ಭಾರತದಲ್ಲಿ 800 ಕೋಟಿ ಡಾಲರ್ ಇಂಟರ್ನೆಟ್ ರಾಬರಿ

ಜಾಗತಿಕ ಮಟ್ಟದ 2012ನೇ ಸಾಲಿನ Norton Cyber Crime ವರದಿಯ ಪ್ರಕಾರ ವಿಶ್ವದಲ್ಲಿ 24 ರಾಷ್ಟ್ರಗಳಲ್ಲಿ ಸೈಬರ್ ಕ್ರೈಂ ಮೂಲಕ 110 ಶತಕೋಟಿ ಅಮೆರಿಕನ್ ಡಾಲರ್ ಕಳ್ಳತನವಾಗಿದೆ.
ಭಾರತದ ನಕಾಶೆಯಲ್ಲಿ ಶೇ. 66 ಯುವಜನತೆ ಸೈಬರ್ ಕ್ರೈಂನಿಂದ ದುಡ್ಡು ಕಳೆದುಕೊಂಡಿದ್ದಾರೆ. ಶೇ. 56 ರಷ್ಟು ಯುವಜನರು ಸೈಬರ್ ಕ್ರೈಂ ಬಾಧಿತರು. ಅಂದರೆ ನಿಮಿಷಕ್ಕೆ 80 ಮಂದಿ, ಸೆಕೆಂಡಿಗೆ ಒಬ್ಬರು ಸೈಬರ್ ಕ್ರೈಂ ಮೂಲಕ ದುಡ್ಡು ಕಳೆದುಕೊಳ್ಳುವುದು ಪತ್ತೆಯಾಗುತ್ತಿದೆ.
ಅಂದರೆ ಇಂಟರ್ನೆಟ್ಟಿನಷ್ಟೇ ಫಾಸ್ಟಾಗಿ, ವ್ಯಾಪಕವಾಗಿ, ಅಗಾಧವಾಗಿ ಸೈಬರ್ ಕ್ರೈಂ ನಡೆಯುತ್ತಿದೆ. ಅದಕ್ಕೇ ಹೇಳಿದ್ದು, ಎಚ್ಚರಾ ಎಚ್ಚರ!
ಕಳದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಹಣ ಕಳೆದುಕೊಂಡವರ ಸಂಖ್ಯೆ ಮತ್ತು ಹಣದ ಪ್ರಮಾಣ ಶೇ.30ರಷ್ಟು ಹೆಚ್ಚಾಗಿದೆ. ಗಮನಾರ್ಹವೆಂದರೆ ಯುವಜನತೆಯೇ ಇಂದಿನ ಮಾಹಿತಿ ತಂತ್ರಜ್ಞಾನದ ಕೊಡುಗೆಯಾದ ಇಂಟರ್ನೆಟ್ಟಿಗೆ ಅಂಟಿ ಕೊಳ್ಳುವುದು.
ಹಾಗಾಗಿ ಸೈಬರ್ ಕ್ರೈಂ ಫಲಾನುಭವಿಗಳು (ಸಂತ್ರಸ್ತರು) ಈ ಯುವಜನತೆಯೇ. ಕುತೂಹಲದ ಸಂಗತಿಯೆಂದರೆ ಈ ಲೇಖಕ ಸಹ ಸುಮಾರು 15 ಸಾವಿರ ರೂಪಾಯಿಗೆ ಪಂಗನಾಮ ಹಾಕಿಸಿಕೊಂಡಿದ್ದಾರೆ!
ಯೋಚನೀಯ ವಿಷವೆಂದರೆ ಕ್ಷಣಕ್ಷಣಕ್ಕೂ ಬದಲಾಗುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಸೈಬರ್ ಅಪರಾಧಗಳೂ ನವನವೀನವಾಗುತ್ತಿವೆ. ಇಂಟರ್ನೆಟ್ ವ್ಯವಹಾರವೇನೋ ಒಳ್ಳೆಯದೆ ಆದರೆ ಅದನ್ನು ಕಟ್ಟೆಚ್ಚರದಿಂದ/ ಅತ್ಯಧಿಕ ಭದ್ರತೆಯೊಂದಿಗೆ ಗೌಪ್ಯವಾಗಿ ಬಳಕೆ ಮಾಡಬೇಕು, ಅಷ್ಟೇ!












Click it and Unblock the Notifications