ಹೊಸ ಕನೆಕ್ಷನ್: ಕೇಂದ್ರದಿಂದ ಮತ್ತೊಂದು ಗ್ಯಾಸ್ ಬಾಂಬ್

new-lpg-connections-to-cost-more-security-deposit-hike
ನವದೆಹಲಿ, ಅ.11: ಅಡುಗೆ ಅನಿಲ ಬೆಲೆ ಏರಿಸಿ, 6/12 ಅಡುಗೆ ಸಿಲಿಂಡರುಗಳೊಂದಿಗೆ ಆಟವಾಡಿದ ಕೇಂದ್ರ ಸರಕಾರ ಈ ಬಾರಿ ನೇರವಾಗಿ ಅಡುಗೆಮನೆಯ ಒಲೆಗೆ ತಣ್ಣೀರು ಸುರಿದಿದೆ. ಒಂದು ಸಿಲಿಂಡರಿನ ಹೊಸ ಅಡುಗೆ ಅನಿಲ ಸಂಪರ್ಕದ ಭದ್ರತಾ ಠೇವಣಿಯನ್ನು 1,150 ರೂ. ಗಳಿಂದ 1,450 ರೂಪಾಯಿಗೆ ಏರಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಈಗಾಗಲೇ ಅಡುಗೆ ಅನಿಲ ಬೆಲೆಯನ್ನು ಮೊನ್ನೆಯಷ್ಟೇ ಏರಿಸಿ, ಸಬ್ಸಿಡಿ ಅಡುಗೆ ಸಿಲಿಂಡರುಗಳ ವಿತರಣೆಗೆ ಕಡಿವಾಣ ಹಾಕಿರುವ ಸಂದರ್ಭದಲ್ಲಿ ಇದೀಗ ಠೇವಣಿ ದರ ಅಧಿಕಗೊಳಿಸುವ ಮೂಲಕ ಹೊಸ ಬಳಕೆದಾರರು ಹೊಸ ಕನೆಕ್ಷನ್ ಪಡೆಯುವ ಮುನ್ನ ನೂರೆಂಟು ಬಾರಿ ಯೋಚಿಸುವಂತಾಗಿದೆ. ಆದರೆ ಬಡ ಗ್ರಾಹಕನಿಗೆ ಅನ್ಯ ಮಾರ್ಗವಲ್ಲ. ಇಷ್ಟೊಂದು ದುಡ್ಡು ತೆತ್ತು ಅಡುಗೆ ಮನೆ ಒಲೆಯನ್ನು ಹೊತ್ತಿಸಲೇಬೇಕು.

ಈಗ ಠೇವಣಿಯನ್ನು ದಿಢೀರನೆ 300 ರೂ. ಏರಿಸಿರುವುದರಿಂದ ಹೊಸ ಕನೆಕ್ಷನ್ ದರ 2,500 ರೂಪಾಯಿ ದಾಟಿದೆ. ಈ ಭದ್ರತಾ ಠೇವಣಿ ಹೆಚ್ಚಳದ ಜತೆಗೆ ರೆಗ್ಯುಲೇಟರಿಗೆ 150 ರೂ, ಸುರಕ್ಷಾ ಟ್ಯೂಬ್ 170 ರೂ. ಕನ್ಸೂಮರ್ ಬುಕ್ ಗೆ 50 ರೂ. ಎಂದೆಲ್ಲ ದುಡ್ಡು ತೆರಬೇಕಾಗಿದೆ.

ಪೆಟ್ರೋಲ್, ಎಲ್ ಪಿಜಿ, ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಪರದಾಡುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಬೆಲೆ ಏರಿಕೆಯಿಂದಲೂ ಪರಿತಪಿಸುವ ಕಾಲ ಸದ್ಯದಲ್ಲೇ ಬರಲಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಸೂಚ್ಯವಾಗಿ ಇದನ್ನು ಹೇಳಿದ್ದಾರೆ.

ವಿದ್ಯುತ್ ಪೂರೈಸುವ ಖಾಸಗಿ ಕಂಪನಿಗಳು ದೀರ್ಘಕಾಲಿಕ ವಿದ್ಯುತ್ ಸರಬರಾಜು ಯೋಜನೆಗಳ ದರವನ್ನು ದುಬಾರಿ ಎನಿಸುವಷ್ಟು ಶೇ. 12ರಷ್ಟು ಹೆಚ್ಚಿಸಿವೆ. ಈ ಹೊರೆಯಲ್ಲಿ ಶೇ. 4ರಷ್ಟನ್ನು ಗ್ರಾಹಕರ ಮೇಲೆ ಹೊರಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಅನುಮತಿ ನೀಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+