ಅಬ್ಬಬ್ಬಾ, ಸೋನಿಯಾ ನಿಗೂಢ ಚಿಕಿತ್ಸೆಗೆ ಖರ್ಚಾಗಿದ್ದೆಷ್ಟು?

cp-sonia-us-treatment-costs-rs-1880cr-subramanian-swamy
ನವದೆಹಲಿ, ಅ.1: ಕಾಂಗ್ರೆಸ್ ಅಧ್ಯಕ್ಷೆ (CP) ಸೋನಿಯಾ ಗಾಂಧಿ ಅವರ ನಿಗೂಢ ಚಿಕಿತ್ಸೆಗೆ ಈಗಾಗಲೇ ತಗುಲಿರುವ ಖರ್ಚು ಎಷ್ಟಿರಬಹುದು? ಅಬ್ಬಬ್ಬಾ ಅಂದರೆ ಒಂದೂ/ಎರಡೋ/ಮೂರೋ ಕೋಟಿ ರೂಪಾಯಿ ಎಂದು ಹೇಳಬಹುದು.

ಆದರೆ ಜನತಾ ದಳದ ಮುಖ್ಯಸ್ಥ ಸುಬ್ರಮಣ್ಯ ಸ್ವಾಮಿ ಅವರ ಪ್ರಕಾರ UPA ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದೇಶಿ ವೈದ್ಯಕೀಯ ಖರ್ಚು ಕೇವಲ 1,880 ಕೋಟಿ ರೂಪಾಯಿ! ಸೋನಿಯಾ ಚಿಕಿತ್ಸೆ ಈ ಪಾಟಿ ದುಬಾರಿಯಾಗಿತ್ತು ಎಂದು ಹೇಳಿ ಸುಮ್ಮನಾಗದ ಸುಬ್ರಮಣ್ಯ ಸ್ವಾಮಿ ಈ ಸಂಬಂಧ ಸರಕಾರ ಮತ್ತು ಸೋನಿಯಾರನ್ನು ಕೋರ್ಟಿಗೆ ಎಳೆಯುವುದಾಗಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ಮೂಲಕ ದೇಶದ ಗಮನ ಸೆಳೆದಿರುವ ಸುಬ್ರಮಣ್ಯ ಸ್ವಾಮಿ ಅವರು ನರೇಂದ್ರ ಮೋದಿ ಅವರು ಈ ಬಗ್ಗೆ ಬೆಳಕು ಚೆಲ್ಲಿದ್ದು ಸೋನಿಯಾರ ಅಮೆರಿಕ ಚಿಕಿತ್ಸೆ ಯಾತ್ರೆಗೆ ಬರೋಬ್ಬರಿ 1,880 ಕೋಟಿ ರೂಪಾಯಿ ಸುರಿಯಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಯಾರು ತುಂಬಿದರು? ಎಂಬುದನ್ನು ತಿಳಿದುಕೊಳ್ಳಲು ನಿಮ್ಮಂತೆ ನಾನೂ ಉತ್ಸುಕನಾಗಿದ್ದೇನೆ. ಅದಕ್ಕಾಗಿ ಶೀಘ್ರವೇ ಕೋರ್ಟಿನಲ್ಲಿ PIL ದಾಖಲಿಸಲಿದ್ದೇನೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

'ಸೋನಿಯಾ ಸೆಪ್ಟೆಂಬರ್ 1ರಂದು ವಿದೇಶಕ್ಕೆ ತೆರಳಿದರು. ಒಂದು ವಾರ ಕಳೆದ ಮೇಲೆ ವಾಪಸಾದರು. ಅವರು ವಾಪಸಾದ ಬಳಿಕವಷ್ಟೇ ಸೋನಿಯಾ ವಿದೇಶಕ್ಕೆ ತೆರಳಿದ್ದಾಗಿ ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದರು. ಆದರೆ ಸೋನಿಯಾ ಯಾಕಾಗಿ ಹೋಗಿದ್ದರು ಎಂಬುದರ ಬಗ್ಗೆ ಆ ಪುಣ್ಯಾತ್ಮ ಬಾಯ್ಬಿಡಲಿಲ್ಲ' ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಅದಕ್ಕೂ ಮುನ್ನವೇ 2011ರ ಆಗಸ್ಟ್ ತಿಂಗಳಲ್ಲಿ ಸೋನಿಯಾ ಶಸ್ತ್ರಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದರು. ಆದರೆ ಸೋನಿಯಾ ಆಗಲಿ ಅಥವಾ ಅವರ ಪಾರ್ಟಿಯಾಗಲಿ ಆಕೆಯ ಚಿಕಿತ್ಸೆ/ ದಾಖಲಾಗಿದ್ದ ಆಸ್ಪತ್ರೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಆಕೆಗೆ ಕ್ಯಾನ್ಸರ್ ಇದೆ ವರದಿಯಾಯಿತು. 2012ರ ಫಬ್ರವರಿಯಲ್ಲಿ ಸೋನಿಯಾ ಮತ್ತೊಮ್ಮೆ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದರು.

ಈ ಮಧ್ಯೆ, ಸೋನಿಯಾ ಗಾಂಧಿಯ ಚಿಕಿತ್ಸೆ/ ವಿದೇಶ ಪ್ರವಾಸ/ ಭದ್ರತೆ ಲೆಕ್ಕಕ್ಕೆ ಖಜಾನೆ ಹಣವನ್ನು ಬಳಸಲಾಯಿತೇ ಎಂದು ಕೇಳಿದ್ದಕ್ಕೆ ವಾರ್ತಾ ಸಚಿವೆ ಅಂಬಿಕಾ ಸೋನಿ ಯಾವುದೇ ನಿಖರ ಉತ್ತರ ನೀಡದೆ ನುಣುಚಿಕೊಂಡರು. ಆ ವಿವರಗಳನ್ನೆಲ್ಲ ಮುಂದೊಂದು ದಿನ ನೀಡಲಾಗುವುದು ಎಂದ್ಹೇಳಿ ಕೈತೊಳೆದುಕೊಂಡರು. ಆದರೆ ಇದುವರೆಗೂ ಜಪ್ಪಯ್ಯ ಅಂದರೂ ಯಾರೂ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+