫ್ಯಾನ್ ಆಗಲು ಸಾಕಷ್ಟು ಸರ್ಕಸ್ ಮಾಡಿದ್ದ ಸನ್ನಿ ಲಿಯೋನ್ ಎಂಬ ಕೆನಡಾ ಮೂಲದ ನೀಲಿ ಚಿತ್ರಗಳ ತಾರೆ ಈಗ ಗುಜರಾತಿನಲ್ಲಿ ಸಾರ್ವಜನಿಕವಾಗಿ ತನ್ನ ಮೈಮಾಟ ಬಳುಕಿಸಲು ಸಿದ್ಧತೆ ನಡೆಸಿದ್ದಾಳೆ.

ಗುಜರಾತಿನಲ್ಲಿ ಈಗ ಹೇಳಿ ಕೇಳಿ ಚುನಾವಣೆ ಕಾಲ. ಜತೆಗೆ ನಾಳೆಯಿಂದ ನವರಾತ್ರಿಯೂ ಕಾಲಿಡಲಿದೆ. ಈ ಸಂದರ್ಭದಲ್ಲಿ ಮಾದಕ ನಟಿ ಸನ್ನಿ ಲಿಯೋನಳ ಡ್ಯಾನ್ಸ್ ಪ್ರೋಗ್ರಾಂ ನಡೆಸಿದರೆ ಹೇಗೆ ಎಂಬ ಐಡಿಯಾ ಬಂದಿದ್ದೇ ತಡ, ನವರಾತ್ರಿಯಲ್ಲಿ ಇಲ್ಲಿನ ಪ್ರಸಿದ್ಧ 'ಗರ್ಭ ನೃತ್ಯ'ವನ್ನು ಆಯೋಜಿಸಲಾಗಿದೆ.

ನೀಲಿ ಚಿತ್ರ ತಾರೆ 'ಗರ್ಭ ನೃತ್ಯ' ಮೋಡಿ

ನೀಲಿ ಚಿತ್ರ ತಾರೆ 'ಗರ್ಭ ನೃತ್ಯ' ಮೋಡಿ

ಎಂದಿನಂತೆ ಇದಕ್ಕೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಆದರೆ ಸನ್ನಿ ಆಟಕ್ಕೆ ಯಾವುದೇ ಧಕ್ಕೆಯಿಲ್ಲದೆ ಸಾಂಗೋಪಾಂಗವಾಗಿ ನಡೆಯಲಿದೆ ಎಂಬುದನ್ನು ಕೇಳಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಕಚಗುಳಿಯಿಟ್ಟಂತಾಗಿದೆ. ಆಗಲೇ ಜಿಸ್ಮ್-3 ನಟಿಯ ಕನಸು ಕಾಣುತ್ತಿದ್ದಾರೆ.

ಸನ್ನಿ ಲಿಯೋನ್ ಮತ್ತು 'ಗರ್ಭ ನೃತ್ಯ' ಸಂಪ್ರದಾಯ

ಸನ್ನಿ ಲಿಯೋನ್ ಮತ್ತು 'ಗರ್ಭ ನೃತ್ಯ' ಸಂಪ್ರದಾಯ

ಗಾಂಧಿನಗರ ಬಳಿ ಪಲಸಾನಾ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿ ವರ್ಷ ಖ್ಯಾತ ನಟಿಯನ್ನು ಕರೆಯಿಸುವುದು ಇಲ್ಲಿನ ವಾಡಿಕೆ. ಹಾಗಾಗಿ ಈ ಬಾರಿ ನೀಲಿ ತಾರೆ ಸನ್ನಿ ಲಿಯೋನಳಿಂದ 'ಗರ್ಭ ನೃತ್ಯ' ಏರ್ಪಡಿಸುವಲ್ಲಿ ಆಯೋಜಕರು ಯಶಸ್ವಿಯಾಗಿದ್ದಾರೆ.

ಸನ್ನಿ ಲಿಯೋನ್ ಒಪ್ಪಿಗೆಯ ಮುದ್ರೆ

ಸನ್ನಿ ಲಿಯೋನ್ ಒಪ್ಪಿಗೆಯ ಮುದ್ರೆ

ಸನ್ನಿ ಲಿಯೋನ್ ತನ್ನ 'ಗರ್ಭ ನೃತ್ಯ'ಕ್ಕೆ ಆಯೋಜಕರಿಗೆ ಒಪ್ಪಿಗೆಯ ಮುದ್ರೆ ಸೂಚಿಸಿದ್ದಾಳೆ. ಅಕ್ಟೋಬರ್ 20ರಂದು ನೀವು ಆಯೋಜಿಸಿರುವ 'ಗರ್ಭ ನೃತ್ಯ'ದಲ್ಲಿ ನಾನು ನೃತ್ಯ ಮಾಡಲು ಸಿದ್ಧವಿದ್ದೇನೆ ಎಂದು ಸನ್ನಿ ಮಾರುತ್ತರ ನೀಡಿದ್ದಾಳೆ.

ನೀಲಿ ಚಿತ್ರಗಳ ತಾರೆಯ ಔಚಿತ್ಯವೇನು?

ನೀಲಿ ಚಿತ್ರಗಳ ತಾರೆಯ ಔಚಿತ್ಯವೇನು?

ನೀಲಿ ಚಿತ್ರಗಳ ತಾರೆಯನ್ನು ನವರಾತ್ರಿಗೆ ಕರೆಸುವುದರ ಔಚಿತ್ಯದ ಬಗ್ಗೆ ಆಯೋಜಕರು ಇಬ್ಭಾಗವಾಗಿದ್ದಾರೆ. ಆದರೆ 'ಪಕ್ಕದ್ಮನೆ ಹುಡುಗಿ' ಎನಿಸಿಕೊಳ್ಳಲು ಹಾತೊರೆಯುತ್ತಿರುವ ನಟಿ ಸನ್ನಿ ಲಿಯೋನ್ ಸಂಪ್ರದಾಯ ಮೀರಿ ವರ್ತಿಸುವುದಿಲ್ಲ ಎಂದು ನಟಿ ಸನ್ನಿ ಕಡೆಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ನಟಿ ಸನ್ನಿ ಕೈಯೆತ್ತಿದರೆ

ಕೊನೆಯ ಕ್ಷಣದಲ್ಲಿ ನಟಿ ಸನ್ನಿ ಕೈಯೆತ್ತಿದರೆ

ಆಯೋಜಕರಲ್ಲಿ ಒಳಜಗಳ ಮಿತಿಮೀರಿ ಅಕಸ್ಮಾತ್ ಕೊನೆಯ ಕ್ಷಣದಲ್ಲಿ ನಟಿ ಸನ್ನಿ ಕೈಯೆತ್ತಿದರೆ... ಅಂತಹ ಪರಿಸ್ಥಿತಿ ನಿಭಾಯಿಸಲು ಗೀತಾ ಬಸ್ರಾ ಮತ್ತು ಝರೀನ್ ಖಾನ್ ಅವರನ್ನು ಆಹ್ವಾನಿಸಲು ಸನ್ನದ್ಧರಾಗಿದ್ದಾರೆ. ಒಂದು ವೇಳೆ ನಟಿ ಸನ್ನಿ ಬರುವುದು ಖಚಿತವಾದರೆ ಗೀತಾ ಬಸ್ರಾ ಮತ್ತು ಝರೀನ್ ಖಾನ್ ಸಹ 'ಗರ್ಭ ನೃತ್ಯ'ಕ್ಕೆ ಸ್ಟೆಪ್ಸ್ ಹಾಕಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+