ನಾಳಿನ ಕರ್ನಾಟಕ ಬಂದ್: ತಮಿಳರ ಸುರಕ್ಷತೆ ಬಗ್ಗೆ ಆತಂಕ

Karnataka Bundh Tamilians safety, Karunanidhi
ಚೆನ್ನೈ, ಅ 5: ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ 500ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಶನಿವಾರ (ಅ 6) ನಡೆಯಲಿರುವ ಕರ್ನಾಟಕ ಬಂದ್ ಸಮಯದಲ್ಲಿ ಅಲ್ಲಿರುವ ತಮಿಳರ ಸುರಕ್ಷತೆಯ ಬಗ್ಗೆ ನಮಗೆ ಆತಂಕವಿದೆ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ನೆರೆಯ ಕರ್ನಾಟಕ ರಾಜ್ಯವನ್ನು ವಿರೋಧ ಪಕ್ಷದಂತೆ ನೋಡುತ್ತಿದ್ದಾರೆ. ಅವರ ಈ ವರ್ತನೆಯಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ಸಂಬಂಧ ಹಾಳಾಗುತ್ತಿದೆ.

ಜಯಲಲಿತಾ ವರ್ತನೆಯಿಂದ ತಮಿಳರು ಕರ್ನಾಟಕದಲ್ಲಿ ಭಯದಿಂದ ಜೀವನ ಸಾಗಿಸುವಂತಾಗಿದೆ ಎಂದು ಕರುಣಾನಿಧಿ ಆತಂಕ ವ್ಯಕ್ತ ಪಡಿಸಿದ್ದಾರೆ.

ಎರಡು ರಾಜ್ಯಗಳ ನಡುವೆ ಬಸ್ ಸಂಚಾರ ನಿಂತು ಹೋಗಿದೆ. ಹೊಸೂರು, ಧರ್ಮಪುರಿ, ಸೇಲಂ, ಮಧುರೈ, ಚೆನ್ನೈ ಮುಂತಾದ ನಗರವಾಸಿಗಳಿಗೆ ಇಂದರಿಂದ ತುಂಬಾ ತೊಂದರೆಯಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೆ.

ಕಾವೇರಿ ವಿಚಾರವನ್ನು ಎರಡೂ ರಾಜ್ಯದ ನಾಯಕರುಗಳು ರಾಜಕೀಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಹಿರಿಯ ಡಿಎಂಕೆ ಮುಖಂಡ, ಮಾಜಿ ಸಿಎಂ ಕರುಣಾನಿಧಿ ಎರಡೂ ರಾಜ್ಯದ ಮುಖಂಡರಿಗೆ ಮನವಿ ಮಾಡಿದ್ದಾರೆ.

ರಾಜ್ಯದ ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ. ಆದರೆ ಕಾವೇರಿ ನೀರು ಆ ಭಾಗದ ರೈತರ ಉಪಯೋಗಕ್ಕೆ ಇನ್ನೂ ಬಂದಿಲ್ಲ ಎಂದು ವರದಿಯಾಗಿದೆ.

ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಮುಖ್ಯ ನಾಲೆಗಳು ಗುಂಡಿ ಬಿದ್ದಿವೆ. ಮುಖ್ಯ ನಾಲೆಗಳ ಮಟ್ಟ ಎರಡರಿಂದ ಮೂರು ಅಡಿಗಳಷ್ಟು ಆಳಕ್ಕೆ ಕುಸಿದಿದೆ.

ಪರಿಣಾಮವಾಗಿ ಮುಖ್ಯ ನಾಲೆಯಲ್ಲಿ ಎರಡು ಅಡಿ ಕೆಳಗೆ ನೀರು ಹರಿಯುತ್ತಿರುವುದರಿಂದ ಅದು ನೀರಾವರಿ ನಾಲೆಗಳಿಗೆ ತಲುಪುತ್ತಿಲ್ಲ. ನೀರು ಪೋಲಾಗುತ್ತಿರುವುದರಿಂದ ರೈತರೂ ಕಂಗಾಲಾಗಿದ್ದಾರೆ.

ಜಯಲಲಿತಾ ಹಠ ಸಾಧಿಸಿ ನೀರು ಬಿಡಿಸಿಕೊಂಡು ಏನು ಸಾಧಿಸಿದಂತಾಯಿತೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+