ಇಸ್ಲಾಂ ಕ್ಯಾನ್ಸರ್ ಎಂದ ಚಿತ್ರ ನಿರ್ದೇಶಕ ಬಂಧನ

ಈಜಿಪ್ಟ್ ಹಾಗೂ ಅಮೆರಿಕ ಮೂಲದ ನಿರ್ದೇಶಕ 2010ರಲ್ಲಿ ಚೆಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ತಿಂಗಳ ಸೆರೆಮನೆ ವಾಸ ಅನುಭವಿಸಿರುವುದು ಬೆಳಕಿಗೆ ಬಂದಿದೆ.
ಅನುಮತಿ ಇಲ್ಲದೆ ಸ್ಯಾಮ್ ಬ್ಯಾಸಿಲ್ 60 ತಿಂಗಳುಗಳ ಕಾಲ ಕಂಪ್ಯೂಟರ್ ಅಥವಾ ಇಂಟರ್ನೆಟ್ ಬಳಕೆ ಮಾಡುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.
ಇಸ್ಲಾಂ ವಿರೋಧಿ ಚಿತ್ರದ ವಿರುದ್ಧ ಗಲಭೆ ಆರಂಭವಾಗುತ್ತಿದ್ದಂತೆ 55 ವರ್ಷದ ಕಾಪ್ಟಿಕ್ ಕ್ರಿಶ್ಚಿಯನ್ ತಲೆಮರೆಸಿಕೊಂಡು ಅಜ್ಞಾತವಾಸ ಅನುಭವಿಸಿದ್ದರು.
ಯುಟ್ಯೂಬ್ ನಲ್ಲಿ 13 ನಿಮಿಷದ ಚಿತ್ರ ಕಳೆದ ಜುಲೈನಲ್ಲಿ ಮೊದಲಿಗೆ ಪ್ರಸಾರವಾಗಿತ್ತು. ನಂತರ ಇದರ ವಿರುದ್ಧ ಮಧ್ಯಪ್ರಾಚ್ಯ ದೇಶ ಸೇರಿದಂತೆ ಜಗತ್ತಿನೆಲ್ಲೆಡೆ ಪ್ರತಿಭಟನೆ ನಡೆದಿತ್ತು. ಭಾರತದ ಕೋಲ್ಕತ್ತ ಮುಂತಾದೆಡೆ ಕೂಡಾ ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆದಿತ್ತು.
ಬಾಸಿಲ್ ಹೇಳಿಕೆ ಹಾಗೂ ಚಿತ್ರವನ್ನು ವೀಕ್ಷಿಸಿದ ಮುಸ್ಲಿಮರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. 'ಇಸ್ಲಾಂ ಕ್ಯಾನ್ಸರ್ ಇದ್ದಂತೆ' ಎಂದು ಹೇಳಿಕೆ ನೀಡಿರುವ ಬಾಸಿಲ್ ಗೆ ಯಾರೂ ಆಶ್ರಯ ನೀಡಬಾರದು ಬಾಸಿಲ್ ನಮ್ಮ ವಶಕ್ಕೆ ಒಪ್ಪಿಸಿ ಎಂದು ಆಕ್ರೋಶ ಭರಿತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಜ್ಞಾತ ಸ್ಥಳದಿಂದ ಮಂಗಳವಾರ(ಸೆ.11) ಪ್ರತಿಕ್ರಿಯಿಸಿದ ಬಾಸಿಲ್, ನನ್ನ ಚಿತ್ರದಲ್ಲಿ ಏನು ಹೇಳಿದ್ದೀನೋ ಅದನ್ನೇ ಮತ್ತೊಮ್ಮೆ ಹೇಳುತ್ತೇನೆ. ಇಸ್ಲಾಂ ಕ್ಯಾನ್ಸರ್ ಇದ್ದಂತೆ ನಾನು ಚಿತ್ರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.
ಬಾಸಿಲ್ ಅವರು ನಿರ್ದೇಶಿಸಿರುವ ಚಿತ್ರದಲ್ಲಿ ಇಸ್ಲಾಂ ಧರ್ಮ ಗುರು ಪ್ರವಾದಿ ಮಹಮ್ಮದ್ ಅವರು ಶಿಶು ಲೈಂಗಿಕ ಕಿರುಕುಳಕ್ಕೆ ಪ್ರೋತ್ಸಾಹಿಸ ನೀಡುತ್ತಿದ್ದರು ಎಂಬಂತೆ ದೃಶ್ಯಗಳನ್ನು ಚಿತ್ರಿಸಲಾಗಿದೆ ಎನ್ನಲಾಗಿದೆ.
ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಹೊಂದಿದ್ದ ಸುಮಾರು 700 ಯೂ ಟ್ಯೂಬ್ ಲಿಂಕ್ ಗಳನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿತ್ತು. ಅಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ವಿವಾದಿತ ಚಿತ್ರದ ದೆಸೆಯಿಂದ ಜಗತ್ತಿನೆಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಆರಂಭವಾಗಿ ಲಿಬಿಯಾ ದೇಶದ ಯುಎಸ್ ರಾಯಭಾರಿ ಹತ್ಯೆಯಾದ ನಂತರ ಗೂಗಲ್ ಇಂಡಿಯಾ ಎಚ್ಚೆತ್ತುಕೊಂಡಿದೆ.
ಭಾರತದಲ್ಲಿ ಇಸ್ಲಾಂ ವಿರೋಧಿ ಚಿತ್ರವನ್ನು ನಿಷೇಧಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಗೂಗಲ್ ಸರ್ಚ್ ನಲ್ಲಿ ಚಿತ್ರದ ಕ್ಲಿಪ್ಪಿಂಗ್ ಗಳು ಕಾಣಿಸಿಕೊಂಡಿತ್ತು.
ಭಾರತ, ಇಂಡೋನೇಷಿಯಾ, ಲಿಬಿಯಾ ಹಾಗೂ ಈಜಿಪ್ಟ್ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಡಿಯೋ ಪ್ರಸಾರ ನಿರ್ಬಂಧಿಸಲಾಗಿದೆ.












Click it and Unblock the Notifications