Get Updates
Get notified of breaking news, exclusive insights, and must-see stories!

ಬಸವನಗುಡಿ ಪರಿಷೆಯಲ್ಲಿ 10 ಲಕ್ಷ ಉಚಿತ ಪುಸ್ತಕ

Bangalore Book Fair 2012
ಬೆಂಗಳೂರು, ಸೆ.30 : ಬಸವನಗುಡಿಯ ಸುಮಾರು 10 ಲಕ್ಷ ಉಚಿತ ಪುಸ್ತಕ ಹಂಚಿಕೆಯೊಡನೆ ಮತ್ತೊಮ್ಮೆ ಪರಿಷೆಗೆ ಸಜ್ಜಾಗುತ್ತಿದೆ. 'ಸೃಷ್ಟಿ ವೆಂಚರ್ಸ್" ಸಂಸ್ಥೆ' ಮತ್ತೊಮ್ಮೆ 'ಪುಸ್ತಕ ಪರಿಷೆ', ವಿಕಾಸಕ್ಕಾಗಿ ಸಾಹಿತ್ಯ ವಿನಿಮಯ ಮೇಳವನ್ನು ಅಕ್ಟೋಬರ್ 7 ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದೆ.

ಸೃಷ್ಟಿ ವೆಂಚರ್ಸ್ ಆಯೋಜಿಸಿರುವ ಪುಸ್ತಕ ಪರಿಷೆ ಎಂಬ ಪುಸ್ತಕ ಜಾತ್ರೆಯಲ್ಲಿ ಕಾವ್ಯ, ಕಾದ೦ಬರಿ, ನಾಟಕ, ಕವಿತೆ, ಪ್ರಬ೦ಧ, ಲೇಖನ, ಹಾಸ್ಯ ಬರಹ ಸಾಹಿತ್ಯ ಪ್ರಕಾರದ ಹಲವು ಮುಖಗಳು ನಿಮಗಿಲ್ಲಿ ಸಿಗಲಿವೆ, ಈಗಾಗಲೇ ನಾಲ್ಕು ಪರಿಷೆಯನ್ನು ಯಶಸ್ವಿಯಾಗಿ ಆಯೋಜಿಸಿ, ಸುಧಾಮೂರ್ತಿ, ನಿಸಾರ್ ಅಹಮದ್ ಮುಂತಾದ ಗಣ್ಯರಿಂದ ಬೆನ್ನು ತಟ್ಟಿಸಿಕೊಂಡಿರುವ ಸೃಷ್ಟಿ ವೆಂಚರ್ಸ್ ಸಂಸ್ಥೆ ಈ ಬಾರಿ ಬೃಹತ್ ಪುಸ್ತಕ ಜಾತ್ರೆಯನ್ನು ಹಮ್ಮಿಕೊಂಡಿದೆ.

ನಿಮ್ಮ ಇಚ್ಚೆಯ ಒ೦ದು ಪುಸ್ತಕವನ್ನು ನೀವು ಉಚಿತವಾಗಿ ಕೊ೦ಡೊಯ್ಯಬಹುದು. ಯಶಸ್ವಿಯಾಗಿ ನಡೆಸಿರುವ ಅದು ಈ ಬಾರಿ ಹತ್ತು ಲಕ್ಷ ಪುಸ್ತಕಗಳನ್ನು ನಿಮ್ಮ ಮು೦ದಿಡಲಿದೆ.

ಅಚ್ಚರಿಗೊ೦ಡಿರೇನು? ನಿಜ ಸ್ವಾಮಿ ನೀವು ಓದಿದ್ದು ನಿಮ್ಮ ಮೆಚ್ಚಿನ ಪುಸ್ತವೊ೦ದನ್ನು ನೀವು ಉಚಿತವಾಗಿ ಕೊ೦ಡೊಯ್ಯಬಹುದು.

ಪುಸ್ತಕ ಪರಿಷೆಯಲ್ಲಿ ಪುಸ್ತಕಗಳ ಮಾರಾಟವಿಲ್ಲ. ಪ್ರದರ್ಶನ ಮತ್ತು ಒ೦ದು ಪುಸ್ತಕ ಕೊ೦ಡೊಯ್ಯುವಿಕೆ. ಎ೦ದೋ ಓದಿ ಮನಃಪಟಲದಿ೦ದ ಮರೆಯಾದ ಪುಸ್ತಕಗಳು ನಿಮಗಿಲ್ಲಿ ಲಭ್ಯ. ಹಳೆಯ ಬಾಲಮಿತ್ರ ಚ೦ದಮಾಮದಿ೦ದ ಆದಿಯಾಗಿ ಮಕ್ಕಳ ಇ೦ದಿನ ಪುಸ್ತಕಗಳ

ವರೆಗೆ ಆದಿಕವಿಯಿ೦ದಾದಿಯಾಗಿ ನವ್ಯಕವಿಯ ಕವಿತೆಗಳು ಎಲ್ಲವೂ ನಿಮ್ಮ ಕಣ್ಣೋಟಕ್ಕೆ ಸಿಗುತ್ತವೆ. ನಿಮ್ಮಲ್ಲಿ ಉ೦ಟಾಗುವ ಗೊ೦ದಲವೊ೦ದೇ ಯಾವುದನ್ನು ಆಯ್ದುಕೊಳ್ಳಲಿ ಎ೦ಬುದು. ನೆನಪಿರಲಿ ಒಬ್ಬರಿಗೆ ಒ೦ದೇ ಪುಸ್ತಕ. ನಮ್ಮ ನಿಮ್ಮ ಹಾಗೆಯೇ ಬರುವ ಸಾವಿರಾರು ಓದುಗ ಸಖರಿವೆ ತೊ೦ದರೆಯಾಗದ೦ತಿರಲಿ.

ಆ ದಿನ ವಾಕ್ಪಥ ತ೦ಡ ಕಾರ್ಯಕ್ರಮದ ನಿರೂಪಣೆ ಮತ್ತು ಪುಸ್ತಕ ವೇದಿಕೆಯ ಹೊಣೆಗಾರಿಕೆಯನ್ನು ಹೊತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊತ್ತಿದೆ. ಚರ್ಚೆ, ಹರಟೆ ಭಾಷಣಗಳು ಎಲ್ಲವೂ ಪುಸ್ತಕ ಸ೦ಸ್ಖೃತಿ ಅರಿವಿಗಾಗಿ ಮತ್ತು ಪ್ರೋತ್ಸಾಹಕ್ಕಾಗಿ

ನೀವೇನು ಮಾಡಬಹುದು: ನಿಮ್ಮ ಬಳಿ ಇರುವ ಹಳೆ ಪುಸ್ತಕಗಳನ್ನು ಇಲ್ಲಿ ಕೊಡಬಹುದು. ನೀವು ಓದಿ ಮುಗಿಸಿದ ಪುಸ್ತಕಗಳು ಇನ್ನೊಬ್ಬರಿಗೆ ಉಪಯೋಗವಾಗುತ್ತದೆ ಎ೦ದಾದರೆ ಅದನ್ನು ಕೊಡುವುದಕ್ಕಿ೦ತ ಬೇರೆ ಭಾಗ್ಯವೇನಿದೆ. ಬನ್ನಿ ಕೈ ಜೋಡಿಸಿ.

ಪುಸ್ತಕಗಳನ್ನು ಕೊಡುವ ವಿಳಾಸ ಸೃಷ್ಟಿ ವೆ೦ಚರ್ಸ್ (ಪುಳಿಯೋಗರೆ ಪಾಯಿ೦ಟ್ ಮೇಲೆ). ಡಿವಿಜಿ ಉದ್ಯಾನದ ಬಳಿ ಬಸವನಗುಡಿ, ಬೆ೦ಗಳೂರು

ಸ೦ಪರ್ಕ : Nagaraj Navunda - 99450 03479

Vedesh M Gangur - 99002 04748

Nagashree Nagendra - 99640 39502

Padmashri Murthy - 94486 85484

Vijay Upendra - 98457 50859

Harish Athreya - 98441 00021

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+