ಹಳ್ಳಿಮೇಷ್ಟ್ರು ಹೊರಟರು ಬೆಲ್ಜಿಯಂ ಪ್ರವಾಸಕ್ಕೆ

ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಹಲುವಾಗಲುವಿನ ಶಿವಪ್ಪ ಬಡಿಗೇರ್ ಹಾಗೂ ಧಾರಾವಾಡದ ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿಯ ಸೋಮಶೇಖರ್ ಕುಮ್ಟಾಕರ್ ಅವರು ಬೆಲ್ಜಿಯಂನ ಘೆಂಟ್‌ನಲ್ಲಿರುವ ಯುನಿವರ್ಸಿಟಿ ಕಾಲೇಜ್ ಆರ್ಟಿವೆಲ್ಡೆಹೋಗ್ ಸ್ಕೂಲ್‌ಗೆ 10 ದಿನಗಳ ಮಟ್ಟಿಗೆ ಭೇಟಿ ಕೊಡಲು ಆಯ್ಕೆಯಾದ ಇಬ್ಬರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿದ್ದಾರೆ.
10 ದಿನಗಳ ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಬೆಲ್ಜಿಯಂ ಅಧ್ಯಾಪಕರ ಜೊತೆಗೆ ಸಂಪರ್ಕ ಹಾಗೂ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಈ ಅಧ್ಯಾಪಕರು ಬೆಲ್ಜಿಯಂನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಕಳೆದ ವರ್ಷ ಬೆಲ್ಜಿಯಂನ ಅಧ್ಯಾಪಕರು ಕನಕಪುರ ತಾಲೂಕಿಗೆ ಭೇಟಿ ಕೊಟ್ಟಾಗ ಶಿಕ್ಷಣ ಸಂಸ್ಥೆ ಆತಿಥ್ಯ ವಹಿಸಿತ್ತು. ಅಲ್ಲಿನ ಅಧ್ಯಾಪಕರು ಕರ್ನಾಟಕ ಸರ್ಕಾರದ ನಲಿ ಕಲಿ ಕಾರ್ಯಕ್ರಮದಿಂದ ಬಹಳಷ್ಟು ಪ್ರಭಾವಿತರಾಗಿದ್ದರು.
ಪ್ರತೀ ವರ್ಷ ಶಿಕ್ಷಣ ಫೌಂಡೇಶನ್ ತನ್ನ ಕಾರ್ಯವ್ಯಾಪ್ತಿಯಲ್ಲಿ ಗುರುಪುರಸ್ಕಾರ್ ಕಾರ್ಯಕ್ರಮವನ್ನು ಆಯೋಜಿಸಿ ಅತ್ಯುತ್ತಮ ಅದ್ಯಾಪಕರನ್ನು ಗುರುತಿಸುತ್ತದೆ. ಈ ವರ್ಷ ಅರ್ಜಿ ಹಾಕಿದ್ದ 1000 ಶಿಕ್ಷಕರಲ್ಲಿ ಇಬ್ಬರನ್ನು ಆರಿಸಲಾಗಿದೆ ಮತ್ತು ಬೆಲ್ಜಿಯಂ ಭೇಟಿಗೆ ಪ್ರಾಯೋಜಕತ್ವ ವಹಿಸಲಾಗುತ್ತಿದೆ.
ಶಿಕ್ಷಣ ಫೌಂಡೇಶನ್ ಬಗ್ಗೆ : ಶಿಕ್ಷಣ ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಬದ್ಧತೆ ಹೊಂದಿದ ಒಂದು ಸರ್ಕಾರೇತರ ಸಂಘಟನೆ. ಕಳೆದ ಆರು ವರ್ಷಗಳಲ್ಲಿ ಸುಮಾರು 1115 ಶಾಲೆಗಳಿಗೆ ಸಂಸ್ಥೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಸುಮಾರು 1,80,000 ಮಕ್ಕಳನ್ನು ತಲುಪಿದೆ. ಈ ಸಂಸ್ಥೆಯ ಮಧ್ಯಪ್ರವೇಶ ಪರಿಣಾಮಕಾರಿ ಎನಿಸಿದೆ. ಕರ್ನಾಟಕದ ಉಳಿದ ಸಂಸ್ಥೆಗಳ ಶೈಕ್ಷಣಿಕ ಮಧ್ಯಪ್ರವೇಶಕ್ಕಿಂತ ಈ ಸಂಸ್ಥೆ ಹೆಚ್ಚು ಸುಸ್ಥಿರವೆನಿಸಿಕೊಂಡಿದೆ.
ಶಿಕ್ಷಣದ ಮಾದರಿ ಸಾರ್ವಜನಿಕ ಶೈಕ್ಷಣಿಕ ವ್ಯವಸ್ಥೆಯನ್ನು ಪಾವಿತ್ರ್ಯ ದೃಷ್ಟಿಯಿಂದ ನೋಡುತ್ತದೆ. ಅದರಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲೆ ಎಲ್ಲವೂ ಸೇರಿದೆ.
ಶಾಲೆಗಳಿಗೆ ಸೂಕ್ತ ಸಂಪನ್ಮೂಲಗಳನ್ನು ಒದಗಿಸುವುದರಿಂದ ಆರಂಭಿಸಿ ಅಗತ್ಯಕ್ಕೆ ಅನುಗುಣವಾದ ತಂತ್ರಜ್ಞಾನ ಸರ್ಕಾರಿ ಶಾಲೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಬೆಂಬಲ, ಆಶ್ವಾಸನೆ ಹಾಗೂ ಪ್ರೋತ್ಸಾಹಗಳು ಶಾಲೆಗಳನ್ನು ಸ್ವಸುಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಸಂಸ್ಥೆಯ ಮಧ್ಯಪ್ರವೇಶದಿಂದ ಈಗ ಹೊಂದಿರುವ ಸಂಪನ್ಮೂಲಗಳನ್ನು(ಶಿಕ್ಷಕರು) ಇನ್ನೂ ಅಭಿವೃದ್ಧಿಪಡಿಸುವುದು, ಮಕ್ಕಳ ಕಲಿಕಾ ಪ್ರತಿಭೆಯಲ್ಲಿ ಉತ್ತಮ ಬೆಳವಣಿಗೆಯನ್ನು ತರುತ್ತದೆ ಎನ್ನುವುದನ್ನು ಸಂಸ್ಥೆ ಸಾಬೀತು ಮಾಡಿದೆ.
ಗುರುಪುರಸ್ಕಾರದ ಬಗ್ಗೆ : ಗುರುಪುರಸ್ಕಾರ್ ಎನ್ನುವುದು ಶಿಕ್ಷಣ ಫೌಂಡೇಶನ್ ಸರ್ಕಾರಿ ಶಾಲೆಗಳ ಪ್ರತಿಭಾನ್ವಿತ ಅಧ್ಯಾಪಕರ ಆಂತರಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮ. ಶಿಕ್ಷಕಕರು ಶೈಕ್ಷಣಿಕ ವ್ಯವಸ್ಥೆಯ ಮೂಲಧಾತುಗಳಾಗಿದ್ದಾರೆ.
ಮಗುವಿನಲ್ಲಿ ಆತ್ಮವಿಶ್ವಾಸ ಹಾಗೂ ಆಸಕ್ತಿಯನ್ನು ಹುಟ್ಟಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿ ಸರಳ ಹಾದಿಯಲ್ಲಿ ಮಕ್ಕಳಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದ ಸಾಕಷ್ಟು ಅದ್ಯಾಪಕರಿದ್ದಾರೆ. ಗುರುಪುರಸ್ಕಾರ್ ಅಂತಹ ಪ್ರಯತ್ನಗಳು ಮತ್ತು ಸಕಾರಾತ್ಮಕ ವಿಷಯಗಳನ್ನು ಗುರುತಿಸುವ ಒಂದು ಪ್ರಯತ್ನವಾಗಿದೆ ಎನ್ನಬಹುದು.
ಈ ಕಾರ್ಯಕ್ರಮವು ಶಿಕ್ಷಕರ ಆಂತರಿಕ ಪ್ರತಿಭೆಯನ್ನು ತೋರಿಸಲು ಮತ್ತು ತಿಳಿದುಕೊಂಡು ಪ್ರೋತ್ಸಾಹಿಸಲು ಅತ್ಯುತ್ತಮ ವೇದಿಕೆಯಾಗಿದೆ. ಶಿಕ್ಷಕರ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಲು ಇದು ಅತ್ಯುತ್ತಮ ಹಾದಿಯೆಂದು ಸಾಬೀತಾಗಿದೆ.
ರಾಜ್ಯಾದ್ಯಂತ ಗುರುಪುರಸ್ಕಾರ್ ಕಾರ್ಯಕ್ರಮ ಕಳೆದ ವರ್ಷ ಈ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆ ಪ್ರೋತ್ಸಾಹ ನೀಡುವ 500 ಶಾಲೆಗಳಲ್ಲಿ ಅಳವಡಿಸಲಾಗಿತ್ತು. ಈ ವರ್ಷ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳನ್ನೂ ಇದರ ವ್ಯಾಪ್ತಿಯೊಳಗೆ ತರಲಾಗುವುದು. ನಾವು ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತೇವೆ.
ಆಸಕ್ತರು ಹೆಚ್ಚಿನ ವಿವರಗಳಿಗೆ: [email protected] ಸಂಪರ್ಕಿಸಿ ಅಥವಾ
ಈ ಕೆಳಗಿನ ವಿಳಾಸಕ್ಕೆ ಬರೆಯಿರಿ:
ಶಿಕ್ಷಣ ಫೌಂಡೇಶನ್, 298/ಸಿ 7ನೇ ಮೈನ್, 4ನೇ ಬ್ಲಾಕ್, ಜಯನಗರ, ಬೆಂಗಳೂರು 560 011
ಸಂಪರ್ಕ: ರಾಜ್‌ಕುಮಾರ್-94481 71069
ಕುಮಾರ್ ಅನೀಶ್-9845793490
ದೂರವಾಣಿ: 080 4121 0762












Click it and Unblock the Notifications