ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಷಿತ ಗಂಡಂದಿರ ಗೋಳು ಕೇಳುವವರಾರು?

|
Google Oneindia Kannada News

Men harassment is 498A section is a weapon
ಬೆಂಗಳೂರು, ಸೆ 27 : ಮಹಿಳೆಯರಿಗೊಂದು ಕಾನೂನು, ಪುರುಷರಿಗೊಂದು ಕಾನೂನು. ಪುರುಷರಿಂದ ಮಹಿಳೆಯರಿಗೆ ದೌರ್ಜನ್ಯ, ತೊಂದರೆಯಾದರೆ ಅವರ ಪರವಾಗಿ ಕಾನೂನು ಇದೆ, ಆಯೋಗಗಳಿವೆ.

ಆದರೆ ಮಹಿಳೆಯಿಂದ ಪುರುಷರಿಗೆ ತೊಂದರೆಯಾದರೆ ಯಾವ ಕಾನೂನು ಇದೆ? ಇದರ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಪರಾಂಬರಿಸಿ ಕಾನೂನು ರೂಪಿಸಬೇಕಲ್ಲವೇ?

ಇದು ಮೂವತ್ತಕ್ಕೂ ಹೆಚ್ಚು ಗಂಡಂದಿರು ತಮ್ಮ ತಮ್ಮ ಮಡದಿಯರಿಂದ ನೋವು, ಕಿರುಕುಳ ಅನುಭವಿಸಿ, ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡ 'ದರ್ದ್ ಭರಿ ಕಹಾನಿ'.

ಇವರ ನೋವಿನ ಕಥೆಗಳನ್ನು ಶಾಸಕರ ಭವನದದಲ್ಲಿ ನಡೆದ ಕರ್ನಾಟಕ ರಾಜ್ಯ ಪುರುಷರ ರಕ್ಷಣಾ ಸಮಿತಿ ಏರ್ಪಡಿಸಿದ್ದ 498A ಮಸೂದೆ ವಿಚ್ಛೇದನ ತಿದ್ದುಪಡಿ ಮೇಲಿನ ವಿಚಾರ ಸಂಕಿರಣದಲ್ಲಿ ಹಂಚಿಕೊಳ್ಳಲಾಯಿತು.

ಸರಕಾರ ಮತ್ತು ನ್ಯಾಯಾಲಯ ಮಹಿಳೆಯರ ಪರ 498A ಮಸೂದೆ ತಂದಿದೆ. ಇದನ್ನೇ ಮುಂದಿಟ್ಟುಕೊಂಡು ಅದೆಷ್ಟೋ ಮಹಿಳೆಯರು ರಾದ್ದಾಂತ ಮಾಡುತ್ತಾರೆ.

ಮಹಿಳೆಯರು ಪೊಲೀಸ್ ಕಂಪ್ಲೈಂಟ್ ಕೊಟ್ಟರೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಅದೇ ಪುರುಷರು ಕೊಟ್ಟರೆ ಅವರನ್ನೇ ಜೈಲಿಗೆ ತಳ್ಳುತ್ತಾರೆ.

ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ ಗಂಡನನ್ನು, ಅವರ ತಂದೆ ತಾಯಿ ಮತ್ತು ಕುಟುಂಬವನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ವಿಚ್ಛೇದನ ಕೊಡೋದಕ್ಕೂ ಒಪ್ಪದೇ ಮಾನಸಿಕವಾಗಿ ಹಿಂಸಿಸುತ್ತಾರೆ ಎಂದು ಸಂಕಿರಣದಲ್ಲಿ ನೊಂದ ಗಂಡಂದಿರು ತಮ್ಮ ನೋವು ತೋಡಿಕೊಂಡರು.

ಸಾಫ್ಟ್ ವೇರ್ ಉದ್ಯೋಗಿಗಳು, ಕಿರುತೆರೆ ಕಲಾವಿದರು ಕೂಡಾ (ಅದು ಯಾರೆಂದು ಕೇಳಬೇಡಿ) ಹೆಂಡತಿಯರಿಂದ ಅನುಭವಿಸಿದ ಮಾನಸಿಕ ನೋವನ್ನು ಹಂಚಿಕೊಂಡು ಸಂಕಿರಣದಲ್ಲಿ ಕಣ್ಣೀರು ಹಾಕಿದರು.

ಕೌಟುಂಬಿಕವಾಗಿ ಮನಸ್ತಾಪ ನಡೆದರೆ ಗಂಡ ಮತ್ತು ಹೆಂಡತಿ ಇಬ್ಬರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ದುಡಿಯುವ ಹೆಂಡತಿಯನ್ನೂ ಆರ್ಥಿಕವಾಗಿ ಪಾಲುದಾರರನ್ನಾಗಿಸಬೇಕು.

ಇದೆಲ್ಲಾ ಸಾಧ್ಯವಾಗಬೇಕಾದರೆ ಮಹಿಳೆಯರ ಪರವಿರುವ 498A ಮಸೂದೆಗೆ ತಿದ್ದುಪಡಿ ತರಬೇಕೆನ್ನುವುದು ಇವರೆಲ್ಲಾ ಒಕ್ಕೂರಿಲಿನ ಒತ್ತಾಯ.

ಕೆಲ ದಿನಗಳ ಹಿಂದೆ, ಗಂಡಂದಿರು ತಮ್ಮ ಪತ್ನಿಯರಿಗೆ ಕಡ್ಡಾಯವಾಗಿ ಮಾಸಿಕ ಲೆಕ್ಕಾಚಾರದಲ್ಲಿ ಸಂಬಳ ನೀಡುವ ಪದ್ದತಿ ಜಾರಿಗೆ ತರಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.

ಐಪಿಸಿ 498A - ಪುರುಷ ಅಥವಾ ಪುರುಷನ ಸಂಬಂಧಿಕರು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಅದು ಸಾಬೀತಾದರೆ ನ್ಯಾಯಾಲಯ ಈ ಕಾಯ್ದೆಯಡಿ ಮೂರು ವರ್ಷದವರೆಗೆ ನೀಡಬಹುದಾದ ಶಿಕ್ಷೆ.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿದ್ದ ಈ ಮಸೂದೆ ಕೆಲವೊಮ್ಮೆ ದಾರಿ ತಪ್ಪುತ್ತಿದೆಯೇ? ಏನಂತೀರಿ ಓದುಗರೇ? [ಗಂಡನನ್ನು ಬಾಲ್ಕನಿಯ ತಳ್ಳಿದ ಹೆಂಡತಿ]

English summary
Distressed men (husbands) raise voice against women for harassing them by misusing section 498A of Indian Penal Code, the gubernatorial notarial law. A seminar in Bangalore tried to draw the attention of law makers to take a re-look at the amendment to the act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X