ಪ್ರೀತಂ ಪುತ್ರನ ಹತ್ಯೆ: ಖ್ಯಾತ ನಟಿಯ ಸಂಬಂಧ ಕಾರಣ

65 ವರ್ಷದ ನವರಾಜ್ ಕವಾತ್ರ ಅವರನ್ನು ಮೊನ್ನೆ ಶುಕ್ರವಾರ (ಸೆ.14 ) ಮುಂಬೈನ ಬೊರಿವಿಲ್ಲಿಯಲ್ಲಿರುವ ಎಲ್ಲೈಸಿ ಕಾಲನಿಯಲ್ಲಿದ್ದ ಅವರದೇ ಕಚೇರಿಯಲ್ಲಿ ಹಾಡಹಗಲೇ ಹತ್ಯೆ ಮಾಡಲಾಗಿತ್ತು. 'ಕಾಣಿಕೆ' ನೀಡುವ ನೆಪದಲ್ಲಿ ಕಚೇರಿಗೆ ಬಂದಿದ್ದ ಇಬ್ಬರು ಆಗುಂತಕರು ನವರಾಜ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಅನುಮಾನಾಸ್ಪದವಾಗಿ ಸ್ಥಳದಿಂದ ಓಡಿಹೋಗುತ್ತಿದ್ದ ದುಷ್ಕರ್ಮಿಗಳನ್ನು ಕಂಡ ನೆರೆಹೊರೆಯವರು ತಕ್ಷಣ ನವರಾಜ್ ಕಚೇರಿಗೆ ಬಂದು ನೋಡಿದಾಗ ಅಲ್ಲಿ ಅವರು ಸತ್ತು ಬಿದ್ದಿದ್ದರು.
ವಿಚಾರಣೆಗೆ ಬಂದ ಪೊಲೀಸರು ಸ್ಥಳದಲ್ಲಿ ಕಾಂಡೋಮ್, ವಯಾಗ್ರ, ಅಶ್ಲೀಲ ಫೋಟೋ, ವಿಡಿಯೋಗಳನ್ನು ವಶಪಡಿಸಿಕೊಂಡಿದ್ದರು. ಅಶ್ಲೀಲ ಫೋಟೋ, ವಿಡಿಯೋಗಳಲ್ಲಿ ಖ್ಯಾತ ಬಾಲಿವುಡ್ ನಟಿಯೊಬ್ಬಳು ಗಾಢವಾಗಿ ಕಾಣಿಸಿಕೊಂಡಿದ್ದಳು. ಪೊಲೀಸರು ಈಗ ಆ ನಟಿಯ ಬೆನ್ನುಹತ್ತಿದ್ದಾರೆ.
ಬಹುಶಃ ನವರಾಜ್ ಅವರಿಂದ ಶೋಷಣೆಗೊಳಗಾದ ಮಹಿಳೆ ಬಾಡಿಗೆ ಹಂತಕರನ್ನು ಬಿಟ್ಟು ನವರಾಜ್ ಅವರನ್ನು ಹತ್ಯೆ ಮಾಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಛಾಯಾಗ್ರಾಹಕರಾಗಿದ್ದ ನವರಾಜ್ ಕೆಲವು ಫೋಟೋಗಳನ್ನು ತಿರುಚಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿದೆ.
ಹಾಗಾಗಿ, ಸದರಿ ಬಾಲಿವುಡ್ ನಟಿ ಸೇರಿದಂತೆ ನವರಾಜ್ ಕಚೇರಿಯಲ್ಲಿ ಮಹಜರು ಮಾಡುವಾಗ ದೊರೆತ ಫೋಟೋಗಳಲ್ಲಿದ್ದ ಎಲ್ಲ ಮಹಿಳೆಯರನ್ನೂ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಈ ಮಧ್ಯೆ, ನವರಾಜ್ ಅವರ ಪತ್ನಿ ಮತ್ತು ಪುತ್ರಿಯನ್ನೂ ವಿಚಾರಣೆ ನಡೆಸಲಾಗಿ, ಅವರಿಬ್ಬರೂ ನವರಾಜ್ ಕಚೇರಿಯಲ್ಲಿ ದೊರೆತ ಅಶ್ಲೀಲ ಫೋಟೋ, ವಿಡಿಯೋ, ಕಾಂಡೋಮ್, ವಯಾಗ್ರಗಳ ಬಗ್ಗೆ ತಮಗೇನೂ ತಿಳಿದು ಎಂದಿದ್ದಾರೆ. ಹತ್ಯೆ ನಡೆದ ದಿನ ತಾನು ದೆಹಲಿಯಲ್ಲಿದ್ದೆ ಎಂದು ನವರಾಜ್ ಅವರ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು, ನವರಾಜ್ ಅವರ ಪುತ್ರಿ, ಕಾಂಡಿವ್ಳಿಯಲ್ಲಿ ತನ್ನ ಪತ್ನಿಯ ಜತೆಗಿದ್ದೆ ಎಂದು ತಿಳಿಸಿದ್ದಾರೆ. ಆಶ್ಚರ್ಯವೆಂದರೆ ಅಮ್ಮ ಮತ್ತು ಮಗಳಿಬ್ಬರೂ ತಾವೆಂದು ಅಪ್ಪನ ಕಚೇರಿಗೆ ಖುದ್ದಾಗಿ ಭೇಟಿ ನೀಡಿರಲಿಲ್ಲ ಎಂದಿದ್ದಾರೆ.
ಸ್ಥಳದಲ್ಲಿ ಸಿಸಿಟಿವಿಯಲ್ಲಿ ಲಭ್ಯವಾಗಿರುವ ಹಳೆಯ ದೃಶ್ಯಾವಳಿಗಳಲ್ಲಿ ಪುರುಷನೊಬ್ಬ ಮಹಿಳೆಯ ಜತೆ ನಗ್ನವಾಗಿ ನೃತ್ಯ ಮಾಡುತ್ತಿರುವುದು ಪತ್ತೆಯಾಗಿದೆ. ಒಟ್ಟಿನಲ್ಲಿ, ಛಾಯಾಗ್ರಾಹಕ ನವರಾಜ್ ಕವಾತ್ರ ಅವರ ಹತ್ಯೆ ಅನೇಕ ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications