ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸ ದ್ರೋಹ: ಅಹಮದ್ ಪಟೇಲ್ ಬಾಲ ಕಟ್

By Balaraj
|
Google Oneindia Kannada News

Ahmed Patel cut to size
ನವದೆಹಲಿ, ಸೆ 16: ತನ್ನ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಬಳಿ ಚರ್ಚಿಸದೇ ಸೋನಿಯಾ ಗಾಂಧಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಪಟೇಲ್ ಅವರ ಆದೇಶ ಒಂದೇ ಸೋನಿಯಾ ಅವರ ಆದೇಶ ಒಂದೇ ಎನ್ನುವ ಮಟ್ಟಿಗೆ ಸೋನಿಯಾ ಅವರ ಮೇಲೆ ನಂಬಿಕೆ ವಿಶ್ವಾಸವಿಟ್ಟಿದ್ದರು.

ಆದರೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಅಹಮದ್ ಪಟೇಲ್ ಸದ್ದಿಲ್ಲದೇ ತೆರೆಮೆರೆಗೆ ಸರಿದಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಪಟ್ಟ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಕೋರ್ ಕಮಿಟಿಯಲ್ಲೂ ಅಹಮದ್ ಪಟೇಲ್ ಸ್ಥಾನ ವಂಚಿತರಾಗಿದ್ದಾರೆ.

ಇದಕ್ಕೆಲ್ಲಾ ಕಾರಣ, ಲಕ್ಷ ಕೋಟಿ ರೂಪಾಯಿಗಿಂತಲೂ ಮಿಗಿಲಾದ ಕೋಲ್ ಗೇಟ್ ಹಗರಣ. ಕಲ್ಲಿದ್ದಲು ಘಟಕ ಹಂಚಿಕೆಯಲ್ಲಿ ನನ್ನ ಪಾತ್ರವೇನೂ ಇಲ್ಲ.ಎಲ್ಲಾ ನಿಮ್ಮ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಶಿಫಾರಸಿನ ಮೇರೆ ಘಟಕ ಹಂಚಿಕೆ ಮಾಡಲಾಗಿದೆ ಎಂದು ಯಾವಾಗ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ದೂರು ನೀಡಿದರೋ ಅಂದಿನಿಂದ ತನ್ನ ಪರಮಾಪ್ತ ಪಟೇಲರನ್ನು ಸೋನಿಯಾ ದೂರು ಸರಿಸಿಬಿಟ್ಟಿದ್ದಾರೆ.

2000 ಇಸವಿಯಿಂದ ಸೋನಿಯಾ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದ ಪಟೇಲ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ ತಪ್ಪಿಗಾಗಿ ಗಾಂಧಿ ಕುಟುಂಬದ ಆಪ್ತ ವಲಯದಿಂದ ಗೇಟ್ ಪಾಸ್ ಪಡೆದಿದ್ದಾರೆ ಎಂದು ಮುಂಬೈ ಮಿರರ್ ಮತ್ತು ಪುಣೆ ಮಿರರ್ ಪತ್ರಿಕೆ ವರದಿ ಮಾಡಿದೆ.

ದೇಶವನ್ನು ಬೆಚ್ಚಿ ಬೀಳಿಸಿದ ಈ ಕಲ್ಲಿದ್ದಲು ಹಗರಣದಿಂದ ಯುಪಿಎ ಮೈತ್ರಿಕೂಟದ ಸದಸ್ಯರೂ, ವಿರೋಧ ಪಕ್ಷಗಳೂ ಪ್ರಧಾನಿ ಕಾರ್ಯಾಲಯವನ್ನು ನೇರವಾಗಿ ಬೊಟ್ಟು ಮಾಡಿದ್ದವು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಪ್ರಧಾನಿ ತನ್ನ ಅಧಿನಾಯಕಿ ಸೋನಿಯಾ ಬಳಿ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರೆನ್ನಲಾಗಿದೆ.

ಅಹಮದ್ ಪಟೇಲ್ ಅವರ ಶಿಫಾರಸಿಗೆ ಅನುಗುಣವಾಗಿ ತನ್ನ ಇಲಾಖೆಯ ಕಾರ್ಯದರ್ಶಿ ಘಟಕ ಹಂಚಿಕೆಗೆ ಮುಂದಾದರು ಎಂದು ಸೋನಿಯಾಗೆ ಮನವರಿಕೆ ಮಾಡಿದ ಪ್ರಧಾನಿ ಈ ಹಗರಣವನ್ನು ನೇರವಾಗಿ ಪಕ್ಷದ ತಲೆಗೆ ಕಟ್ಟಿದ್ದಾರೆ.

ಸದಾ ಮೌನವೇ ಉತ್ತರವೆನ್ನುತ್ತಿದ್ದ ಪ್ರಧಾನಿಯವರ ಈ ನಡೆಯನ್ನು ನಿರೀಕ್ಷಿಸದ ಅಹಮದ್ ಪಟೇಲ್ ತಬ್ಬಿಬ್ಬಾಗಿರುವುದುದಂತೂ ಸತ್ಯ.

ಅದಕ್ಕಿಂತಲೂ ಮಿಗಿಲಾಗಿ ಈ ಭಾರೀ ಹಗರಣದಿಂದ ದೇಶದ ಜನತೆ ತಬ್ಬಿಬ್ಬಾಗಿರುವುದು ಅದಕ್ಕಿಂತ ದೊಡ್ಡ ಸತ್ಯ.. ಸತ್ಯ.. ಸತ್ಯ..

English summary
Sources said, Sonia Gandhi's all-powerful political secy Ahmed Patel cut to size after PM’s revelation last fortnight on Coal Gate scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X