ಕ್ವಾರಿ ಕೊಳ್ಳಕ್ಕೆ ಬಿದ್ದು 3 ಯುವತಿಯರ ದಾರುಣ ಅಂತ್ಯ

Karkala : Three Women Workers Drown in Quarry Pond
ಕಾರ್ಕಳ, ಸೆ.27: ಇಲ್ಲಿನ ಪಳ್ಳಿಗ್ರಾಮದ ಕೈರಬೆಟ್ಟು ನೆಲ್ಲಿಗುಡ್ಡೆ ಬಳಿ ಇರುವ ಕಲ್ಲಿನ ಕ್ವಾರಿಯಲ್ಲಿ ಶೇಖರಣೆಗೊಂಡಿದ್ದ ಮಳೆ ನೀರಿಗಿಳಿದ ಯುವತಿಯರು ಮೂವರು ಹೆಣವಾಗಿ ತೇಲಿದ ದಾರುಣ ಘಟನೆ ಬುಧವಾರ(ಸೆ.26) ಸಂಜೆ ನಡೆದಿದೆ.

ಸ್ನಾನಕ್ಕೆಂದು ತೆರಳಿದ ಮೂವರು ಕೂಲಿ ಕಾರ್ಮಿಕ ಯುವತಿಯರು ಸಂಜೆ ಗತ್ತಲೆಯಲ್ಲಿ ಇಳಿದಿದ್ದಾರೆ. ಆದರೆ,

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಭಾರತಿ(18), ರತ್ನಮ್ಮ (20) ಹಾಗೂ ಹುಲಿಯಮ್ಮ (19) ಎಂಬವರು ಮೃತಪಟ್ಟವರಾಗಿದ್ದಾರೆ.

ಘಟನೆ ವಿವರ: ಕಾರ್ಕಳ ತಾಲೂಕಿನ ಪಳ್ಳಿಗ್ರಾಮದ ಕೈರಬೆಟ್ಟು ನೆಲ್ಲಿಗುಡ್ಡೆ ಬಳಿ ಇರುವ ಗೌರೀಶ್ ಕ್ರಶರ್ ಎಂಬ ಕಲ್ಲು ಕೋರೆಯಲ್ಲಿ ಈ ದುರಂತ ಸಂಭವಿಸಿದೆ. ಭಾರತಿ, ರತ್ನಮ್ಮ ಹಾಗೂ ಹುಲಿಯಮ್ಮ ಕೂಲಿ ದೈನಂದಿನ ಕೆಲಸ ಮುಗಿಸಿದ ಮೇಲೆ ಕಲ್ಲಿನ ಕ್ವಾರಿ ಬಳಿ ಬಂದಿದ್ದಾರೆ. ಸುಮಾರು 14 ಅಡಿ ಆಳವಿರುವ ಕೋರೆಯಲ್ಲಿದ್ದ ನೀರಿನಲ್ಲಿ ಸ್ನಾನಕ್ಕೆಂದು ಸಂಜೆ 4 ಗಂಟೆ ಸುಮಾರಿಗೆ ಹುಲಿಯಮ್ಮರ ತಾಯಿ ಹಾಲಮ್ಮ ಎಂಬವರೊಂದಿಗೆ ತೆರಳಿದ್ದಾರೆ.

ಹಾಲಮ್ಮ ಬಟ್ಟೆ ಒಗೆದು ಮನೆಗೆ ತೆರಳಿದ್ದರು. ಆದರೆ ಈ ಮೂವರು ಬಹಳ ಸಮಯ ಕಳೆದರೂ ಮನೆಗೆ ಹಿಂದಿರುಗದೆ ಇದ್ದಾಗ ಗಾಬರಿಗೊಂಡ ಹಾಲಮ್ಮ ಮರಳಿ ಕೋರೆಯ ಬಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ದುರಂತ ಸಂಜೆ 4ರ ಸುಮಾರಿಗೆ ಸಂಭವಿಸಿದ್ದರೂ ಪೊಲೀಸರಿಗೆ 6 ಗಂಟೆಯವರೆಗೂ ಯಾವುದೇ ಮಾಹಿತಿ ಇರಲಿಲ್ಲ ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ತೆರಳಿದ್ದಾರೆ. ಅಷ್ಟರಲ್ಲಿ ಓರ್ವ ಯುವತಿಯ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಬಳಿಕ ಕಾರ್ಯಾ ಚರಣೆ ನಡೆಸಿದ ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರು ಇನ್ನಿಬ್ಬರ ಮೃತದೇಹವನ್ನು ಮೇಲಕ್ಕೆತ್ತಿದರು.

ಘಟನಾ ಸ್ಥಳಕ್ಕೆ ಶಾಸಕ ಎಚ್. ಗೋಪಾಲ ಭಂಡಾರಿ, ತಹಸೀಲ್ದಾರ್ ಜಗನ್ನಾಥ್ ರಾವ್, ಕಂದಾಯ ಅಧಿಕಾರಿ ವಿಶ್ವನಾಥ್ ಭಟ್ ಭೇಟಿ ನೀಡಿದ್ದಾರೆ. ಗ್ರಾಮಾಂತರ ಠಾಣಾಧಿಕಾರಿ ಅಜ್ಮತ್ ಅಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಕಳೆದ ಒಂದು ವರ್ಷದ ಅವಧಿಯಲ್ಲಿ ಇಲ್ಲಿನ ನಂದಳಿಕೆ, ಕೈರಬೆಟ್ಟು, ನೆಲ್ಲಿಗುಡ್ಡೆ, ಸೂಡ ಪರಿಸರದ ಕಲ್ಲುಕೋರೆ ಸದ್ದು ಮಾಡುತ್ತಲ್ಲೇ ಇದೆ. ಅದರೆ, ಕ್ವಾರಿಯಲ್ಲಿ ಅನೇಕ ದುರಂತಗಳು ವಾದಿಯಾಗಿದ್ದರು. ಕಲ್ಲು ಕ್ವಾರಿಗಳ ಬದಿಗಳಲ್ಲಿ ತೆಗೆದಿರುವ ಹಳ್ಳಗಳನ್ನು ಮುಚ್ಚಿಲ್ಲ. ಇದರಿಂದ ಈ ರೀತಿ ದುರಂತಗಳು ಸಾಮಾನ್ಯವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯವಹಿಸಿದೆ. ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+