ಬಿಎಸ್‌ವೈ ಹೇಳುವಂತೆ ಲಿಂಗಾಯತರೆಲ್ಲ ಅವರ ಜತೆಯಿಲ್ಲ

ಅಂದು ಕುಮಾರಸ್ವಾಮಿ ವಿರುದ್ಧ ವಚನಭ್ರಷ್ಟತೆಯ ಆರೋಪ ಮಾಡಿ ಚುನಾವಣೆಗೆ ಹೋದಾಗ ಇದ್ದಂತಹ ಅನುಕಂಪದ ಅಲೆಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಯಡಿಯೂರಪ್ಪ ಅಂದುಕೊಂಡಂತೆ ಎಲ್ಲ ವೀರಶೈವ ನಾಯಕರೂ ಅವರ ಹಿಂದೆ ಇಲ್ಲ. ಆದ್ದರಿಂದ ಹೊಸ ಪಕ್ಷ ಕಟ್ಟಿ ಚುನಾವಣೆಗೆ ಹೋದರೆ ಪ್ರಯೋಜನವಾಗುವುದಿಲ್ಲ ಎಂದು ರಾಮುಲು ಹೇಳಿದ್ದಾರೆ.
ಇದು ಅವರಿಗೂ ಚೆನ್ನಾಗಿ ಗೊತ್ತಾಗಿದೆ. ಆದ್ದರಿಂದ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬುದೆಲ್ಲ ಸುಳ್ಳು. ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರೆ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಏನೂ ಬೇಡ. ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದಯಪಾಲಿಸಿದರೆ ಸಾಕು. ಅವರು ಬಿಜೆಪಿಯಲ್ಲೇ ಉಳಿಯುತ್ತಾರೆ ಎಂದೂ ರಾಮುಲು ಭವಿಷ್ಯ ನುಡಿದರು.
ಇನ್ನು ಹೊಸ ಪಕ್ಷ ಕಟ್ಟುವಷ್ಟು ಉತ್ಸಾಹ, ಚೈತನ್ಯ ಅವರಲ್ಲಿಲ್ಲ. ಭೌತಿಕ ಬಲವೂ ಇಲ್ಲ. ಹೊಸ ಪಕ್ಷ ಕಟ್ಟಿ ಅದಕ್ಕಾಗಿ ಓಡಾಡಲು ಅವರ ವಯಸ್ಸೂ ಅಡ್ಡಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅನೇಕ ಹಗರಣಗಳು ಅವರ ಬೆನ್ನಿಗಂಟಿಕೊಂಡಿವೆ ಎಮದು ಶ್ರೀರಾಮುಲು ವಿಶ್ಲೇಷಿಸಿದ್ದಾರೆ.
ಹಿಂದಿನ ಚುನಾವಣೆಗೆ ಹೋಲಿಸಿದರೆ ಜನ/ಮತದಾರರು ಸಾಕಷ್ಟು ಬದಲಾಗಿದ್ದಾರೆ. ಪಾದಯಾತ್ರೆ ವೇಳೆ ಇದು ನನ್ನ ಅನುಭವಕ್ಕೆ ಬಂದಿತು. ಅಂದರೆ ಈಗ ಎಲ್ಲ ಜಾತಿಗಳವರೂ ಅವರವರ ರಾಜಕನಾಯಕರ ಹಿಂದೆ ಹೋಗುವುದು ಕಡಿಮೆಯಾಗಿದೆ. ಎಲ್ಲ ಜಾತಿ, ಜನಾಂಗಗಳಲ್ಲಿರುವ ಬಡವರು ಜಾತ್ಯತೀತವಾಗಿ ಒಂದಾಗುತ್ತಿದ್ದಾರೆ. ಇಂದೊಂದು ರೋಈತಿ ಮಾಜಿ ಮುಖಯಮಂತ್ರಿ ದೇವರಾಜ ಅರಸು ಕಾಲ ಮರುಕಳಿಸುವಂತೆ ಭಾಸವಾಗುತ್ತಿದೆ ಎಂದು ಅವರು ವಸ್ತುನಿಷ್ಠ ವಿಶ್ಲೇಷಣೆ ಮಾಡಿದ್ದಾರೆ.












Click it and Unblock the Notifications