ಒಂದಷ್ಟು ದಿನ ಪೆಟ್ರೋಲ್ ಪೂರೈಕೆ ಸೀಮಿತ ಅವಧಿಗೆ

petrol-bunks-to-work-for-8-hours-from-october-15
ನವದೆಹಲಿ, ಸೆ. 27: ಯಾಕೋ ಈ ಪೆಟ್ರೋಲ್ ರಗಳೆ ಮುಗಿಯೋ ಹಾಗೇ ಕಾಣೂತ್ತಿಲ್ಲ. ಪೆಟ್ರೋಲ್ ಬಂಕ್‌ಗಳ ಡೀಲರುಗಳು ಈಗ ತಮ್ಮ ಕಮಿಷನ್ ಏರಿಸಿ ಎಂಬ ಬೇಡಿಕೆ ಮುಂದೊಡ್ಡಿದ್ದಾರೆ. ಡೀಲರ್ ಕಮಿಷನ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಮೇಲೆ ಒತ್ತಡ ಹೇರಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಈಗಾಗಲೇ ಜನ ಪೆಟ್ರೋಲ್ ಹೆಸರು ಹೇಳಿದರೇನೆ ದಗದಗಾ ಅಂತ ಉರಿದು ಬೀಳುತ್ತಿದ್ದಾರೆ. ಅಂತಹುದರಲ್ಲಿ ಆ ಪಾಟಿ ದುಡ್ಡು ಕೊಟ್ಟರೂ ಪೆಟ್ರೋಲ್ ಸರಬರಾಜು ಮಾಡೊಲ್ಲ ಅಂದರೆ ತಮಗೇ ಸಂಚಕಾರ ಬರುತ್ತದೆ ಎಂಬುದನ್ನು ಮನಗಂಡ ಪೆಟ್ರೋಲ್ ಬಂಕ್‌ಗಳು ತಮ್ಮ ಬೇಡಿಕೆ ಆಗ್ರಹಿಸಿ ಅಕ್ಟೋಬರ್ 15ರಿಂದ ಒಂದೇ ಪಾಳಿಯಲ್ಲಿ ಅಂದರೆ ನಿಯಮಿತ ಅವಧಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುವುದಾಗಿ ಬೆದರಿಕೆ ಹಾಕಿವೆ.

ಬೇಡಿಕೆಗೆ ಸರಕಾರ (Ministry of Petroleum and Natural Gas) ತಕ್ಷಣ ಸ್ಪಂದಿಸದಿದ್ದರೆ ದೇಶಾದ್ಯಂತ 18 ರಾಜ್ಯಗಳಲ್ಲಿರುವ 70 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕುಗಳು ದಿನಕ್ಕೆ 8 ಗಂಟೆ ಕಾಲ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದರೆ ಆ 8 ಗಂಟೆಯ ಅವಧಿ ಯಾವಾಗ ಎಂಬುದನ್ನು ಡೀಲರುಗಳು ಸದ್ಯಕ್ಕೆ ತೀರ್ಮಾನಿಸಿಲ್ಲ.

ಪೆಟ್ರೋಲ್ ಬಂಕ್ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದೆ. ಇದರಿಂದ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಮಗಿರುವುದು ಇದೊಂದೇ ಮಾರ್ಗ ಎಂದು ಅಖಿಲ ಭಾರತ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ (Confederation of Indian Petroleum Dealers) ಮುಖ್ಯಸ್ಥ ಅಶೋಕ್ ಬದ್ವಾರ್ ತಿಳಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಡೀಲರ್ ಕಮಿಷನ್ ಪರಿಷ್ಕರಿಸಲಾಗಿತ್ತು. ಲೀಟರ್ ಪೆಟ್ರೋಲ್‌ಗೆ ರೂ. 1.49 ಮತ್ತು ಲೀಟರ್ ಡೀಸೆಲ್‌ಗೆ ರೂ. 0.91 ಬೆಲೆ ನಿಗದಿಪಡಿಸಲಾಗಿತ್ತು. ಈ ಮಧ್ಯೆ ಪೆಟ್ರೋಲ್ ಬೆಲೆ ಮಾತ್ರ ಒಂದೇ ಸಮನೆ ಏರುತ್ತಿದೆ. ಆದರೆ ಪೆಟ್ರೋಲ್ ಬಂಕ್ ನಿರ್ವಾಹಕರಿಗೆ ಕಮಿಷನ್ ಹೆಚ್ಚಳ ಮಾಡುತ್ತಿಲ್ಲ. ಆದ್ದರಿಂದ ತಕ್ಷಣ ಈ ಕಮಿಷನ್ ಹೆಚ್ಚಿಸಿ ಎಂದು ಆಗ್ರಹಿಸಿ, ಒಕ್ಕೂಟವು ನಿಗದಿತ/ಸೀಮಿತ ಅವಧಿಯಲ್ಲಿ ಪೆಟ್ರೋಲ್ ಬಂಕ್ ನಡೆಸಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+