• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೈವ್ : ಶುಕ್ರವಾರ ಕೂಡಾ ಮುಷ್ಕರ ಎಚ್ಚರ!

By Mahesh
|
ಬೆಂಗಳೂರು, ಸೆ.13: ಸರ್ಕಾರ ಇನ್ನೂ ಮಾತುಕತೆಗೆ ಮುಂದಾಗದ ಹಿನ್ನೆಲೆಯಲ್ಲಿ ಶುಕ್ರವಾರ(ಸೆ.14) ಕೂಡಾ ಮುಷ್ಕರ
ಮುಂದುವರೆಯಲಿದೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಉಪೇಂದ್ರಾಚಾರ್ ಹೇಳಿಕೆ ನೀಡಿದ್ದಾರೆ.

ಎಸ್ಮಾ ಜಾರಿಯಾದರು ಹೆದರುವುದಿಲ್ಲ. ಗುರುವಾರದ ಬಂದ್ ಶೇ 85 ರಷ್ಟು ಯಶಸ್ವಿಯಾಗಿದೆ. ಸರ್ಕಾರ ತನ್ನ ಹಠವನ್ನು ಮುಂದುವರೆಸಿದರೆ ನಾಳೆ ಕೂಡಾ ಬಂದ್ ಮುಂದುವರೆಸಲಾಗುತ್ತದೆ ಎಂದು ಅನಂತ ಸುಬ್ಬರಾವ್ ಎಚ್ಚರಿಕೆ ನೀಡಿದ್ದಾರೆ.

ಪ್ರಯಾಣಿಕರ ಪರದಾಟ ಎಲ್ಲೆಡೆ ಮುಂದುವರೆದಿದೆ. ಬೇಡಿಕೆಗೆ ಈಡೇರಿಸಿದರೆ 1 ಗಂಟೆಯಲ್ಲೇ ಮುಷ್ಕರ ವಾಪಸ್ ಎಂದು ನೌಕರರು ಹೇಳಿಕೆ ನೀಡಿದ್ದಾರೆ. ಆಟೋರಿಕ್ಷಾಗಳು ಭರ್ಜರಿಯಾಗಿ ಹಣ ಮಾಡುತ್ತಿದೆ.ಕಿಡಿಗೇಡಿಗಳು ಟೈರ್ ಪಂಕ್ಚರ್ ಮಾಡುವುದು, ಕಲ್ಲು ತೂರಾಟ ಮಾಡುವುದು ಮುಂದುವರೆದಿದೆ.

ಸಂಜೆ ತನಕ ಅಸಮಗ್ರ ವರದಿ:
* ರಾಜ್ಯಾದ್ಯಂತ ಒಟ್ಟು 56 ಬಸ್ ಗಳ ಮೇಲೆ ಕಲ್ಲು ತೂರಾಟಾ
* ಶುಕ್ರವಾರ(ಸೆ.14) ಕೂಡಾ ಮುಷ್ಕರ ಮುಂದುವರೆಯಲಿದೆಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಉಪೇಂದ್ರಾಚಾರ್ ಹೇಳಿಕೆ
* ಪೊಲೀಸ್ ಇಲಾಖೆಯಿಂದ ಬೆಂಗಳೂರು ನಗರದಲ್ಲಿ ತುರ್ತು ಬಸ್ ವ್ಯವಸ್ಥೆ
* ಉಚಿತ ತುರ್ತು ಸಾರಿಗೆ ಶಿವಾಜಿನಗರದಿಂದ 6 ಭಾಗಗಳಿಗೆ, ಕೆಂಪೇಗೌಡ ಬಸ್ ನಿಲ್ದಾಣದಿಂದ 6 ಕಡೆಗೆ, ಕೆಆರ್

ಮಾರುಕಟ್ಟೆಯಿಂದ 7 ಕಡೆಗೆ ಉಚಿತ ಬಸ್ ವ್ಯವಸ್ಥೆ
* ಬೀದರ್ ನ ಹುಮ್ನಾನಾದ್ ನಲ್ಲಿ 8 ಸಾರಿಗೆ ಸಂಸ್ಥೆ ನೌಕರರ ಬಂಧನ

ಸಮಯ: 2.30:
* ಎಸ್ಮಾ ಜಾರಿಯಾದರು ಹೆದರುವುದಿಲ್ಲ, ಬೇಡಿಕೆ ಈಡೇರುವವರೆಗೂ ಹೋರಾಟ: ನೌಕರರು
* ಮುಷ್ಕರದ ಲಾಭ ಪಡೆಯುತ್ತಿರುವ ಖಾಸಗಿ ಬಸ್ ಗಳು ದುಬಾರಿ ಬೆಲೆ ತೆತ್ತು ಸುಸ್ತಾದ ಪ್ರಯಾಣಿಕರು
* ಮೆಜೆಸ್ಟಿಕ್ ನಿಂದ ಕೆಆರ್ ಪುರಂಗೆ 50 ರುಪಾಯಿ, ಆಟೋದಲ್ಲಿ ನೂರಾರು ರುಪಾಯಿ
* ಸಚಿವ ಅಶೋಕ್ ಕೊಟ್ಟ ಗಣೇಶ ಹಬ್ಬದ ಗಿಫ್ಟ್ ಆಫರ್ ವಾಪಸ್ ಮಾಡಿದ ನೌಕರರು

ಸಮಯ 1.15:
* ವಿಜಯಪುರ-ಚಿಕ್ಕಬಳ್ಳಾಪುರ ಮಾರ್ಗದ ಬಸ್ ಮೇಲೆ ಕಲ್ಲು ತೂರಾಟ
* ಸಾರಿಗೆ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ
* ಎಸ್ಮಾಗೆ ಹೆದರುವುದಿಲ್ಲ, ಮುಷ್ಕರ ಮುಂದುವರೆಯಲಿದೆ: ನೌಕರರ ಸಂಘಟನೆ
* ಹಾವೇರಿ ನಗರದ ಐಬಿ ಬಳಿ ಬಸ್ ಗೆ ಕಲ್ಲು ತೂರಾಟ, ನಿರ್ವಾಹಕ ಮೆಹಬೂಬ್ ಖಾನ್ ಸೆರೆ
* ಬೆಂಗಳೂರು ಕಲ್ಯಾಣನಗರ ಡಿಪೋ ನೌಕರರಿಗೆ ದಿಗ್ಬಂಧನ, ಬಸ್ ತೆಗೆಯುವಂತೆ ಮೇಲಧಿಕಾರಿ ದಬ್ಬಾಳಿಕೆ

ಸಮಯ 12.15:
* ಸಾರಿಗೆ ಸಚಿವ ಅಶೋಕ್ ಅವರಿಂದ ಅರಿಯರ್ಸ್, ವೇತನ ಹೆಚ್ಚಳ ಘೋಷಣೆ
* ಬಳ್ಳಾರಿಯಲ್ಲಿ 5 ಬಸ್ ಗಳ ಮೇಲೆ ಕಲ್ಲು ತೂರಾಟ
* ಬೆಂಗಳೂರಿನ ಕೂಡ್ಲುಗೇಟ್ ಬಳಿ ಬಸ್ ಗೆ ಕಲ್ಲು ಎಸೆತ, ಚಾಲಕ ಮಂಜುನಾಥ್ ಕಣ್ಣಿಗೆ ಗಾಯ
* ಮೆಜೆಸ್ಟಿಕ್ ನಿಂದ ಪ್ರತಿದಿನ ಒಟ್ಟು 80 ಸಾವಿರ ಟ್ರಿಪ್ , 6120 ಬಸ್ ಸಂಚಾರ ವಾಗುತ್ತಿತ್ತು
* 10 ಮಾರ್ಕೊ ಪೊಲೊ, 10 ಸಾಮಾನ್ಯ, 30 ವೋಲ್ವೋ ಬಸ್ ಸೇರಿ ಒಟ್ಟು 140 ಬಸ್ ಶೀಘ್ರ ರಸ್ತೆಗೆ : ಸಾರಿಗೆ ಅಧಿಕಾರಿಗಳು

*ಸಮಯ 11.00:

* ಬೆಂಗಳೂರು: ಬೂದಿಗೆರೆ, ಟಿಸಿ ಪಾಳ್ಯ, ಇಂದಿರಾನಗರ ಒಟ್ಟು 5 ಬಿಎಂಟಿಸಿ ಬಸ್ 1 ಕೆಎಸ್ಸಾರ್ಟಿಸಿ ಬಸ್ ಮೇಲೆ ಕಲ್ಲುತೂರಾಟ
* ತುಮಕೂರಿನಲ್ಲಿ ಬಂಧಿತ ನೌಕರರ ಬಿಡುಗಡೆಗೆ ಆಗ್ರಹ. ನಿನ್ನೆ 9 ಜನರನ್ನು ಬಂಧಿಸಲಾಗಿತ್ತು.
* ತುಮಕೂರಿನಲ್ಲಿ 210ಪೈಕಿ 50 ಬಸ್ ಸಂಚಾರ
* ಚಿಕ್ಕೋಡಿ ವಿಭಾಗದ 427 ಬಸ್ ಗಳ ಸಂಚಾರ ಸ್ಥಗಿತ


ಸಮಯ 10.30:
* ಪಶ್ಚಿಮ ವಿಭಾಗದ ಪೊಲೀಸರಿಂದ 13 ಜನ ಚಾಲಕ, ನಿರ್ವಾಹಕರ ಬಂಧನ
* ಮಂಡ್ಯ ಜಿಲ್ಲೆಯಲ್ಲೂ ಬಸ್ ಸಂಚಾರ ಸಂಪೂರ್ಣ ಸ್ಥಗಿತ
* ಆನೇಕಲ್, ಚಂದಾಪುರದಲ್ಲಿ ಬಸ್ ಮೇಲೆ ಕಲ್ಲು ತೂರಾಟ
* ಹೊಸೂರು ರಸ್ತೆ ಗಾರ್ಮೆಂಟ್ಸ್ ನಲ್ಲಿ ಸಿಬ್ಬಂದಿ ಕೊರತೆ

ಸಮಯ 10.00:
* ಚಿಕ್ಕಮಗಳೂರಿನಲ್ಲಿ 250 ಸಿಬ್ಬಂದಿ ಬಂಧನ, ಓರ್ವ ನೌಕರ ಅಸ್ವಸ್ಥ
* ಚಿಕ್ಕಮಗಳೂರಿನ ಮೂಡಿಗೆರೆ,ಕಡೂರು, ಶೃಂಗೇರಿ ಬಸ್ ಸಂಚಾರಕ್ಕೆ ಅಡ್ಡಿ ಪೊಲೀಸರು, ನೌಕರರ ನಡುವೆ ಜಟಾಪಟಿ
* ಚಿಕ್ಕಮಗಳೂರಿನ ಬೋಳರಾಮೇಶ್ವರ ದೇಗುಲದ ಸಮೀಪ ರಸ್ತೆ ತಡೆ. ಪ್ರತಿಭಟನೆ ವೇಳೆ ಚಾಲಕ ಸುರೇಶ್ ಅಸ್ವಸ್ಥ.
* ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಮುಖಂಡ ದಿವಾಕರ್ ಬಾಬು ಸೇರಿ 25 ಜನರ ಬಂಧನ
* ಗದಗ ಜಿಲ್ಲೆ ಲಕ್ಷ್ಮೇಶ್ವರ, ಮುಂಡುಗೋಡದಲ್ಲಿ ಸಂಪೂರ್ಣ ಬಂದ್ ಆಚರಣೆ. [ಸಾರಿಗೆ ನೌಕರರ ಸಂಖ್ಯೆ ಎಷ್ಟಿದೆ ಗೊತ್ತಾ?]
* ಗದಗಿನ ಮುಳುಗುಂದನಾಕಾದಲ್ಲಿ ಪ್ರತಿಭಟನಾ ನಿರತ 11 ಕಾರ್ಮಿಕ ಮುಖಂಡರ ಬಂಧನ.
* ಬೆಂಗಳೂರು- ಮದನಪಲ್ಲಿ, ಬೀದರ್ ನಲ್ಲಿ ಬಸ್ ಗಳ ಟೈರ್ ಗಾಳಿ ತೆಗೆದ ದುಷ್ಕರ್ಮಿಗಳು
* ಹುಬ್ಬಳ್ಳಿ-ದಾವಣಗೆರೆಯಲ್ಲಿ ಬಸ್ ಗಳ ಸಂಚಾರ ಅಸ್ತವ್ಯಸ್ಥ


ಸಮಯ: 9.30:
* ಚಿಕ್ಕಬಳ್ಳಾಪುರ ಚಂಡೂರು ಬಳಿ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು.
* ಚಿಕ್ಕಮಗಳೂರಿನಲ್ಲೂ ಬಸ್ ಸಂಚಾರ ಸಂಪೂರ್ಣ ಸ್ಥಗಿತ.
* ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನೌಕರರ ಪ್ರತಿಭಟನೆ, 100 ಜನರ ಬಂಧನ
* ರಾಯಚೂರಿನಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ
* ಬೆಳಗಾವಿಯ ಚಿಕ್ಕೋಡಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ
* ಮುಷ್ಕರದ ಬಿಸಿ ಗ್ರಾಮೀಣ ಭಾಗದ ಜನರಿಗೆ ತೀವ್ರವಾಗಿ ತಟ್ಟಿದೆ.
* ಗುಲ್ಬರ್ಗಾದಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಡ್ರೈವರ್, ಕಂಡೆಕ್ಟರ್ ಮೇಲೆ ಹಲ್ಲೆ, ಬಸ್ ಗಾಜು ಪುಡಿ ಪುಡಿ
* ಗುಲ್ಬರ್ಗಾದ ಚಿಂಚೋಳಿಯಲ್ಲಿ ನಾಲ್ಕು ಬಸ್ ಗಳ ಮೇಲೆ ಕಲ್ಲು ತೂರಾಟ.

ಸಮಯ: 9.05:
* ಬೆಂಗಳೂರಿನ ಶಾಂತಿನಗರದಿಂದ ಬಸ್ ಸಂಚಾರ ಆರಂಭ
* ಮೆಜೆಸ್ಟಿಕ್ ನಿಂದ 15 ವೋಲ್ವೋ ಬಸ್ ಸಂಚರಿಸುತ್ತಿದೆ.
* ಪ್ರತಿ ಬಸ್ ಜೊತೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆ : ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿಕೆ
* ಕಾಡುಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ, ಕೋರಮಂಗಲ ಕಡೆ ಬಸ್ ಸಂಚಾರ
* ವೋಲ್ವೋ ಬಸ್ ಸಂಚಾರಕ್ಕೆ ಪ್ರಯಾಣಿಕರ ಆಕ್ರೋಶ, ದುಬಾರಿ ಟಿಕೆಟ್ ಬೆಲೆ ಕೊಡೋಕೆ ಆಗಲ್ಲ
* ಮುಷ್ಕರದ ಲಾಭ ಪಡೆಯುತ್ತಿರುವ ಬಿಎಂಟಿಸಿ ಸಂಸ್ಥೆ ಸಾಮಾನ್ಯ ಬಸ್ ಬದಲು ವೋಲ್ವೋ ಬಸ್ ಓಡಿಸುತ್ತಿದೆ.

* ಮಂಗಳೂರಿನ ಕನ್ಯಾಡಿಯಲ್ಲಿ 2 ಬಸ್ ಗೆ ಕಲ್ಲು ಹೊಡೆದ ಚಾಲಕ ಸುಭಾಷ್ ಚಂದ್ರ ಬಂಧನ
* ಗುಲ್ಬರ್ಗಾ ಜೇವರ್ಗಿಯಲ್ಲಿ ಎರಡು ಬಸ್ ಮೇಲೆ ಕಲ್ಲು ತೂರಾಟ
* ಹಲವೆಡೆ ಡಿಪೋಗಳಿಗೆ ವಾಪಾಸ್ಸಾಗುತ್ತಿರುವ ಬಸ್ ಗಳು.
* ಕನಕಪುರ ಶಿವನಹಳ್ಳಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ
* ಶಿವಮೊಗ್ಗದಲ್ಲೂ ಬಸ್ ಸಂಚಾರ ಕೂಡಾ ಸಂಪೂರ್ನ ಸ್ಥಗಿತ
* ಮೈಸೂರು ನಗರ ಸಾರಿಗೆ ನಿಂತಿದೆ. ಗ್ರಾಮಾಂತರ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬಂದ್ ಸುದ್ದಿಗಳುView All

English summary
Live report on KSRTC, BMTC bus bandh in Karnataka. few buses operating from Shantinagar depot, Majestic KBS Bangalore. Elsewhere, stone pelting is reported in many places

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more