ಇಸ್ರೋ ಪ್ರವೇಶಿಸಿದ ನಕಲಿ ಮಹಿಳಾ ವಿಜ್ಞಾನಿ ಬಂಧನ

Woman enters ISRO with fake ID, arrested0
ಬೆಂಗಳೂರು, ಸೆ. 24 : ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಇಸ್ರೋದ ಕೇಂದ್ರ ಕಚೇರಿಗೆ ನಕಲಿ ಗುರುತುಪತ್ರ ಬಳಸಿ ಹಿರಿಯ ವಿಜ್ಞಾನಿಯ ಸೋಗಿನಲ್ಲಿ ಬಂದಿದ್ದ ಮಹಿಳೆಯೋರ್ವಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಬ್ಯೂಲಾ ಎಂ. ಸ್ಯಾಮ್ (40) ಎಂಬ ಮಹಿಳೆಯನ್ನು ಜೀವನಭೀಮಾ ನಗರದ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಆಕೆಯನ್ನು ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಕೆ ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಮಣ್ಣೆರಚಿ ಸಂಶೋಧನಾ ಸಂಸ್ಥೆಯೊಳಗೆ ಹೇಗೆ ಬಂದಳು, ಅಲ್ಲಿ ಯಾರ್ಯಾರನ್ನು ಭೇಟಿಯಾದಳು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಬ್ಯೂಲಾ ನಕಲಿ ಗುರುತುಪತ್ರ ಬಳಸಿ ಸೆ.19 ಮತ್ತು 20ರಂದು ಎರಡು ದಿನಗಳ ಕಾಲ ಜೀವನಭೀಮಾ ನಗರದಲ್ಲಿರುವ ಇಸ್ರೋದ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದಾಳೆ. ಆದರೆ, ಸೆ.21ರಂದು ಆ ಸಂದರ್ಭದಲ್ಲಿ ಆಕೆ ಅನುಮಾನಾಸ್ಪದವಾಗಿ ಅಡ್ಡಾಡುತ್ತಿರುವುದನ್ನು ಗಮನಿಸಿದ ಬಿಎಸ್ಎಫ್ ಸಬ್ ಇನ್‌ಸ್ಪೆಕ್ಟರ್ ರಾಮರಾವ್ ಎಂಬುವವರು ಆಕೆಯ ವಿಚಾರಣೆ ಮಾಡಿದ್ದಾರೆ. ವಿಚಾರಣೆಯಲ್ಲಿ ಸಂಶಯಾಸ್ಪದವಾಗಿ ಉತ್ತರ ನೀಡಿದಾಗ ಆಕೆಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿಯವರು ಮಾಧ್ಯಮಗಳಿಗೆ ಸೋಮವಾರ ತಿಳಿಸಿದರು.

ಅಹ್ಮದಾಬಾದ್ ಮೂಲದ ಬ್ಯೂಲಾ ಎಂ. ಸ್ಯಾಮ್ ಎಂಬ ಈ ಮಹಿಳೆ ಕೇರಳ ಮೂಲದ ಅಲೆಕ್ಸ್ ಎಂಬಾತನನ್ನು ಮದುವೆಯಾಗಿದ್ದಳು. ಆಕೆಯನ್ನು ಬಂಧಿಸಿರುವ ಪೊಲೀಸರು ಅಲೆಕ್ಸ್‌ನನ್ನು ಕೂಡ ವಿಚಾರಣೆಗೆ ಗುರಿಪಡಿಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ತಿಳಿಯದೆ ಇಸ್ರೋ ಸಂಸ್ಥೆ ಪ್ರವೇಶಿಸಿದ್ದಾಳೆ ಎಂದು ಹೇಳಿದ್ದಾನೆ. ಆದರೆ, ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೆ ನಕಲಿ ಐಡಿ ಕಾರ್ಡ್ ಪಡೆಯಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಭೇದಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.

ಇಸ್ರೋದಂಥ ಸಂಸ್ಥೆಗೆ ಒದಗಿಸಿರುವ ಬಿಗಿ ಭದ್ರತೆಯನ್ನು ಭೇದಿಸಿ ವಿಜ್ಞಾನಿಯ ಸೋಗಿನಲ್ಲಿ ಬಂದ ಆ ಮಹಿಳೆ ಪ್ರವೇಶಿಸಿರುವುದು ಭದ್ರತೆ ಕುರಿತಂತೆಯೇ ಪ್ರಶ್ನೆಗಳೇಳುವಂತೆ ಮಾಡಿದೆ. ಕಳೆದ ತಿಂಗಳು ಆಗಸ್ಟ್‌ನಲ್ಲಿ ಕೂಡ, ಪತ್ರಕರ್ತ, ಸಂಸದರನ್ನು ಹತ್ಯೆಗೈಯುವ ಸಂಚಿನಲ್ಲಿ ಭಾಗಿಯಾಗಿದ್ದ ಡಿಆರ್‌ಡಿಓದಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿ ಇಜಾಜ್ ಮೊಹಮ್ಮದ್ ಮಿರ್ಜಾನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದನ್ನು ಇಲ್ಲಿ ನೆನೆಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+