ಸಿಗರೇಟ್‌ ಸೇದಿರಿ, ನಮ್ಮಪ್ಪನ ಗಂಟೇನೂ ಹೋಗೊಲ್ಲ

ಸಿಗರೇಟು

ಹಾನಿಕಾರಕ
ಎಂದು
ಹೇಳುವ
ಲಕ್ಷಾಂತರ,
ವೈಜ್ಞಾನಿಕ
ಲೇಖನಗಳು
ಜಗತ್ತಿನಲ್ಲಿ
ಪ್ರಕಟವಾಗಿವೆ.
ಅದರಲ್ಲಿ
ಅನೇಕವನ್ನು
ನೀವು
ಓದಿರಲಿಕ್ಕೂ
ಸಾಕು.
ಓದಿ
ಸಿಗರೇಟು
ಸೇದಿರಲಿಕ್ಕೂ
ಸಾಕು.
ಆದರೆ
ನಾವಿಲ್ಲಿ
ಕೊಟ್ಟಿರುವ
5
ದುಷ್ಪರಿಣಾಮಗಳನ್ನು
ಓದಿಯೂ,
ನೊಡಿಯೂ
ನೀವು
ಧೂಮಪಾನ
ವ್ಯಸನ
ಬಿಡದಿದ್ದರೆ
ನಮ್ಮ
ಈ
ಪ್ರಯತ್ನ
ವ್ಯರ್ಥ,
No
Problem!

id="toptextpromo">
id='are-slot-1'
class='oiad
oi-axt
oiadv'>

ಸಿಗರೇಟ್

ಚಟ
ಚಟ್ಟಕ್ಕೇರಿಸದೆ
ಇರದು.
ಹೆಚ್ಚಿನವರು
ಸಿಗರೇಟ್
ಅಭ್ಯಾಸವನ್ನು
ಹದಿಹರಯದಲ್ಲೇ
ಸಹವಾಸ
ದೋಷದಿಂದ
ಕಲಿಯುತ್ತಾರೆ.
ಸಿಗರೇಟ್
ಸೇದುವ
ಅಭ್ಯಾಸ
ಆರೋಗ್ಯಕ್ಕೆ
ಹಾನಿಕಾರಕ
ಎಂಬುದು
ತಲೆತಲಾಂತರದಿಂದಲೂ
ದೃಢಪಟ್ಟಿದೆ.

id='are-slot-2'
class='oiad
oi-axt
oiadv'>

ಸಿಗರೇಟ್

ಚಟ
ದೇಹದ
ಶಕ್ತಿಯನ್ನೇ
ಹೀರಿಬಿಡುತ್ತದೆ.
ಸಿಗರೇಟಿನಲ್ಲಿ
ತಂಬಾಕು
ಇರುವುದರಿಂದ
ಅದುವೇ
ಆರೋಗ್ಯಕ್ಕೆ
ಹಾನಿಕಾರಕ
ಎಂಬುದು
ಹೆಚ್ಚಿನವರಿಗೆ
ಗೊತ್ತಿರುವ
ವಿಷಯ.
ಆದರೆ
ಬರೀ
ತಂಬಾಕು
ಅಷ್ಟೇ
ಅಲ್ಲದೆ
ಅದರಲ್ಲಿ
ಕೆಲವಾರು
ರಾಸಾಯನಿಕಗಳೂ
ಇವೆ.
ತಂಬಾಕಿಗಿಂತಲೂ
ಹಾನಿಕಾರಕವಾದ
ಆ
ರಾಸಾಯನಿಕಗಳ
ಬಗ್ಗೆ
ಒಂದಿಷ್ಟು
ಮಾಹಿತಿ:
ಕೀಟನಾಶಕ ಬೆಂಜಿನ್ (Benzene)

ಕೀಟನಾಶಕ ಬೆಂಜಿನ್ (Benzene)

ಈ ಅಂಶ ಸಿಗರೇಟಿನಲ್ಲಿ ಅಧಿಕವಾಗಿ ಕಂಡುಬರುತ್ತದೆ. ಈ ರಾಸಾಯನಿಕವನ್ನು ಕೀಟನಾಶಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ! ಒಮ್ಮೆ ಯೋಚಿಸಿ ನೋಡಿ... ಸಿಗರೇಟ್ ಸೇದುವಾಗ ಈ ರಾಸಾಯನಿಕವು ದೇಹವನ್ನು ಸೇರುತ್ತದೆ. ಆಗ ಅದು ದೇಹದ ಆರೋಗ್ಯದ ಮೇಲೆ ಬೀರುವ ಪರಿಣಾಮ ಏನೆಂಬುದನ್ನು ಸೇದುವವರೇ ಹೇಳಬೇಕು.

ವಿಷಕಾರಿ ಅನಿಲ ಕಾರ್ಬನ್ ಮಾನಾಕ್ಸೈಡ್ ( Carbon Monoxide)

ವಿಷಕಾರಿ ಅನಿಲ ಕಾರ್ಬನ್ ಮಾನಾಕ್ಸೈಡ್ ( Carbon Monoxide)

ಇದು ತುಂಬಾ ವಿಷಕಾರಿ ಅನಿಲ. ಕಿಟಕಿ, ಬಾಗಿಲುಗಳನ್ನು ಮುಚ್ಚಿದ ಒಂದು ರೂಮಿನಲ್ಲಿ ಕಾರ್ಬನ್ ಮಾನೋಕ್ಸೈಡ್ ಅನಿಲವನ್ನು ತುಂಬಿ, ಅದರಲ್ಲಿ 5 ನಿಮಿಷ ನಿಂತರೆ ಸಾಕು. ಆ ವ್ಯಕ್ತಿ ಉಸಿರುಗಟ್ಟಿ ಸತ್ತೇ ಹೋಗುತ್ತಾನೆ! ಅಂತಹ ವಿಷಕಾರಿ ಅನಿಲವನನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಳ್ಳುತ್ತಾ ಬಂದರೆ 10 ವರ್ಷಗಳ ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡು ದೇಹದ ಸ್ಥಿತಿ ಗಂಭಿರವಾಗುತ್ತದೆ.

ಶವ ಸಂರಕ್ಷಣೆಗೆ ಫಾರ್ಮಾಲ್ಡಿಹೈಡ್ (Formaldehyde)

ಶವ ಸಂರಕ್ಷಣೆಗೆ ಫಾರ್ಮಾಲ್ಡಿಹೈಡ್ (Formaldehyde)

ಈ ವಿಷಕಾರಕ ರಾಸಾಯನಿಕವು ಇಂಧನವನ್ನು ಉರಿಸುವಾಗ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ ಯಾವುದೇ ವಾಸನೆಯಾಗಲಿ/ಬಣ್ಣವಾಗಲಿ ಹೊಂದಿರುವುದಿಲ್ಲ. ಇದನ್ನು ಶವ ಕೆಡದಂತೆ ಸಂಗ್ರಹಿಸಲು ಬಳಸುತ್ತಾರೆ! ಇದು ನೇರವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ಸಿಗರೇಟ್ ಸೇದಿದಾಗ ಕಣ್ಣು, ಗಂಟಲಿನಲ್ಲಿ ಉರಿ ಕಂಡು ಬರಲು ಕಾರಣವಾಗುತ್ತದೆ.

ಬ್ಯಾಟರಿ ತಯಾರಿಕೆಗೆ ಕ್ಯಾಡ್ಮಿಯಮ್ (Cadmium)

ಬ್ಯಾಟರಿ ತಯಾರಿಕೆಗೆ ಕ್ಯಾಡ್ಮಿಯಮ್ (Cadmium)

ಇದನ್ನು ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುತ್ತದೆ! ಸಿಗರೇಟ್ ಸೇದಿದಾಗ ಸ್ವಲ್ಪಸ್ವಲ್ಪವಾಗಿ ಕ್ಯಾಡ್ಮಿಯಮ್ ರಕ್ತದಲ್ಲಿ ಸೇರಿಕೊಂಡು ಶ್ವಾಸಕೋಶ ಮತ್ತು ಹೃದಯದ ಆರೋಗ್ಯವನ್ನು ಹಾಳುಮಾಡಿಬಿಡುತ್ತದೆ.

ಇಲಿ ಪಾಷಾಣ ಆರ್ಸೆನಿಕ್ (Arsenic)

ಇಲಿ ಪಾಷಾಣ ಆರ್ಸೆನಿಕ್ (Arsenic)

ಈ ರಾಸಾಯನಿಕವನ್ನು ಇಲಿಗಳನ್ನು ಕೊಲ್ಲಲು ಉಪಯೋಗಿಸುತ್ತಾರೆ! ಸಿಗರೇಟ್ ಸೇದುವುದರಿಂದ ಇಲಿ ಪಾಷಾಣ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕವು ದೇಹವನ್ನು ಸೇರುತ್ತದೆ. ಇವುಗಳಲ್ಲದೆ ಅಣು ತ್ಯಾಜ್ಯದಲ್ಲಿ ಕಂಡುಬರುವ Polonium, ನಿಕೋಟಿನ್ ಮುಂತಾದ ನೂರಾರು ಮಾರಣಾಂತಿಕ ರಾಸಾಯನಿಕಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+