ಅಂತರ್ಜಾಲ ಜೂಜಿಗೆ ಕಾನೂನು ಮಾನ್ಯತೆ ಇಲ್ಲ, ಎಚ್ಚರಾ

ಇನ್ನು ಇಂತಹ ಜೂಜಾಟದ ಗೇಮುಗಳಲ್ಲಿ ಹಣಕಾಸು ನೆರವು ಬ್ಯಾಂಕುಗಳೂ ಹಣ ಕಳೆದುಕೊಂಡು ಕೋರ್ಟುಗಳಿಗೆ ಮೊರೆ ಹೋಗುವಂತಿಲ್ಲ. ಇದೆಲ್ಲ at their own risk ಎಂಬಂತೆ ಎಂದು ಕೋರ್ಟ್ ಕಡ್ಡಿ ಮುರಿದಂತೆ ಹೇಳಿದೆ. ಆದ್ದರಿಂದ ಹಣದಾಸೆಗೆ ಬಿದ್ದು ಇಂತಹ ಗೇಮುಗಳನ್ನಾಡುವವರು ಕಟ್ಟೆಚ್ಚರ ವಹಿಸಿ.
ಬೆಟ್ಟಿಂಗ್ ಅಂದರೆ Chess, Billiards, Rummy, Poker, Golf, Bridge ಮತ್ತು Snooker ಅಂತಹ ಜೂಜಾಟ ಕಾನೂನುಬಾಹಿರ. ಆದ್ದರಿಂದ ಅಂತಹುದಕ್ಕೆ ಹಣ ಕಟ್ಟಿಸಿಕೊಳ್ಳುವುದು ಕಾನೂನಿನಲ್ಲಿ ಮಾನ್ಯತೆಯಿಲ್ಲ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಯಾನ್ ಮಲ್ಹೋತ್ರಾ ಅವರು ತಿಳಿಸಿದ್ದಾರೆ.
ಸಂವಿಧಾನದಡಿ Article 19 (1)(g) ಅನುಸಾರ ಯಾವುದೇ ಉದ್ಯೋಗ, ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅವಕಾಶ ಇದೆ. ಆದರೆ ಇದರ ದುರುಪಯೋಗ ಮಾಡಿಕೊಂಡು ಆನ್ ಲೈನ್ ಗೇಮಿಂಗ್ ನಲ್ಲಿ ತೊಡಗುವುದು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಆನ್ ಲೈನ್ ಗೇಮಿಂಗ್ ಪಿಡುಗು ಮಾಹಿತಿ ತಂತ್ರಜ್ಞಾನದ ಇಂದಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಆನ್ ಲೈನ್ ಗೇಮಿಂಗ್ ನಡೆಸುವವರಿಗೆ ಸದರ ಕೊಟ್ಟಂತಾಗುತ್ತದೆ.
ದುರಂತವೆಂದರೆ ಇಂತಹ ಗೇಮುಗಳ ಮೇಲೆ ಕಡಿವಾಣ/ನಿಯಂತ್ರಣ ಸಾಧಿಸುವುದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಆದರೆ Reserve Bank of Indiaದ Information Technology Rules of 2011 ಅನುಸಾರ ಇಂತಹ ಜೂಜಾಟದಲ್ಲಿ ವಿಜೇತರಿಗೆ ಹಣ ಸಂದಾಯ ಮಾಡುವುದಕ್ಕೆ ಅಧಿಕೃತ ಮಾನ್ಯತೆ ಇಲ್ಲ. ಆದರೆ ಅದೇ ಹಣ ಅಂತಾರಾಷ್ಟ್ರೀಯ ಹಣ ವರ್ಗಾವಣೆ ಮೂಲಕ ವಿಜೇತರಿಗೆ ತಲುಪುವ ವ್ಯವಸ್ಥೆ ಇದೆ.


Click it and Unblock the Notifications
