ಆರು ತಿಂಗಳಲ್ಲಿ 500 ಪಟ್ಟು ಹೆಚ್ಚು ವೇಗದ ಬ್ರಾಡ್ ಬ್ಯಾಂಡ್

'6-9 ತಿಂಗಳಲ್ಲಿ ವಿಶ್ವ ಮಟ್ಟದಲ್ಲಿ ದೇಶದಲ್ಲಿ 9 ನಗರಗಳಲ್ಲಿ 1,024 Mbps (1 Gbps) ಯೋಜನೆಗಳು ಸೇವೆಗೆ ದೊರಕಲಿವೆ. ಅಂದರೆ 2 ಗಂಟೆಗಳ ಎಚ್ ಡಿ ಸಿನಿಮಾವನ್ನು ಕೇವಲ 30 ಸೆಕೆಂಡುಗಳಲ್ಲಿ download ಮಾಡಬಹುದು. ಅದೇ ಸಾಮಾನ್ಯ ಬ್ರಾಡ್ ಬ್ಯಾಂಡ್ ವೇಗದಲ್ಲಿ ಇದನ್ನು ಡೌನ್ ಲೋಡ್ ಮಾಡಲು ಒಂದು ಗಂಟೆಗೂ ಹೆಚ್ಚು ಕಾಲ ಹಿಡಿಸುತ್ತದೆ. 2 ಗಂಟೆಗಳ ಎಚ್ ಡಿ ಸಿನಿಮಾಗೆ 2.2 GB ಹಿಡಿಸುತ್ತದೆ' ಎಂದು ರೇಡಿಯಸ್ ಇನ್ಫ್ರಾಟೆಲ್ ಸಂಸ್ಥೆಯ ಸಿಇಒ ರಜನೀಶ್ ವಾಹಿ ಹೇಳಿದ್ದಾರೆ.
ಆದರೆ, ಇಷ್ಟೊಂದು ಕ್ಷಿಪ್ರ ವೇಗದ ಸೇವೆಯನ್ನು ಒದಗಿಸುವ ಕಂಪನಿಗಳು ಯಾವುವು? ಮೊದಲಾ 9 ನಗರಗಳು ಯಾವುವು ಎಂಬುದರ ಬಗ್ಗೆ ಸಿಇಒ ರಜನೀಶ್ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಗುರ್ ಗಾಂವ್ ನಲ್ಲಿ ಈಗಾಗಲೇ ಈ ಜಾಲ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಮದು ಅವರು ತಿಳಿಸಿದರು.
ಫೈಬರ್ ಆಪ್ಟಿಕ್ ಜಾಲ ಅಳವಡಿಸಲು ರಿಯಲ್ ಎಸ್ಟೇಟ್ ಕಂಪನಿಗಳಾದ DLF, Unitech, Emaar MGF, Ansal, Mantri, Vipul, ATS, Omaxe, Vipul, M3M, Paramount ಮತ್ತು Prateek ಜತೆ ಪಾಲುದಾರಿಕೆ ಒಪ್ಪಂದಗಳಾಗಿವೆ ಎಂದು ಸಿಇಒ ರಜನೀಶ್ ಹೇಳಿದ್ದಾರೆ.
ರೇಡಿಯಸ್ ನೆಟ್ ವರ್ಕ್ ಉತ್ತರ ಭಾರತದಲ್ಲಿ ಈಗಾಗಲೇ 3 ಲಕ್ಷ ಮನೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಭಾರ್ತಿ ಏರ್ ಟೆಲ್ ಮತ್ತು ಟಾಟಾ ಟೆಲಿ ಸರ್ವಿಸ್ ಈಗಾಗಲೇ 100 ಮೆಗಾ ಬೈಟ್ ಸೇವಾ ಯೋಜನೆಗಳನ್ನು ಮಾಸಿಕ 5,000 ರೂ. ಸೇವಾ ದರದಲ್ಲಿ ಕೊಡಮಾಡುತ್ತಿವೆ. ಅಮೆರಿಕದ ಕನಸಾಸ್ ನಗರದಲ್ಲಿ 1 Gbps ಇಂಟರ್ ನೆಟ್ ಸೇವೆಯನ್ನು ಇತ್ತೀಚೆಗಷ್ಟೇ ಕಲ್ಪಿಸಲಾಗಿದೆ. ಬ್ರಾಡ್ ಬ್ಯಾಂಡ್ ಚಂದಾದಾರರು 1998ರಲ್ಲಿ ಕೇವಲ 57,200 ಇದ್ದರು. ಅವರ ಸಂಖ್ಯೆ ಈಗ 400 ದಶಲಕ್ಷ ತಲುಪಿದೆ. (PTI)












Click it and Unblock the Notifications