ಅತ್ಯಾಚಾರ: ಆರೋಪಿಗಳಾದ ಗಂಡ-ಮೈದುನ ಆತ್ಮಹತ್ಯೆ

ಇಲ್ಲಿನ ಫತೇಹಾಬಾದಿನಲ್ಲಿ ನಿನ್ನೆ ಗುರವಾರ ಈ ಘಟನೆ ನಡೆದಿದೆ. ಜಿಲ್ಲೆಯ ಭೂನಾ ಪಟ್ಟಣದಲ್ಲಿ ಆರೋಪಿಗಳಿಬ್ಬರೂ ನನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು 32 ವರ್ಷದ ಮಹಿಳೆಯೊಬ್ಬರು ದೂರಿದ್ದಾರೆ.
ನನ್ನ ಪತಿ ಅನಿಲ್ ಮತ್ತು ಮೈದುನ ಸುನೀಲ ಬುಧವಾರ ರಾತ್ರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆ ಸಂದರ್ಭದಲ್ಲಿ ನನ್ನ ಅತ್ತೆ ಘಟನಾ ಸ್ಥಳದಲ್ಲೇ ಇದ್ದರೂ ಅವರು ನನ್ನ ನೆರವಿಗೆ ಬರಲಿಲ್ಲ ಎಂದು ಆ ಇಬ್ಬರು ಮಕ್ಕಳ ತಾಯಿ ಗುರುವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಸೊಸೆ ತಮ್ಮ ಪುತ್ರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದು ಗೊತ್ತಾಗುತ್ತಿದ್ದಂತೆ ಸುನೀಲ್- ಅನೀಲ್ ತಾಯಿ ಆರೋಪಿತ ತಮ್ಮಿಬ್ಬರೂ ಮಕ್ಕಳನ್ನು ಕರೆದುಕೊಂಡು ಭಾಕ್ರಾ ಕಾಲುವೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಮೂವರೂ ಹಗ್ಗದಿಂದ ಕಟ್ಟಿಕೊಂಡು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನೀಲ್- ಅನೀಲ್ ನೀರಿನಲ್ಲಿ ಮುಳುಗಿ ಸತ್ತರೆ ಅವರ ತಾಯಿ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications