ದೆಹಲಿ ವಿಶ್ವವಿದ್ಯಾಲಯ: 2 ಅತ್ಯಾಚಾರ, 2 ಬಂಧನ

delhi-university-students-molested-two-boy-friends-held
ನವದೆಹಲಿ, ಸೆ.24: ರಾಜಧಾನಿಯ ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರೆಣ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಬ್ಬರೂ ಬಾಧಿತ ವಿದ್ಯಾರ್ಥಿನಿಯರ ಬಾಯ್ ಫ್ರೆಂಡುಗಳಾಗಿದ್ದು, ವಾರಾಂತ್ಯ ಮೋಜಿಗಾಗಿ ಮೊನ್ನೆ ಶನಿವಾರ ಇಬ್ಬರೂ ವಿದ್ಯಾರ್ಥಿನಿಯರನ್ನು ತಮ್ಮ ಬೈಕುಗಳಲ್ಲಿ ಊರು ಸುತ್ತಲು ಹೋದಾಗ ಈ ದುರ್ಘಟನೆ ನಡೆದಿದೆ.

ಆರೋಪಿಗಳನ್ನು ಅಜಿತ್ ಮತ್ತು ವಿಕ್ಕಿ ಎಂದು ಗುರುತಿಸಲಾಗಿದ್ದೆ. ಪಶ್ಚಿಮ ದೆಹಲಿಯ ಭಾವನಾ ಪ್ರದೇಶದಲ್ಲಿ ಅಡಗಿದ್ದ ಈ ಕಾಮುಕರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಸುನಿಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೂವರು ಯುವಕರು 20ರ ಆಸುಪಾಸಿನಲ್ಲಿರುವವರು ಎನ್ನಲಾಗಿದೆ.

ಬಾಧಿತ ಯುವತಿಯರು ದೆಹಲಿ ವಿವಿಯಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಶನಿವಾರ ಸಂಜೆ ಇವರೇನು ಮಾಡಿದರೆಂದರೆ ತಮ್ಮ ಬಾಯ್ ಫ್ರೆಂಡುಗಳಾದ ಸುನಿಲ್ ಮತ್ತು ವಿಕ್ಕಿ ಅವರ ಬೈಕನ್ನೇರಿ ವೀಕೆಂಡ್ ಮೋಜಿಗೆ ತೆರಳಿದ್ದಾರೆ. ಸರಿ ಯುವಕರಿಬ್ಬರೂ ಸದರಿ ವಿದ್ಯಾರ್ಥಿನಿಯರನ್ನು ತಮ್ಮ ಬೈಕುಗಳಲ್ಲಿ ಕೂಡಿಸಿಕೊಂಡು ಸೀದಾ ಮತ್ತೊಬ್ಬ ಗೆಳೆಯ ಅಜಿತನ ಗ್ಯಾರೇಜ್ ಬಳಿ ತೆರಳಿದ್ದಾರೆ.

ಅಲ್ಲಿ ಗ್ಯಾರೇಜಿನಲ್ಲಿ... ಬಾಯ್ ಫ್ರೆಂಡುಗಳು ಸದರಿ ವಿದ್ಯಾರ್ಥಿನಿಯರಿಗೆ ವೆಲ್ ಕಮ್ ಡ್ರಿಂಕ್ ನೀಡಿದ್ದಾರೆ. ಯಾವುದೇ ಅನುಮಾನದ ವಾಸನೆ ಬಾರದಿದ್ದರಿಂದ ಯುವತಿಯರು ಅದನ್ನು ಕುಡಿದಿದ್ದಾರೆ. ಆದರೆ ತ್ರಿಮೂರ್ತಿ ಬಾಯ್ ಫ್ರೆಂಡುಗಳು ಆ ಪಾನೀಯದಲ್ಲಿ ಮತ್ತು ಬರಿಸುವ ಪದಾರ್ಥವನ್ನು ಬೆರೆಸಿರುವುದು ಅವರ ಗಮನಕ್ಕೆ ಬರಲೇ ಇಲ್ಲ. ಹಾಗಾಗಿ, ಅದನ್ನು ಕುಡಿಯುತ್ತಿದ್ದಂತೆ ಯುವತಿಯರು ಪ್ರಜ್ಞೆತಪ್ಪಿದ್ದಾರೆ.

ಆಗ ಶುರುಹಚ್ಚಿಕೊಂಡಿದ್ದಾರೆ... ತ್ರಿಮೂರ್ತಿಗಳು ತಮ್ಮ ಪರಾಕ್ರಮವನ್ನು. ಇಬ್ಬರೂ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಕಾಮುಕರು ಸ್ಥಳದಿಂದ ಪರಾರಿಯಾಗಿದ್ದಾರೆ.

'ಪ್ರಜ್ಞೆ' ಮರಳಿದ ಬಳಿಕ... ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಆದರೆ ಆವೇಳೆಗೆ ಎಲ್ಲವೂ ಮುಗಿದಿದೆ. ಸಾವರಿಸಿಕೊಂಡು ಮನೆಯತ್ತ ಹೆಜ್ಜೆ ಹಾಕಿದ ಯುವತಿಯರು ತಮ್ತಮ್ಮ ಪೋಷಕರ ಬಳಿ ಹಿಂಗಿಂಗಾಯ್ತು ಅಂತ ಅಲವತ್ತುಕೊಂಡಿದ್ದಾರೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಲಾಗಿ, ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ. ಬಾಧಿತ ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+