ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಭವನ ಮುತ್ತಿಗೆ ಕರವೇ ಮೆರವಣಿಗೆಗೆ ಕೈ ಜೋಡಿಸಿ

By Mahesh
|
Google Oneindia Kannada News

Cauvery water Dispute
ಬೆಂಗಳೂರು, ಅ.4: ಕಾವೇರಿ ಕೊಳ್ಳದಲ್ಲಿ ಪ್ರತಿಭಟನೆಗೆ ತೀವ್ರಗೊಳ್ಳುತ್ತಿದ್ದಂತೆ, ಬೆಂಗಳೂರಿನ ನಾಗರೀಕರನ್ನು ಜಾಗೃತಿಗೊಳಿಸಲು ಹಾಗೂ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿದೆ.

ಕಾವೇರಿ ನದಿ ಪ್ರಾಧಿಕಾರ ನೀಡಿರುವ ಕರ್ನಾಟಕ ವಿರೋಧಿ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ 'ರಾಜಭವನ ಮುತ್ತಿಗೆ' ಹಾಕಲು ಕರವೇ ನಿರ್ಧರಿಸಿದೆ ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಅಕ್ಟೋಬರ್ 5, ಶುಕ್ರವಾರ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಸಾವಿರಾರು ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ.

ಈ ಬೃಹತ್ ಮೆರವಣಿಗೆ ಬೆಳಿಗ್ಗೆ 10:30 ಕ್ಕೆ ಶುರು ಆಗಲಿದೆ. ನ್ಯಾಷನಲ್ ಕಾಲೇಜು ಮೈದಾನದಿಂದ, ಸಜ್ಜನ್ ರಾವ್ ವೃತ್ತ, ಜೆ ಸಿ ರಸ್ತೆ, ಟೌನ್ ಹಾಲ್, ಕಾಪೋರೆಶನ್ ವೃತ್ತ, ಮೈಸೂರು ಬ್ಯಾಂಕ್, ಏಟ್ರಿಯಾ ಹೋಟೆಲ್ ಮಾಗದಲ್ಲಿ ಸಾಗಲಿದೆ.

ದಿನಾಂಕ : ಅಕ್ಟೋಬರ್ 5, ಶುಕ್ರವಾರ
ಸಮಯ : ಬೆಳಿಗ್ಗೆ 10:30
ಮೆರವಣಿಗೆ ಹೊರಡುವ ಸ್ಥಳ :- ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ

ಕಾವೇರಿ ನೀರು ಕುಡಿಯುವ ಬೆಂಗಳೂರಿನ ನಾಗರಿಕರೇ ಬನ್ನಿ, ಹೋರಾಟದಲ್ಲಿ ಭಾಗವಹಿಸಿ ಎಂದು ನಾರಾಯಣ ಗೌಡರು ಕರೆ ನೀಡಿದ್ದಾರೆ..

ಕರ್ನಾಟಕಕ್ಕೆ ಕುಡಿಯಲು ನೀರು ಇಲ್ಲದೆ ಬರದ ಪರಿಸ್ಥಿತಿ ಇರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂದು ಆದೇಶ ಹೊರಡಿಸಿದ ಕೇಂದ್ರ ಸರಕಾರ ಹಾಗೂ ಆ ಆದೇಶವನ್ನು ಪಾಲಿಸಿ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದ ರಾಜ್ಯ ಸರಕಾರದ ವಿರುದ್ಧ ನಮ್ಮ ಕಾರ್ಯಕರ್ತರು ಕರ್ನಾಟಕದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಧಾರವಾಡ ಹಾಗು ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕೃಷ್ಣರಾಜಸಾಗರ ಅಣೆಕಟ್ಟಿಗೆ ಮುತ್ತಿಗೆ ಹಾಕಲು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಾದೇಗೌಡರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ರಾಮನಗರ, ಮಂಡ್ಯ, ಮೈಸೂರು ಹಾಗು ಚಾಮರಾಜನಗರದ ನಮ್ಮ ನೂರಾರು ಕಾರ್ಯಕರ್ತರು ಬೆಂಬಲ ನೀಡಿ ಯಶಸ್ವಿಗೊಳಿಸಿದ್ದಾರೆ.

ಒಕ್ಕಲಿಗರ ಸಂಘ ಮೆರವಣಿಗೆ: ಒಕ್ಕಲಿಗರ ಸಂಘದ ವತಿಯಿಂದ ಪಕ್ಷಾತೀತವಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಕೆಆರ್ ರಸ್ತೆ ಒಕ್ಕಲಿಗರ ಸಂಘದ ಕಚೇರಿಯಿಂದ ರಾಜಭವನ ತನಕ ಶಾಂತಿಯುತ ಮೆರವಣಿಗೆ ನಡೆಸಲಾಗುವುದು ಹಾಗೂ ಶನಿವಾರದ 'ಕರ್ನಾಟಕ ಬಂದ್' ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗುವುದು ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ಕೆಂಚಪ್ಪಗೌಡ ಹೇಳಿದ್ದಾರೆ.

English summary
Cauvery water Dispute: Karnataka Rakshana vedike has organised Rally from National College Basavanagudi Bangalore to Rajbhavan on Oct.5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X