ನಂಬಿ, ಸೋನಿಯಾ ಚಿಕಿತ್ಸೆಗೆ ನಯಾ ಪೈಸೆ ಕೊಟ್ಟಿಲ್ಲ

cp-sonia-gandhi-treatment-india-govt-has-not-paid-rti
ನವದೆಹಲಿ, ಅ.4: ಅಬ್ಬಬ್ಬ, ಕಾಂಗ್ರೆಸ್ ಅಧ್ಯಕ್ಷೆ (CP) ಸೋನಿಯಾ ಗಾಂಧಿ ಅವರ ನಿಗೂಢ ಚಿಕಿತ್ಸೆಗೆ ಭಾರತ ಸರಕಾರ ಒಂದು ನಯಾ ಪೈಸೆಯನ್ನೂ ಖರ್ಚು ಮಾಡಿಲ್ಲ.

ಮೊನ್ನೆಯಷ್ಟೇ, ಈ ಬಗ್ಗೆ ತನಗೆ ಯಾರೋ ಹೇಳಿದರೆಂದು ನರೇಂದ್ರ ಮೋದಿ ತನಗೆ ಹೇಳಿದರೆಂದು ಜನತಾ ದಳದ ಮುಖ್ಯಸ್ಥ ಸುಬ್ರಮಣ್ಯ ಸ್ವಾಮಿ ಅವರು ಟ್ವೀಟ್ ಮಾಡಿ ಸುದ್ದಿಯನ್ನೊದಗಿಸಿದ್ದರು. UPA ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶಿ ವೈದ್ಯಕೀಯ ಖರ್ಚು ಕೇವಲ 1,880 ಕೋಟಿ ರೂಪಾಯಿ! ಇದಷ್ಟನ್ನೂ ಸರಕಾರ ಭರಿಸಿದೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದರು.

ಸೋನಿಯಾಗೆ ಕ್ಲೀನ್ ಚಿಟ್: ಇದು ಭಾರಿ ವಿವಾದ/ವಾಗ್ವಾದಕ್ಕೆ ಎಡೆ ಮಾಡಿಕೊಟ್ಟ ಮೇಲೆ ಭಾರತ ಸರಕಾರದಿಂದಲೇ ಸ್ಪಷ್ಟನೆ ಬಂದಿದೆ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿಂತ ಪ್ರಭಾವಿಯಾಗಿರುವ UPA ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶಿ ವೈದ್ಯಕೀಯ ವೆಚ್ಚಕ್ಕೆ ಸರಕಾರ ನಯಾ ಪೈಸೆಯನ್ನೂ ಖರ್ಚು ಮಾಡಿಲ್ಲ ಎಂಬುದರ ಬಗ್ಗೆ ಭಾರಿ ಅನುಮಾನಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತನ್ನ ವೈದ್ಯಕೀಯ ಬಿಲ್‌ಗ‌ಳನ್ನು ಸರಕಾರದ ಬೊಕ್ಕಸದಿಂದ ಭರಿಸುವಂತೆ ಕೋರಿ ಯಾರೂ, ಯಾವುದೇ ಮನವಿಯನ್ನು ಮಾಡಿಕೊಂಡಿಲ್ಲ. ಹಾಗಾಗಿ ಸರಕಾರ ಆ ವೆಚ್ಚವನ್ನು ಭರಿಸುವ ಪ್ರಶ್ನೆಯೇ ಇಲ್ಲವೆಂದು ಕೇಂದ್ರ ಮಾಹಿತಿ ಆಯೋಗ ಸ್ಪಷ್ಟ ಪಡಿಸಿದೆ.

ಮೊರದಾಬಾದ್‌ನ ಆರ್‌ಟಿಐ ಕಾರ್ಯಕರ್ತ ನವೀನ್‌ ಕುಮಾರ್‌ ಅವರು ಸೋನಿಯಾ ಗಾಂಧಿ ಅವರ ವೈದ್ಯಕೀಯ ವೆಚ್ಚಗಳ ಕುರಿತಂತೆ ಮಾಹಿತಿ ಕೋರಿ ಪ್ರಧಾನಿ ಕಾರ್ಯಾಲಯ, ರಾಷ್ಟ್ರೀಯ ಸಲಹಾ ಮಂಡಳಿ, ಲೋಕಸಭಾ ಕಾರ್ಯದರ್ಶಿ ಹಾಗೂ ವಿದೇಶಾಂಗ ವ್ಯವಹಾರಗಳು, ಸಂಸದೀಯ ವ್ಯವಹಾರಗಳು, ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಖಾತೆಗಳಿಗೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಮಾಹಿತಿ ಆಯೋಗ ಈ ಮಾಹಿತಿ ನೀಡಿದೆ.

ಮುಖ್ಯ ಮಾಹಿತಿ ಆಯುಕ್ತರಾದ ಸತ್ಯಾನಂದ ಮಿಶ್ರಾ ಅವರು ಈ ಸಂಬಂಧ ನಡೆಸಿದ ವಿಚಾರಣೆಯ ವೇಳೆ ಸೋನಿಯಾ ಗಾಂಧಿ ಅವರಿಗೆ ನೀಡಲಾದ ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಿಸಿದ ಬಿಲ್‌ಗ‌ಳನ್ನು ಭರಿಸುವಂತೆ ಕೋರಿ ಯಾವುದೇ ಮನವಿಗಳು ಬಂದಿಲ್ಲ ಎಂದು ಈ ಎಲ್ಲಾ ಖಾತೆಗಳು ಸ್ಪಷ್ಟಪಡಿಸಿದವು.

ಸೋನಿಯಾ ಗಾಂಧಿ ಅವರು ಖಾಸಗಿಯಾಗಿ ವಿದೇಶದಲ್ಲಿ ಅಥವಾ ದೇಶೀಯವಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅದು ಅವರ ಖಾಸಗಿ ವಿಚಾರವಾಗಿದ್ದು, ಆರ್‌ಟಿಐ ಅರ್ಜಿಗೂ ಇದಕ್ಕೂ ಸಂಬಂಧವಿಲ್ಲ ಎಂದೂ ಮಾಹಿತಿ ಆಯುಕ್ತರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+