ಪಾರ್ಲೆ 'ಮ್ಯಾಂಗೋ ಬೈಟ್' ತಿನ್ನಬೇಡಿ ಹುಷಾರ್ !

FDA asks Parle to recall entire stock of 'Mango Bite'
ಥಾಣೆ(ಮಹಾರಾಷ್ಟ್ರ) ಅ.14: ಪಾರ್ಲೆ ಕಂಪೆನಿಯ ಜನಪ್ರಿಯ ಕ್ಯಾಂಡಿ ಮ್ಯಾಂಗೊ ಬೈಟ್ ತಿನ್ನಲು ಯೋಗ್ಯವಾಗಿಲ್ಲ ಎಂದು ಆಹಾರ ಮತ್ತು ಔಷಧಿ ಪ್ರಾಧಿಕಾರ (ಎಫ್ ಡಿಎ) ಪ್ರಮಾಣ ಪತ್ರ ನೀಡಿದೆ. ಈ ಕೂಡಲೇ ಪಾರ್ಲೆ ಸಂಸ್ಥೆ ಈ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವಂತೆ ಆದೇಶಿಸಿದೆ.

ಕೊಂಕಣ ವಿಭಾಗದ ರಾಯ್ ಗಢ ಮತ್ತು ಭಿವಂಡಿಯಲ್ಲಿ ಎಫ್ ಡಿಎ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೋಟಿಗಟ್ಟಲೆ ಮೌಲ್ಯದ ಉತ್ಪನ್ನ ದಾಸ್ತಾನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ಆಹಾರ ಉತ್ಪನ್ನಗಳ ದಾಸ್ತಾನಿನಲ್ಲಿ ಪಾರ್ಲೆ ಕಚ್ಚಾ ಮ್ಯಾಂಗೊ ಬೈಟ್ ಕೂಡ ಸೇರಿದೆ. ಪ್ಯಾಕ್ ಮಾಡಲಾಗಿದ್ದ ಜಾರ್ ನಲ್ಲಿದ್ದ ಪಾರ್ಲೆ ಕಚ್ಚಾ ಮ್ಯಾಂಗೊ ಬೈಟ್ ಮೌಲ್ಯ ಸುಮಾರು 1,46,68,400 ರು ಆಗಲಿದೆ ಎಂದು ಎಫ್ ಡಿ ಎ ಜಂಟಿ ಆಯುಕ್ತ ಎಸ್ ಕೆ ಶೆರೆ ಹೇಳಿದ್ದಾರೆ.

ದಾಳಿ ನಡೆಸಿದ ತಂಡವು 8158 ಕೆಜಿ ತೂಗುವ 10.60 ಲಕ್ಷ ರು. ಮೌಲ್ಯದ ಲ್ಯಾಕ್ಟಿಕ್ ಆಸಿಡ್(buffered lactic acid)ನ್ನೂ ವಶಪಡಿಸಿಕೊಂಡಿದೆ. ವಶಕ್ಕೆ ತೆಗೆದುಕೊಳ್ಳಲಾದ ಉತ್ಪನ್ನಗಳ ಮಾದರಿಯನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಶೆರೆ ತಿಳಿಸಿದ್ದಾರೆ.

ಇತ್ತೀಚೆಗೆ ನಾಸಿಕ್ ನಲ್ಲಿ ನಡೆದ ದಾಳಿಯಲ್ಲಿ 60 ಲಕ್ಷ ರು ಮೌಲ್ಯದ ಮ್ಯಾಂಗೊ ಬೈಟ್ ವಶಪಡಿಸಿಕೊಳ್ಳಲಾಗಿತ್ತು.

ಮಾರುಕಟ್ಟೆಯಿಂದ ಮ್ಯಾಂಗೊಬೈಟ್ ಹಿಂದಕ್ಕೆ ಪಡೆಯಲು ಸೂಚಿಸಲಾಗಿದೆ. ಪ್ರಯೋಗ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್ ಡಿ ಎ ಅಧಿಕಾರಿಗಳು ಹೇಳಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ ಆಹಾರ ಉತ್ಪನ್ನಗಳಲ್ಲಿ ಲ್ಯಾಟಿಕ್ ಆಮ್ಲ ಬಳಕೆಯನ್ನು ನಿಷೇಧಿಸಲಾಗಿದೆ. ಕ್ಷೀರೋತ್ಪನ್ನಗಳಲ್ಲಿ ಹೆಚ್ಚಾಗಿ ಕಂಡು ಬರುವ ಲ್ಯಾಟಿಕ್ ಆಮ್ಲ ಬಳಕೆಯಿಂದ ದಂತಕ್ಷಯ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+