'ನಮೋ' ಟಿವಿಗೆ ಚುನಾವಣೆ ಆಯೋಗ ಹಸಿರು ನಿಶಾನೆ

namo-gujarat-tv-channel-gets-election-commission-nod
ಅಹಮದಾಬಾದ್, ಅ.13: ಅತ್ತ ಬ್ರಿಟನ್ ಸರಕಾರ ಗುಜರಾತ್ ಸಿಎಂ ನರೇಂದ್ರ ಮೋದಿಗೆ ಮಣೆ ಹಾಕಿದ ಬೆನ್ನಿಗೇ ತಾನೂ ಅದೇ ಹಾದಿ ತುಳಿಯುವುದಾಗಿ ಅಮೆರಿಕ ಹೇಳಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಗೆ ಮತ್ತೂ ಒಂದು ಜಯ ಸಿಕ್ಕಿದೆ.

ಟಿವಿ ಚಾನೆಲ್ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್:
ಕೇಂದ್ರ ಚುನಾವಣೆ ಆಯೋಗವು ಗುಜರಾತಿನಲ್ಲಿ 'ನಮೋ ಗುಜರಾತ್' (NaMo Gujarat) ಟಿವಿ ಚಾನೆಲ್ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ಬಿತ್ತರಿಸಿದೆ. ಟಿವಿ ಮಾಧ್ಯಮಗಳು ಹೆಚ್ಚು ಪ್ರಭಾವಿ/ಪರಿಣಾಮಕಾರಿಯಾಗುತ್ತಿರುವ ಇಂದಿನ ದಿನಮಾನದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗುತ್ತಿರುವ ಮೋದಿಗೆ ಇದು ಹೆಚ್ಚು ಪರಿಣಾಮಕಾರಿ ಎನಿಸಲಿದೆ.

ಈ ಮಧ್ಯೆ, ನಮೋ ಅಂದರೆ ನರೇಂದ್ರ ಮೋದಿ ಅಷ್ಟೇ ಅಲ್ಲ, ಮತದಾರ ಪ್ರಭುವಿಗೆ ನಮೋ ನಮಃ ಎನ್ನುವುದೂ ಆಗಿದೆ ಎಂದು ಬಿಜೆಪಿ ಪಕ್ಷ ಹೇಳಿಕೊಂಡಿದೆ. ಮತ್ತೊಂದು ಬೆಳವಣಿಗೆಯಲ್ಲಿ ಇಂದು ಶನಿವಾರ ಜರ್ಮನಿ ಸಹ ಮೋದಿ/ಗುಜರಾತ್ ಸರಕಾರದ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವ ಮಾತನ್ನಾಡಿದೆ.

ಗಮನಾರ್ಹವೆಂದರೆ ಪ್ರಥಮ ಚುಂಬನಂ ದಂತಭಗ್ನಂ ಎನ್ನುವಂತೆ ಕಳೆದ ಚುನಾವಣೆಯಲ್ಲಿ 'ನಮೋ ಗುಜರಾತ್' (NaMo Gujarat) ಟಿವಿ ಚಾನೆಲ್ ಪ್ರಾರಂಭಕ್ಕೆ ಚುನಾವಣೆ ಆಯೋಗ ಅನುಮತಿ ನೀಡಿರಲಿಲ್ಲ. ಆದರೆ ಇದೀಗ ಚುನಾವಣೆ ನೀತಿ ಸಂಹಿತಿಗೆ ಅನುಗುಣವಾಗಿ ಕೆಲವು ಷರತ್ತುಗಳೊಂದಿಗೆ ಆಯೋಗ 'ನಮೋ ಗುಜರಾತ್' ಟಿವಿ ಚಾನೆಲ್ ಪ್ರಸಾರಕ್ಕೆ ಒಪ್ಪಿಗೆ ನೀಡಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಾರಥ್ಯದಲ್ಲಿ 'ನಮೋ ಗುಜರಾತ್' ಅಂದರೆ ನರೆಂದ್ರ ಮೋದಿ ಟಿವಿ ಚಾನೆಲ್ ಅನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಟ್ಟಿತ್ತು. ಆದರೆ ಆಯೋಗ ಇನ್ನೂ ಒಪ್ಪಿಗೆ ಸೂಚಿಸಿರಲಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಆಯೋಗ 'ನಮೋ ಗುಜರಾತ್' ಬಂದ್ ಮಾಡುತ್ತದಾ? ಎಂಬ ಪ್ರಶ್ನೆ ಎದ್ದಿತ್ತು. ಆದರೆ ಚುನಾವಣೆ ಆಯೋಗ ನಿನ್ನೆ ಅದಕ್ಕೆ ಸಮ್ಮತಿ ನೀಡಿದೆ.

ಇದರೊಂದಿಗೆ ಚುನಾವಣಾ ಪ್ರಚಾರಾರ್ಥವಾಗಿ ವಿವೇಕಾನಂದ ಯುವ ವಿಕಾಸ ಯಾತ್ರೆಯನ್ನು ಮುಗಿಸಿದ ಸಮಯದಲ್ಲಿ ಮೋದಿಗೆ ಲಂಡನ್, ಅಮೆರಿಕ ಮತ್ತು ಚುನಾವಣೆ ಆಯೋಗದಿಂದ ಸಕಾರಾತ್ಮಕ ಸ್ಪಂದನೆ ದೊರಕಿರುವುದು ನರೇಂದ್ರ ಮೋದಿ ಅಭಿಮಾನಿಗಳಲ್ಲಿ ವಿಶ್ವಾಸ ಹೆಚ್ಚಿಸಿದೆ. ಇದಲ್ಲದೆ ಸ್ಥಳೀಯವಾಗಿ 5 ಕೇಬಲ್ ಟಿವಿ ಚಾನಲ್ಲುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಿಜೆಪಿ ಪಕ್ಷವು ಮೋದಿ ಸರಕಾರದ ಅಭಿವೃದ್ಧಿ ಯೋಜನೆಗಳಿಗೆ ಅಂಕಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+