ಹುಟ್ಟುಹಬ್ಬದಂದು ಕುಡಿದು ಕುಡಿದೇ ಸತ್ತುಹೋದಳು

ಮೃತಳು ಸಿಂಬಯಾಸಿಸ್ ಕಾಲೇಜಿನ ವಿದ್ಯಾರ್ಥಿನಿ. ವಡಗಾಂವ್ ಶೇರಿ ನಿವಾಸಿಯಾಗಿದ್ದ ಈಕೆ ಸಹಪಾಠಿಗಳೊಂದಿಗೆ ಗೆಳೆಯ ಫ್ಲಾಟಿನಲ್ಲಿ ಬರ್ತ್ ಡೇ ಆಚರಿಸಿಕೊಳ್ಳಲು ಹೋಗಿದ್ದಾಗ ಈ ಪ್ರಕರಣ ನಡೆದಿದೆ.
ದ್ವಿತೀಯ ವರ್ಷದ Fashion Designing course ಮಾಡುತ್ತಿದ್ದ ಮೃತಳು ಕಾಲೇಜಿನ ಹಾಸ್ಟೆಲಿನಲ್ಲಿ ವಾಸವಾಗಿದ್ದಳು. ಪೂನಾ-ಅಹಮದ್ ನಗರ ರಸ್ತೆಯಲ್ಲಿರುವ ಫೀನಿಕ್ಸ್ ಮಾಲ್ ನಲ್ಲಿ ಗಾರ್ಮೆಂಟ್ ಮಳಿಗೆಯೊಂದರಲ್ಲಿ ಅರೆ ಕಾಲಿಕ ಉದ್ಯೋಗ ಮಾಡುತ್ತಿದ್ದಳು ಎಂದು ಯರವಾಡ ಪೊಲೀಸರು ತಿಳಿಸಿದ್ದಾರೆ.
ಮಗಳ ಹುಟ್ಟುಹಬ್ಬಕ್ಕೆಂದು ಮಂಗಳವಾರ ಬೆಳಗ್ಗೆಯೇ ಮುಂಬೈನಿಂದ ಮೃತಳ ಅಪ್ಪ-ಅಮ್ಮ ಮತ್ತು ಸೋದರ ಬಂದಿದ್ದ. ವಡಗಾಂವ್ ಶೇರಿಯಲ್ಲಿ ಹೋಟೆಲ್ ಸಹ ಕಾದಿರಿಸಿದ್ದರು. ಗಾಂಧಿ ಜಯಂತಿ ಅಂಗವಾಗಿ ರಜೆ ಇದ್ದಿದ್ದರಿಂದ ಹಾಸ್ಟೆಲಿನಿಂದ ಹೋಟೆಲಿಗೆ ಬಂದಿದ್ದಳು.
ಮೃತಳ ನೇತ್ರ ದಾನ: ಬೆಳಗ್ಗೆಯೆಲ್ಲ ಪೋಷಕರ ಜತೆ ಕಾಲ ಕಳೆದ ಸದರಿ ವಿದ್ಯಾರ್ಥಿನಿ ಸಂಜೆ ವೇಳೆಗೆ ಪೋಷಕರ ಅನುಮತಿ ಪಡೆದು, ಸ್ನೇಹಿತ ಮನೆಯಲ್ಲಿ ಪಾರ್ಟಿ ಆಚರಿಸಿಕೊಂಡು ಬರುತ್ತೇನೆ ಎಂದು ಹೋದವಳು ವಾಪಸಾಗಲೇ ಇಲ್ಲ. ದುರಂತ ಸಾವಿನ ನಂತರ ಪೋಷಕರು ತಮ್ಮ ಮಗಳ ಕಣ್ಣುಗಳನ್ನು ದಾನ ಮಾಡಿದ್ದಾರೆ.












Click it and Unblock the Notifications